AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸಿನಿಮಾದಲ್ಲಿ ರಿಷಬ್​ ಶೆಟ್ಟಿ; ಸೆನ್ಸೇಷನ್​ ಸೃಷ್ಟಿಸಿದ ಟ್ರೇಲರ್​

ರಿಷಬ್​ ಶೆಟ್ಟಿ ಟ್ರೇಲರ್​ನ ಕೊನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲೀಲ್​ ಹೆಸರಿನ ಪಾತ್ರವನ್ನು ರಿಷಬ್​ ಮಾಡಿದ್ದಾರೆ. ಇಲ್ಲಿ ‘ಕೆಜಿಎಫ್​’ ಚಿತ್ರದ ಉಲ್ಲೇಖವನ್ನೂ ಮಾಡಲಾಗಿದೆ.

ತೆಲುಗು ಸಿನಿಮಾದಲ್ಲಿ ರಿಷಬ್​ ಶೆಟ್ಟಿ; ಸೆನ್ಸೇಷನ್​ ಸೃಷ್ಟಿಸಿದ ಟ್ರೇಲರ್​
ರಿಷಬ್ ಶೆಟ್ಟಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Mar 15, 2022 | 8:38 PM

Share

ರಿಷಬ್​ ಶೆಟ್ಟಿ (Rishab Shetty)  ನಟನೆ, ನಿರ್ಮಾಣ, ಹಾಗೂ ನಿರ್ದೇಶನದಲ್ಲಿ ಮಿಂಚಿದ್ದಾರೆ. ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗುತ್ತಿದೆ. ತೆಲುಗಿನಲ್ಲಿ ಸಿದ್ಧಗೊಂಡಿರುವ ‘ಮಿಷನ್​ ಇಂಪಾಸಿಬಲ್​’ ಚಿತ್ರದಲ್ಲಿ (Mishan Impossible Trailer) ಈಗ ರಿಷಬ್ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ ರಿಲೀಸ್​ ಆಗಿದ್ದು ಸಖತ್​ ಫನ್ನಿ ಆಗಿದೆ. ನಟಿ ತಾಪ್ಸಿ ಪನ್ನು (Taapsee Pannu) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜತೆಗೆ ಮಕ್ಕಳ ಪಾತ್ರ ಕೂಡ ​ ಹೈಲೈಟ್ ಆಗಿದೆ. ಈ ಚಿತ್ರದ ಟ್ರೇಲರ್​ನಲ್ಲಿ ರಿಷಬ್​ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದು, ಗಮನ ಸೆಳೆದಿದ್ದಾರೆ.

ಮೂರು ಬಾಲಕರು ಸಿನಿಮಾದಲ್ಲಿ ಹೈಲೈಟ್​ ಆಗಿದ್ದಾರೆ. ಸಿನಿಮಾದಲ್ಲಿ ಅವರ ಹೆಸರು ರಘುಪತಿ, ರಾಘವ, ರಾಜಾರಾಮ್. ಸಿನಿಮಾ ಎಂದರೆ ಇವರಿಗೆ ಪಂಚಪ್ರಾಣ. ದೇಶದ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ ದಾವೂದ್​ ಇಬ್ರಾಹಿಂನನ್ನು ಅರೆಸ್ಟ್ ಮಾಡಿದ್ರೆ 3 ಲಕ್ಷ ರೂಪಾಯಿ ಬಹುಮಾನ ಸಿಗುತ್ತದೆ ಎನ್ನುವ ಜಾಹೀರಾತು ಕಾಣುತ್ತದೆ. ಅಲ್ಲಿಂದ ಇವರ ಪಯಣ ಶುರು. ದಾವೂದ್​ನನ್ನು ಹುಡುಕೋಕೆ ಹೋಗಿ ಈ ಮೂವರು ನಾನಾ ತೊಂದರೆಗೆ ಸಿಲುಕುತ್ತಾರೆ.

ರಿಷಬ್​ ಶೆಟ್ಟಿ ಟ್ರೇಲರ್​ನ ಕೊನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಲೀಲ್​ ಹೆಸರಿನ ಪಾತ್ರವನ್ನು ರಿಷಬ್​ ಮಾಡಿದ್ದಾರೆ. ಇಲ್ಲಿ ‘ಕೆಜಿಎಫ್​’ ಚಿತ್ರದ ಉಲ್ಲೇಖವನ್ನೂ ಮಾಡಲಾಗಿದೆ. ಅದು ಹೇಗೆ ಎನ್ನುವುದನ್ನು ನೀವು ಟ್ರೇಲರ್​ನಲ್ಲಿ ಕಣ್ತುಂಬಿಕೊಳ್ಳಬೇಕು. ‘ಮಿಷನ್​ ಇಂಪಾಸಿಬಲ್​’ ಸಿನಿಮಾದಲ್ಲಿ ರಿಷಬ್​ ಪಾತ್ರ ಎಷ್ಟು ಹೊತ್ತು ಇರಲಿದೆ ಎನ್ನುವ ಕುತೂಹಲ ಸದ್ಯದ್ದು. ಈ ಸಿನಿಮಾದ ಕೆಲ ದೃಶ್ಯಗಳನ್ನು ಬೆಂಗಳೂರಿನಲ್ಲೂ ಶೂಟ್​ ಮಾಡಿರೋದು ವಿಶೇಷ.

‘ಮಿಷನ್​ ಇಂಪಾಸಿಬಲ್​’ ಅಲ್ಲದೆ, ಇನ್ನೂ ಹಲವು ಸಿನಿಮಾಗಳಲ್ಲಿ ರಿಷಬ್​ ಶೆಟ್ಟಿ ನಟಿಸುತ್ತಿದ್ದಾರೆ. ‘ಕಾಂತಾರ’,  ‘ರುದ್ರಪ್ರಯಾಗ’, ಶಿವರಾಜ್​ಕುಮಾರ್​ ನಟನೆಯ 126ನೇ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಎರಡನೇ ಬಾರಿಗೆ ತಂದೆಯಾದ ರಿಷಬ್​

2017ರಲ್ಲಿ ಪ್ರಗತಿ ಶೆಟ್ಟಿ ಜೊತೆ ರಿಷಬ್​ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ 2019ರಲ್ಲಿ ಮೊದಲ ಮಗು ಜನಿಸಿತು. ಪುತ್ರನಿಗೆ ರಣ್ವಿತ್​ ಶೆಟ್ಟಿ ಎಂದು ಹೆಸರು ಇಟ್ಟಿದ್ದಾರೆ. ಈಗ ಎರಡನೇ ಮಗುವಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿರುವುದು ಅವರ ಕುಟುಂಬದಲ್ಲಿ ಖುಷಿ ತಂದಿದೆ. ಮಗಳ ಆಗಮನದಿಂದ ಸಂಭ್ರಮಿಸುತ್ತಿರುವ ಈ ದಂಪತಿಗೆ ಚಿತ್ರರಂಗದ ಅನೇಕರು ಶುಭ ಕೋರಿದ್ದಾರೆ. ‘ಮುದ್ದಾದ ಮಗುವಿಗೆ ಜನ್ಮನೀಡಿದ ಪ್ರಗತಿ ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಅಣ್ಣನಿಗೆ ಅಭಿನಂದನೆಗಳು. ನಮ್ಮ ಪ್ರೀತಿ, ಪ್ರಾರ್ಥನೆ ಸದಾ ನಿಮ್ಮೊಂದಿಗೆ’ ಎಂದು ನಟ ಶೈನ್​ ಶೆಟ್ಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್​ ಶೆಟ್ಟಿ ಅಸಮಾಧಾನ

‘ಬೆಂಗಳೂರು ಸಿನಿಮೋತ್ಸವಕ್ಕೆ ಈಗ ಪೆದ್ರೊ ಚಿತ್ರ ತಗೊಳ್ಳೋದು ಬೇಡ’: ರಿಷಬ್​ ಶೆಟ್ಟಿ ಖಡಕ್​ ನಿರ್ಧಾರ

Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಹುಡಾ ಅಧ್ಯಕ್ಷ ಸ್ಥಾನಕ್ಕೆ ಬೀದಿಗಿಳಿದ ಮುಸ್ಲಿಂ ಸಮುದಾಯ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಬಾಲ್ಯದಲ್ಲೇ ನಿಸ್ಸಾರ್ ಮನೆಯಲ್ಲಿ ಲಿಂಗ ತಂದಿಟ್ಟು ಪೂಜೆ ಮಾಡುತ್ತಿದ್ದನಂತೆ
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಮೈಸೂರಿಗೆ ಹೊರಟಿದ್ದ ರೈಲಿನಿಂದ ಬೇರ್ಪಟ್ಟ 6 ಬೋಗಿಗಳು
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಉತ್ತರಕಾಶಿಯ ಧರಾಲಿ ಪ್ರದೇಶವಿಡೀ ಕೆಸರಾವೃತ, ಸಿಎಂ ಧಾಮಿ ವೈಮಾನಿಕ ಸಮೀಕ್ಷೆ
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ಕೃತಜ್ಞ ಮಗ ಸರ್ಕಾರೀ ನೌಕರ, ಕೆಎಸ್​ಅರ್​ಟಿಸಿಯಲ್ಲಿ ಚಾಲಕ!
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ವಾರಾಣಸಿಯಲ್ಲಿ ಪ್ರವಾಹ; ಮನೆ, ಅಂಗಡಿ, ಆಸ್ಪತ್ರೆಗೆ ನುಗ್ಗಿದ ಗಂಗಾ ನದಿ ನೀರು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ದರ್ಶನ್ ಅಭಿಮಾನಿಗಳನ್ನು ಕೊಚ್ಚೆಗೆ ಹೋಲಿಸಿದ ಮಾಡೆಲ್ ಸೋನು
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ವಿಕ್ಟೋರಿಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಿಸಿನೀರಲ್ಲ ತಣ್ಣೀರೂ ಸಿಗಲ್ಲ!
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​
ಕೆ.ಆರ್ ಪುರ ಮೇಟ್ರೋ ಸ್ಟೇಷನ್ ಬಳಿ ಕೆಲಕಾಲ ಆತಂಕ ಸೃಷ್ಟಿದ ಸೂಟ್​​​ಕೇಸ್​