‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಮೂಲಕ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ಕೊಡಲಿರುವ ನಟಿ ಪ್ರೇಮಾ

ಕಾರಣಾಂತರಗಳಿಂದ ತೆರೆಯಿಂದ ದೂರ ಉಳಿದಿದ್ದ ಪ್ರೇಮಾರನ್ನ ಸಾಕಷ್ಟು ಪಾತ್ರಗಳು ಅರಸಿ ಹೋದವು. ಈಗ ಅವರು ‘ವೆಡ್ಡಿಂಗ್ ಗಿಫ್ಟ್’ನ ಲಾಯರ್ ಪಾತ್ರವನ್ನ ಬಹು ಇಷ್ಟ ಪಟ್ಟು ನಿರ್ವಹಿಸಿದ್ದು, ಈ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ.

‘ವೆಡ್ಡಿಂಗ್ ಗಿಫ್ಟ್’ ಸಿನಿಮಾ ಮೂಲಕ ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ಕೊಡಲಿರುವ ನಟಿ ಪ್ರೇಮಾ
ವೆಡ್ಡಿಂಗ್ ಗಿಫ್ಟ್
TV9kannada Web Team

| Edited By: Rajesh Duggumane

Jul 06, 2022 | 3:41 PM

ನಟಿ ಪ್ರೇಮಾ (Actress Prema) ಅಂದಾಕ್ಷಣ ನೆನಪಾಗೋದು ಅವರ ಅಮೊಘ ಅಭಿನಯ. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಬ್ಯುಸಿಯಾಗಿದ್ದ ನಟಿ, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಸಡನ್ ಆಗಿ ಚಿತ್ರರಂಗದಿಂದ ದೂರ ಉಳಿದರು. ತೆರೆಯ ಮೇಲೆ ಮೋಡಿ ಮಾಡಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರೇಮಾ ಹಲವಾರು ವರ್ಷ ತೆರೆಮರೆಗೆ ಸರಿದದ್ದು ಅವರ ಅಭಿಮಾನಿಗಳಲ್ಲಿ ಬೇಸರ ತರಿಸಿತ್ತು. ಆದರೆ ಇಂದೋ ನಾಳೆಯೋ ಯಾವತ್ತೋ ಒಂದು ದಿನ ಮತ್ತೆ ತೆರೆಮೇಲೆ ಬಂದೇ ಬರುತ್ತಾರೆ ಎಂದು ಕಾದಿದ್ದ ಫ್ಯಾನ್ಸ್​ಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಇದೇ ಜುಲೈ 8ಕ್ಕೆ ‘ವೆಡ್ಡಿಂಗ್ ಗಿಫ್ಟ್’ ಸಿನಿಮಾ (Wedding Gift Movie) ಮೂಲಕ ರೀ ಎಂಟ್ರಿ ಕೊಟ್ಟು, ರಾಜ್ಯಾದ್ಯಂತ ತೆರೆಯ ಮೇಲೆ ‘ಬಂಪರ್ ಗಿಫ್ಟ್’ ಕೊಡಲಿದ್ದಾರೆ.

‘ವೆಡ್ಡಿಂಗ್ ಗಿಫ್ಟ್’ ಇದು ಈಗಾಗಲೇ ಚಂದನವನದಲ್ಲಿ ಸಾಕಷ್ಟು ಬಜ್ ಕ್ರಿಯೇಟ್ ಮಾಡಿರುವ ಸಿನಿಮಾ. ವಿಕ್ರಂ ಪ್ರಭು ನಿರ್ದೇಶನದೊಂದಿಗೆ, ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಚೊಚ್ಚಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಈ ಚಿತ್ರ ಈಗಾಗಲೇ ಟ್ರೈಲರ್, ಟೀಸರ್, ಹಾಡುಗಳ ಮೂಲಕ ಕಥಾ ಎಳೆಯ ಕ್ಲೂ ಕೊಟ್ಟು ಭರವಸೆ ಸೃಷ್ಟಿ ಮಾಡಿದೆ. ಪ್ರೀತಿ, ಪ್ರೇಮ, ಮದುವೆ, ಸಂಸಾರ ಇವೆಲ್ಲ ದೈವ ನಿಶ್ಚಿತ ಅಂತ ಹೇಳಿದರೂ ಆ ಸಂಬಂಧಗಳನ್ನು ಉಳಿಸಿಕೊಳ್ಳೋದು ನಮ್ಮ ಕೈಯಲ್ಲೇ ಇರತ್ತೆ ಅನ್ನೋದು ಅಷ್ಟೇ ನಿಜ.

ಇಲ್ಲಿ ಎಲ್ಲ ನ್ಯಾಯ ಅನ್ಯಾಯಗಳಿಗೂ ಕಾನೂನು ಕಾಯ್ದೆಗಳಿವೆ. ಆದರಂತೆ ಹೆಣ್ಣಿನ ರಕ್ಷಣೆಗಾಗಿ ಇರುವ ಕಾನೂನನ್ನು ಹೆಣ್ಣೊಬ್ಬಳು ದುರ್ಬಳಕೆ ಮಾಡುತ್ತಾಳೆ. ಅದರಿಂದ ತಪ್ಪೇ ಮಾಡದ ಅವಳ ಗಂಡ ತೊಂದರೆ ಎದುರಿಸುತ್ತಾನೆ. ನೈಜ ಘಟನೆಗಳನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಜಿದ್ದಿಗೆ ಬಿದ್ದ ಹೆಣ್ಣುಮಗಳೊಬ್ಬಳ ಕಾನೂನಿನ ದುರ್ಬಳಕೆ, ಹಣದ ಆಸೆ, ದುರಾಸೆ ಇವುಗಳಿಂದ ಸಾಂಸಾರಿಕ ಜೀ‌ವನದಲ್ಲಿ ಘಟಿಸಬಹುದಾದ ಏರಿಳಿತಗಳನ್ನು ಅತ್ಯಂತ ನೈಜವಾಗಿ, ಕಮರ್ಷಿಯಲ್ ಟಚ್ ಕೊಟ್ಟು, ಮನರಂಜನೆಯೊಂದಿಗೆ ಸಮಾಜಕ್ಕೊಂದು ಸಂದೇಶ ಕೊಡ ಹೊರಟಿದ್ದಾರೆ ವಿಕ್ರಂ ಪ್ರಭು. ಕಾನೂನಿನ ದುರ್ಬಳಕೆಯಿಂದ ಮಾನಸಿಕ ಮತ್ತು ದೈಹಿಕವಾಗಿ ದೌರ್ಜನ್ಯಕ್ಕೊಳಗಾದ ಆ ವ್ಯಕ್ತಿಯ ಪರ ವಾದಿಸಿ ಆತನನ್ನು ಪಾರುಮಾಡುವ ಖಡಕ್ ವಕೀಲೆಯಾಗಿ ನಟಿ ಪ್ರೇಮಾ ವೆಡ್ಡಿಂಗ್ ಗಿಫ್ಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾ ಸಾಮಾಜಿಕ ಸಂದೇಶ ಸಾರುವ ಚಿತ್ರವಾಗಿ ಹಾಗೂ ಹಲವು ಆಯಾಮಗಳ ಝಲಕ್ ನೋಡಿ ಅಭಿಮಾನಿಗಳು ಸಿನೆಮಾ ವೀಕ್ಷಣೆಗಾಗಿ ಎದುರುನೋಡ್ತಿದ್ರೆ, ಇನ್ನೂ ಕೆಲವು ಸಿನಿಪ್ರಿಯರು ತಮ್ಮ ನೆಚ್ಚಿನ ನಟಿಯ ಮರು ಆಗಮನವನ್ನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ರಿಲೀಸ್ ಆಗಿದ್ದ ಟ್ರೈಲರ್​​ನಲ್ಲಿ ಸತ್ಯದ ಪರ ವಾದ ಮಾಡುವ ವಕೀಲೆಯಾಗಿ ಪ್ರೇಮಾ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಪಾತ್ರಗಳ ಆಯ್ಕೆಯಲ್ಲಿ ಮೊದಲಿನಿಂದಲೂ ಜಾಣ್ಮೆ ತೋರಿಸಿ, ಇವರು ನಿರ್ವಹಿಸಿದ್ದ ಪಾತ್ರಗಳೆಲ್ಲವೂ ಇಂದಿಗೂ ಅಚ್ಚುಮೆಚ್ಚು.

ಕಾರಣಾಂತರಗಳಿಂದ ತೆರೆಯಿಂದ ದೂರ ಉಳಿದಿದ್ದ ಪ್ರೇಮಾರನ್ನ ಸಾಕಷ್ಟು ಪಾತ್ರಗಳು ಅರಸಿ ಹೋದವು. ಈಗ ಅವರು ‘ವೆಡ್ಡಿಂಗ್ ಗಿಫ್ಟ್’ನ ಲಾಯರ್ ಪಾತ್ರವನ್ನ ಬಹು ಇಷ್ಟ ಪಟ್ಟು ನಿರ್ವಹಿಸಿದ್ದು, ಈ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಇವರ ಅಭಿನಯವನ್ನು ತೆರೆಯ ಮೇಲೆ ನೋಡಲು ಕಾತುರರಾಗಿದ್ದಾರೆ. ಈ ಕಾಯುವಿಕೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಇದೇ ಜುಲೈ 8ರಂದು ರಾಜ್ಯಾದ್ಯಂತ ಈ ಚಿತ್ರ ರಿಲೀಸ್ ಆಗಲಿದೆ. ನಟಿ ಪ್ರೇಮಾ ಅವರು ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುವುದನ್ನು ನೋಡಬೇಕಿದೆಯಷ್ಟೆ.

ಇದನ್ನೂ ಓದಿ: ವಿಕ್ರಂ ಪ್ರಭು ನಿರ್ದೇಶನದ ‘ವೆಡ್ಡಿಂಗ್ ಗಿಫ್ಟ್’ ಕುಟುಂಬ ಕಲಹಕ್ಕೆ ಟ್ಯಾಬ್ಲೆಟ್! ಇಂಟ್ರಸ್ಟಿಂಗ್ ಆಗಿದೆ ಟೀಸರ್

ವಿಕ್ರಂ ಪ್ರಭು ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತಂದ ‘ವೆಡ್ಡಿಂಗ್ ಗಿಫ್ಟ್’

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada