ಹುಡುಗಿಗೆ ಅಮ್ಮನ ಹೆಸರಿದೆ ಎಂದು ಲವ್ ಮಾಡಿದ್ದ ರಿಷಬ್ ಶೆಟ್ಟಿ; ಇಲ್ಲಿದೆ ಅಚ್ಚರಿಯ ವಿಚಾರ

ಇತ್ತೀಚೆಗೆ ತೆರೆಗೆ ಬಂದ ರಿಷಬ್ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಮೆಚ್ಚುಗೆ ಪಡೆದುಕೊಂಡಿದೆ. ಹೀಗಾಗಿ, ಅವರ ಬರ್ತ್​​ಡೇ ಖುಷಿ ಡಬಲ್ ಆಗಿದೆ. ರಿಷಬ್ ಶೆಟ್ಟಿ ಅವರು ಈ ಮೊದಲು ತಮ್ಮ ಲವ್​ಸ್ಟೋರಿ ಬಗ್ಗೆ ಹೇಳಿಕೊಂಡಿದ್ದರು.

ಹುಡುಗಿಗೆ ಅಮ್ಮನ ಹೆಸರಿದೆ ಎಂದು ಲವ್ ಮಾಡಿದ್ದ ರಿಷಬ್ ಶೆಟ್ಟಿ; ಇಲ್ಲಿದೆ ಅಚ್ಚರಿಯ ವಿಚಾರ
ರಿಷಬ್
TV9kannada Web Team

| Edited By: Rajesh Duggumane

Jul 07, 2022 | 6:30 AM

ರಿಷಬ್ ಶೆಟ್ಟಿ (Rishab Shetty) ಅವರು ಇಂದು (ಜುಲೈ 7) 37ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ ಅವರಿಗೆ ಯಶಸ್ಸು ಸಿಕ್ಕಿದೆ. ಅವರ ಬರ್ತ್​ಡೇ ಪ್ರಯುಕ್ತ ಎಲ್ಲ ಕಡೆಗಳಿಂದಲೂ ಅವರಿಗೆ ಶುಭಾಶಯ ಬರುತ್ತಿದೆ. ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರವನ್ನು ನಿರ್ದೇಶಿಸಿ, ನಟಿಸುತ್ತಿದ್ದಾರೆ. ಈ ಚಿತ್ರದ ಕಡೆಯಿಂದ ಇಂದು ಹೊಸ ಪೋಸ್ಟರ್ ರಿಲೀಸ್ ಆಗುವ ಸಾಧ್ಯತೆ ಇದೆ. ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ (Harikathe Alla Girikathe) ಮೆಚ್ಚುಗೆ ಪಡೆದುಕೊಂಡಿದೆ. ಹೀಗಾಗಿ, ಅವರ ಬರ್ತ್​​ಡೇ (Rishab Shetty Birthday) ಖುಷಿ ಡಬಲ್ ಆಗಿದೆ. ರಿಷಬ್ ಶೆಟ್ಟಿ ಅವರು ಈ ಮೊದಲು ತಮ್ಮ ಲವ್​ಸ್ಟೋರಿ ಬಗ್ಗೆ ಹೇಳಿಕೊಂಡಿದ್ದರು.

ರಿಷಬ್ ಶೆಟ್ಟಿ ಅವರು ಕುಂದಾಪುರದವರು. ಅವರು ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಈಗ ದೊಡ್ಡ ಯಶಸ್ಸು ಕಂಡಿದ್ದಾರೆ. ಇತ್ತೀಚೆಗೆ ಅವರು ಆಡಿ ಕ್ಯೂ7 ಕಾರನ್ನು ಖರೀದಿ ಮಾಡಿದ್ದರು. ರಿಷಬ್ ಶೆಟ್ಟಿ ಅವರು ಚಿಕ್ಕ ವಯಸ್ಸಿನಲ್ಲಿ ತುಂಬಾನೇ ತರ್ಲೆ ಆಗಿದ್ದರು. ಆ್ಯಂಕರ್ ಅನುಶ್ರೀ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.

‘ನಾನು ಚಿಕ್ಕ ವಯಸ್ಸಿನಲ್ಲಿ ಸಿನಿಮಾ ನೋಡುತ್ತಿದ್ದೆ. ಅಲ್ಲಿ ಲವ್ ಬಗ್ಗೆ ಕೇಳಿದ್ದೆ. ನಮ್ಮ ಕ್ಲಾಸ್​ನಲ್ಲಿ ರತ್ನಾವತಿ ಅಂತ ಇದ್ದಳು. ನನ್ನ ಪಕ್ಕ ಕೂರುವವನ ಬಳಿ ನಾನು ರತ್ನಾವತಿನ ಲವ್ ಮಾಡ್ತೀನಿ ಅಂತ ಹೇಳಿದ್ದೆ. ಯಾಕೆ ಎಂದು ಕೇಳಿದ. ನನ್ನ ಅಮ್ಮನ ಹೆಸರೂ ಅದೇ. ಹೀಗಾಗಿ ಅವಳನ್ನು ಲವ್ ಮಾಡ್ತೀನಿ ಎಂದು ಹೇಳಿದ್ದೆ. ನಂತರ ಒಂದು ವರ್ಷ ಇದೇ ವಿಚಾರ ಇಟ್ಟುಕೊಂಡು ಆತ ಬ್ಲ್ಯಾಕ್​ಮೇಲ್ ಮಾಡಿದ್ದ’ ಎಂದು ರಿಷಬ್ ಶೆಟ್ಟಿ ಈ ಮೊದಲು ಹೇಳಿಕೊಂಡಿದ್ದರು. ರಿಷಬ್ ಶೆಟ್ಟಿ ಅವರು ಪ್ರಗತಿ ಶೆಟ್ಟಿಯನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.

ರಿಷಬ್ ಶೆಟ್ಟಿಗೆ ನಟನಾಗಿ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾ ‘ಉಳಿದವರು ಕಂಡಂತೆ’. ನಂತರ ರಕ್ಷಿತ್ ಶೆಟ್ಟಿ ನಟನೆಯ ‘ರಿಕ್ಕಿ’ ಚಿತ್ರವನ್ನು ನಿರ್ದೇಶಿಸಿದ್ದರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. 2016ರಲ್ಲಿ ‘ಕಿರಿಕ್ ಪಾರ್ಟಿ’ ನಿರ್ದೇಶಿಸಿ ಸಿಕ್ಕಾಪಟ್ಟೆ ಯಶಸ್ಸು ಪಡೆದರು. ‘ಸ.ಹಿ.ಪ್ರಾ. ಶಾಲೆ’ ಕೂಡ ಗೆಲುವು ಕಂಡಿತು. ಈಗ ‘ಕಾಂತಾರ’, ‘ರುದ್ರಪ್ರಯಾಗ’ ಹಾಗೂ ಶಿವರಾಜ್​ಕುಮಾರ್ 126ನೇ ಚಿತ್ರವನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Rishab Shetty: ‘ಹರಿಕಥೆ ಅಲ್ಲ ಗಿರಿಕಥೆ’ ರಿಲೀಸ್​ ಬಳಿಕ ಹೊಸ ಕಾರು ಖರೀದಿಸಿದ ರಿಷಬ್​ ಶೆಟ್ಟಿ; ಪತ್ನಿ ಪ್ರಗತಿ ಫುಲ್​ ಖುಷ್​

ಇದನ್ನೂ ಓದಿ

ಪ್ರಗತಿ, ರಕ್ಷಿತ್ ಹೆಸರು ಮೊಬೈಲ್​ನಲ್ಲಿ ಏನಂತ ಸೇವ್​ ಇದೆ? ರಿಷಬ್ ಶೆಟ್ಟಿ ಕೊಟ್ಟ ಉತ್ತರ ಹೀಗಿತ್ತು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada