Rangi Taranga Remake: ಹಿಂದಿಗೆ ರಿಮೇಕ್​ ಆಗಲಿದೆ ಕನ್ನಡದ ‘ರಂಗಿತರಂಗ’; ಬಿ-ಟೌನ್​ ಸ್ಟಾರ್​ ನಟನಿಗೆ ಅನೂಪ್​ ಭಂಡಾರಿ ನಿರ್ದೇಶನ?

Rangi Taranga | Anup Bhandari: ಖ್ಯಾತ ನಿರ್ಮಾಣ ಸಂಸ್ಥೆಯೊಂದು ‘ರಂಗಿತರಂಗ’ ​ಚಿತ್ರವನ್ನು ಹಿಂದಿಯಲ್ಲಿ ರಿಮೇಕ್​ ಮಾಡಲು ಮುಂದೆ ಬಂದಿದೆ. ಇದರಲ್ಲಿ ಅಕ್ಷಯ್​ ಕುಮಾರ್​​ ಅಥವಾ ಶಾಹಿದ್​ ಕಪೂರ್​ ಬಣ್ಣ ಹಚ್ಚುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.

Rangi Taranga Remake: ಹಿಂದಿಗೆ ರಿಮೇಕ್​ ಆಗಲಿದೆ ಕನ್ನಡದ ‘ರಂಗಿತರಂಗ’; ಬಿ-ಟೌನ್​ ಸ್ಟಾರ್​ ನಟನಿಗೆ ಅನೂಪ್​ ಭಂಡಾರಿ ನಿರ್ದೇಶನ?
ರಂಗಿತರಂಗ ಪೋಸ್ಟರ್​, ಅನೂಪ್ ಭಂಡಾರಿ
Follow us
TV9 Web
| Updated By: ಮದನ್​ ಕುಮಾರ್​

Updated on: Jul 06, 2022 | 11:23 AM

ನಿರ್ದೇಶಕ ಅನೂಪ್​ ಭಂಡಾರಿ (Anup Bhandari) ಅವರು ಸದ್ಯ ‘ವಿಕ್ರಾಂತ್​ ರೋಣ’ ಸಿನಿಮಾದ ಬಿಡುಗಡೆ ಬಗ್ಗೆ ಗಮನ ಹರಿಸಿದ್ದಾರೆ. ಅವರ ಬಗ್ಗೆ ಈಗಾಗಲೇ ಎಲ್ಲ ಕಡೆ ಟಾಕ್​ ಶುರುವಾಗಿದೆ. ಟ್ರೇಲರ್​ ನೋಡಿದ ಪರಭಾಷೆ ಮಂದಿ ಕೂಡ ಅನೂಪ್​ ಕೆಲಸಕ್ಕೆ ಭೇಷ್​ ಎನ್ನುತ್ತಿದ್ದಾರೆ. ಅಂದಹಾಗೆ, ಅನೂಪ್​ ಭಂಡಾರಿ ಅವರ ಪ್ರತಿಭೆಗೆ ಈ ಪರಿ ಮೆಚ್ಚುಗೆ ಸಿಕ್ಕಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಅವರು ‘ರಂಗಿತರಂಗ’ (Rangi Taranga) ಚಿತ್ರ ನಿರ್ದೇಶಿಸಿದಾಗಲೂ ಇದೇ ರೀತಿ ಹವಾ ಸೃಷ್ಟಿ ಆಗಿತ್ತು. ‘ಬಾಹುಬಲಿ’ ಸಿನಿಮಾದ ಎದುರು ರಿಲೀಸ್​ ಆದ ಆ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಸತತ ಒಂದು ವರ್ಷ ಪ್ರದರ್ಶನ ಕಂಡು ನಿರ್ಮಾಪಕರಿಗೆ ಲಾಭ ಮಾಡಿಕೊಟ್ಟಿತ್ತು. ಈಗ ಅದೇ ಸಿನಿಮಾ ಬಾಲಿವುಡ್​ಗೆ ರಿಮೇಕ್​ (Remake) ಆಗಲಿದೆ.

ಕನ್ನಡದಲ್ಲಿ ಸೂಪರ್​ ಹಿಟ್​ ಆಗಿದ್ದ ‘ರಂಗಿತರಂಗ’ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್​ ಮಾಡುವ ಬಗ್ಗೆ ಅನೇಕ ದಿನಗಳಿಂದಲೂ ಗುಸುಗುಸು ಕೇಳಿಬರುತ್ತಿತ್ತು. ಈಗ ಅದಕ್ಕೆ ಇನ್ನಷ್ಟು ರೆಕ್ಕೆ ಪುಕ್ಕ ಸೇರಿಕೊಂಡಿದೆ. ಬಾಲಿವುಡ್​ನ ಸ್ಟಾರ್​ ನಟರೊಬ್ಬರು ಹಿಂದಿ ರಿಮೇಕ್​ನಲ್ಲಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಅಕ್ಷಯ್​ ಕುಮಾರ್​​ ಅಥವಾ ಶಾಹಿದ್​ ಕಪೂರ್​ ಬಣ್ಣ ಹಚ್ಚುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆಯೊಂದು ‘ರಂಗಿತರಂಗ’ ಚಿತ್ರವನ್ನು ರಿಮೇಕ್​ ಮಾಡಲು ಮುಂದೆ ಬಂದಿದೆ. ಈ ಕುರಿತು ಸ್ಪಷ್ಟ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

‘ರಂಗಿತರಂಗ’ ಚಿತ್ರದಲ್ಲಿ ನಿರೂಪ್​ ಭಂಡಾರಿ ನಾಯಕನಾಗಿ ನಟಿಸಿದ್ದರು. ರಾಧಿಕಾ ನಾರಾಯಣ್​ ಹಾಗೂ ಆವಂತಿಕಾ ಶೆಟ್ಟಿ ನಾಯಕಿಯರಾಗಿದ್ದರು. ನಿರ್ದೇಶನದ ಜೊತೆ ಹಾಡುಗಳಿಗೆ ಸಂಗೀತ ಸಂಯೋಜನೆಯನ್ನೂ ಅನೂಪ್​ ಭಂಡಾರಿ ಮಾಡಿದ್ದರು. ಬಿ. ಅಜನೀಶ್​ ಲೋಕನಾಥ್​ ಅವರ ಹಿನ್ನೆಲೆ ಸಂಗೀತದಲ್ಲಿ ಚಿತ್ರದ ರೋಚಕತೆ ಹೆಚ್ಚಿತ್ತು. ವಿಲಿಯಮ್​ ಡೇವಿಡ್​ ಅವರ ಛಾಯಾಗ್ರಹಣ ಕೂಡ ಹೈಲೈಟ್​ ಆಗಿತ್ತು.

ಇದನ್ನೂ ಓದಿ
Image
‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​
Image
ಶಿವಣ್ಣ ಮಾಡಿದ್ದ ಪಾತ್ರದಲ್ಲಿ ಸಿಂಬು; ಹೇಗಿದೆ ನೋಡಿ ‘ಮಫ್ತಿ’ ಸಿನಿಮಾದ ತಮಿಳು ರಿಮೇಕ್​ ಟೀಸರ್​
Image
ಮೊಬೈಲ್​ನಲ್ಲಿ ಮುಳುಗಿದವರ ಮನೆ ಹೇಗಿರುತ್ತೆ ಅಂತ ವಿವರಿಸುವ ‘ಹೋಮ್​’ ಚಿತ್ರಕ್ಕೀಗ ರಿಮೇಕ್​ ಭಾಗ್ಯ
Image
ಹಿಂದಿಗೆ ಹೊರಟ ಕನ್ನಡದ ಸಿನಿಮಾ; ಬಾಲಿವುಡ್​ಗೆ ರಿಮೇಕ್​ ಆಗುತ್ತಿದೆ ‘ಸಂಕಷ್ಟಕರ ಗಣಪತಿ’

‘ರಂಗಿತರಂಗ’ ಚಿತ್ರಕ್ಕೆ ಕೆಲಸ ಮಾಡಿದ್ದ ಅನೂಪ್​ ಭಂಡಾರಿ, ಅಜನೀಶ್​ ಲೋಕನಾಥ್​, ವಿಲಿಯಮ್​ ಡೇವಿಡ್​ ಅವರು ಈಗ ‘ವಿಕ್ರಾಂತ್​ ರೋಣ’ ಚಿತ್ರದಲ್ಲೂ ಒಂದಾಗಿರುವುದು ವಿಶೇಷ. ತಾಂತ್ರಿಕವಾಗಿ ಅದ್ದೂರಿತನದಿಂದ ಕೂಡಿರುವ ಈ ಚಿತ್ರದ ಬಗ್ಗೆ ಕಿಚ್ಚ ಸುದೀಪ್​ ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಇದೆ. ಜುಲೈ 28ರಂದು ‘ವಿಕ್ರಾಂತ್​ ರೋಣ’ ರಿಲೀಸ್​ ಆಗಲಿದೆ.

ಇದನ್ನೂ ಓದಿ: ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

Jersey Movie: ರಿಮೇಕ್​ ಮಾಡಿ ಕೈ ಸುಟ್ಟುಕೊಂಡ ಬಳಿಕ ಶಾಹಿದ್ ಕಪೂರ್​ಗೆ ಜ್ಞಾನೋದಯ; ಸ್ಟಾರ್ ನಟ ಈಗ ಹೇಳಿದ್ದೇನು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ