Garuda Ram Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕೆಜಿಎಫ್​’ ಗರುಡ ರಾಮ್​’; ಬಹುಭಾಷಾ ನಟನಾಗಿ ಬೆಳೆದ ಕನ್ನಡದ ಖಡಕ್​ ವಿಲನ್​

KGF Garuda Ram | Ramachandra Raju: ಅನೇಕ ಬಿಗ್​ ಬಜೆಟ್​ ಚಿತ್ರಗಳಿಗೆ ಖಳನಟನಾಗಿ ಗರುಡ ರಾಮ್​ ಆಯ್ಕೆ ಆಗುತ್ತಿದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

Garuda Ram Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಕೆಜಿಎಫ್​’ ಗರುಡ ರಾಮ್​’; ಬಹುಭಾಷಾ ನಟನಾಗಿ ಬೆಳೆದ ಕನ್ನಡದ ಖಡಕ್​ ವಿಲನ್​
ಗರುಡ ರಾಮ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 07, 2022 | 9:46 AM

ಒಂದೇ ಒಂದು ‘ಕೆಜಿಎಫ್​’ (KGF Chapter 2) ಸಿನಿಮಾದಿಂದ ಅನೇಕರ ಬದುಕು ಬದಲಾಯಿತು. ಆ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರು ರಾತ್ರೋರಾತ್ರಿ ಜನಪ್ರಿಯತೆ ಪಡೆದರು. ಅದರಲ್ಲಿ ಕೆಲಸ ಮಾಡಿದ ತಂತ್ರಜ್ಞರು ಕೂಡ ಗಮನ ಸೆಳೆದರು. ನಾಯಕ ಯಶ್​, ನಾಯಕಿ ಶ್ರೀನಿಧಿ ಶೆಟ್ಟಿ ಮಾತ್ರವಲ್ಲದೇ ಬೇರೆ ಪಾತ್ರಧಾರಿಗಳ ವೃತ್ತಿಜೀವನಕ್ಕೂ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದಿಂದ ದೊಡ್ಡ ಮೈಲೇಜ್​ ಸಿಕ್ಕಿತು. ಆ ಪೈಕಿ ಗರುಡ ಪಾತ್ರ ಮಾಡಿದ ನಟ ರಾಮಚಂದ್ರ ರಾಜು ಸಿಕ್ಕಾಪಟ್ಟೆ ಶೈನ್​ ಆದರು. ಆ ಸಿನಿಮಾ ಬಿಡುಗಡೆ ಆದ ಬಳಿಕ ಗರುಡ ರಾಮ್​ (Garuda Ram) ಎಂದೇ ಅವರು ಫೇಮಸ್​ ಆದರು. ಇಂದು (ಜುಲೈ 7) ಅವರಿಗೆ ಜನ್ಮದಿನದ (Garuda Ram Birthday) ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಕೂಡ ಶುಭ ಕೋರುತ್ತಿದ್ದಾರೆ.

ಮೊದಲ ಸಿನಿಮಾದಲ್ಲಿಯೇ ಪ್ಯಾನ್​ ಇಂಡಿಯಾ ಮಟ್ಟದ ಯಶಸ್ಸು ಸಿಗುವುದು ಎಂದರೆ ತಮಾಷೆಯ ಮಾತಲ್ಲ. ಅದಕ್ಕೆ ಪರಿಶ್ರಮದ ಜೊತೆಗೆ ಅದೃಷ್ಟವೂ ಬೇಕು. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ 2018ರಲ್ಲಿ ತೆರೆಕಂಡಿತು. ಅದು ರಾಮಚಂದ್ರ ರಾಜು ಅವರ ಚೊಚ್ಚಲ ಸಿನಿಮಾ. ಅವರು ಮಾಡಿದ್ದ ಗರುಡ ಪಾತ್ರಕ್ಕೆ ಸಖತ್ ತೂಕ ಇತ್ತು. ತಮ್ಮ ಖಡಕ್​ ಲುಕ್​ನಿಂದ ಆ ಪಾತ್ರಕ್ಕೆ ಅವರು ಜೀವ ತುಂಬಿದರು. ಇಡೀ ನರಾಚಿಯನ್ನು ಗಡಗಡ ನಡುಗಿಸುವಂತಹ ಆ ಪಾತ್ರವನ್ನು ಅವರು ಜೀವಿಸಿದ್ದರು ಎಂದೇ ಹೇಳಬೇಕು.

‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ಗೆಲುವಿನಿಂದಾಗಿ ಗರುಡ ರಾಮ್​ ಅವರಿಗೆ ಹಲವು ಅವಕಾಶಗಳು ಹರಿದುಬರಲು ಆರಂಭಿಸಿದವು. ಪರಿಣಾಮವಾಗಿ ಅವರು ಬಹುಭಾಷಾ ನಟನಾಗಿ ಗುರುತಿಸಿಕೊಂಡರು. ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದರು. ಅನೇಕ ಬಿಗ್​ ಬಜೆಟ್​ ಚಿತ್ರಗಳಿಗೆ ಅವರು ಖಳನಟನಾಗಿ ಆಯ್ಕೆ ಆಗುತ್ತಿದ್ದಾರೆ.

ಇದನ್ನೂ ಓದಿ
Image
‘ಕೆಜಿಎಫ್​’ ಆದ್ಮೇಲೆ 30 ಸಿನಿಮಾದಲ್ಲಿ ನಟಿಸಿದ ಕೃಷ್ಣ ರಾವ್; ‘ಮುದುಕನ ಲವ್​​ಸ್ಟೋರಿ’ ಚಿತ್ರದಲ್ಲಿ ಹೀರೋ ಪಾತ್ರ
Image
‘ಕೆಜಿಎಫ್​ 3’ ಚಿತ್ರದಲ್ಲಿ ಹೃತಿಕ್​ ರೋಷನ್​ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್​
Image
1960ರಲ್ಲೇ ಪ್ಯಾನ್ ಇಂಡಿಯಾ ಸಿನಿಮಾ ಬಂದಿತ್ತು, ‘ಕೆಜಿಎಫ್​’ ಏನೂ ಹೊಸದಲ್ಲ ಎಂದ ಕಮಲ್ ಹಾಸನ್
Image
‘ಕೆಜಿಎಫ್​ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್​ನ ಕಾರ್ತಿಕ್​ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್​

ಪುರಿ ಜಗನ್ನಾಥ್​ ನಿರ್ದೇಶನ ಮಾಡುತ್ತಿರುವ ‘ಜನ ಗಣ ಮನ’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಆ ಚಿತ್ರಕ್ಕೆ ವಿಜಯ್​ ದೇವರಕೊಂಡ ಹೀರೋ. ಈ ಸಿನಿಮಾದಲ್ಲಿ ಗರುಡ ರಾಮ್​ ಕೂಡ ನಟಿಸುತ್ತಿದ್ದಾರೆ. ‘ಕೆಜಿಎಫ್​’ ರೀತಿಯೇ ‘ಜನ ಗಣ ಮನ’ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಆ ಚಿತ್ರದ ಮೂಲಕ ಮತ್ತೆ ಗರುಡ ರಾಮ್​ ಅಬ್ಬರಿಸಲಿ, ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಇದನ್ನೂ ಓದಿ: 10 ತಲೆ ಹೊತ್ತು ಬಂದ ‘ನ್ಯಾನೋ ನಾರಾಯಣಪ್ಪ’; ಹೀರೋ ಆದ ‘ಕೆಜಿಎಫ್​’ ತಾತನ ಫಸ್ಟ್​ ಲುಕ್​ ಇಲ್ಲಿದೆ

‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ