ಶಿವಣ್ಣ ಮಾಡಿದ್ದ ಪಾತ್ರದಲ್ಲಿ ಸಿಂಬು; ಹೇಗಿದೆ ನೋಡಿ ‘ಮಫ್ತಿ’ ಸಿನಿಮಾದ ತಮಿಳು ರಿಮೇಕ್​ ಟೀಸರ್​

‘ಪತ್ತು ತಲ ’ ಚಿತ್ರದಲ್ಲಿ ಸಿಂಬು ಜೊತೆ ಗೌತಮ್​ ಕಾರ್ತಿಕ್​, ಪ್ರಿಯಾ ಭವಾನಿ ಅಭಿನಯಿಸಿದ್ದಾರೆ. ಒಂದೇ ದಿನಕ್ಕೆ ಯೂಟ್ಯೂಬ್​ನಲ್ಲಿ ಈ ಸಿನಿಮಾದ ಟೀಸರ್​​ 1.4 ಮಿಲಿಯನ್​ ವೀಕ್ಷಣೆ ಕಂಡಿದೆ.

ಶಿವಣ್ಣ ಮಾಡಿದ್ದ ಪಾತ್ರದಲ್ಲಿ ಸಿಂಬು; ಹೇಗಿದೆ ನೋಡಿ ‘ಮಫ್ತಿ’ ಸಿನಿಮಾದ ತಮಿಳು ರಿಮೇಕ್​ ಟೀಸರ್​
ಸಿಂಬು- ಶಿವರಾಜ್​ಕುಮಾರ್​
Follow us
| Updated By: ಮದನ್​ ಕುಮಾರ್​

Updated on: Feb 04, 2022 | 3:42 PM

ಕಾಲಿವುಡ್​ ನಟ ಸಿಂಬು ಅವರು ಅನೇಕ ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತ ಬಂದಿದ್ದಾರೆ. ಚಿತ್ರರಂಗದಲ್ಲಿ ಅವರ ಅನುಭವ ಅಪಾರ. ಫೆ.3ರಂದು ಸಿಂಬು (Simbu) ಜನ್ಮದಿನದ ಪ್ರಯುಕ್ತ ‘ಪತ್ತು ತಲ’ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿದೆ. ಇದು ಕನ್ನಡದ ‘ಮಫ್ತಿ’ (Mufti Kannada Movie) ಸಿನಿಮಾದ ತಮಿಳು ರಿಮೇಕ್​. ಕನ್ನಡದಲ್ಲಿ ಶಿವರಾಜ್​ಕುಮಾರ್ (Shivarajkumar)​ ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಸಿಂಬು ಮಾಡುತ್ತಿದ್ದಾರೆ. ಮಫ್ತಿ ರೀತಿಯೇ ‘ಪತ್ತು ತಲ’ ಸಿನಿಮಾ ಮೇಕಿಂಗ್​ ಕೂಡ ಅದ್ದೂರಿಯಾಗಿದೆ ಎಂಬುದಕ್ಕೆ ಈ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಇತ್ತೀಚೆಗೆ ತೆರೆಕಂಡ ‘ಮಾನಾಡು’ ಸಿನಿಮಾ ಮೂಲಕ ಸಿಂಬು ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಆ ಪೈಕಿ ‘ಪಧು ಥಲಾ’ ಕೂಡ ನಿರೀಕ್ಷೆ ಹುಟ್ಟುಹಾಕಿದೆ.

‘ಪತ್ತು ತಲ’ ಚಿತ್ರದಲ್ಲಿ ಸಿಂಬು ಜೊತೆ ಗೌತಮ್​ ಕಾರ್ತಿಕ್​, ಪ್ರಿಯಾ ಭವಾನಿ ಮುಂತಾದವರು ಅಭಿನಯಿಸಿದ್ದಾರೆ. ಒಬೆಲಿ ಎನ್​. ಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಒಂದೇ ದಿನಕ್ಕೆ ಯೂಟ್ಯೂಬ್​ನಲ್ಲಿ ಈ ಸಿನಿಮಾದ ಟೀಸರ್​​ 1.4 ಮಿಲಿಯನ್​ ವೀಕ್ಷಣೆ ಕಂಡಿದೆ. ಆ ಮೂಲಕ ಚಿತ್ರದ ಬಗ್ಗೆ ಜನರಿಗೆ ಇರುವ ಕ್ರೇಜ್​ ಎಷ್ಟು ಎಂಬುದು ಗೊತ್ತಾಗಿದೆ. ಈ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ ಎಂಬುದು ವಿಶೇಷ.

(‘ಪತ್ತು ತಲ’  ಟೀಸರ್​ ಇಲ್ಲಿದೆ)

ಬಾಲನಟನಾಗಿಯೇ ಚಿತ್ರರಂಗಕ್ಕೆ ಸಿಂಬು ಕಾಲಿಟ್ಟರು. ಸಿನಿಮಾ ಕ್ಷೇತ್ರದಲ್ಲಿ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. 1980ರ ದಶಕದಿಂದಲೂ ಅವರು ಬಣ್ಣದ ಲೋಕದ ನಂಟು ಹೊಂದಿದ್ದಾರೆ. ನಿರ್ದೇಶಕನಾಗಿ, ಚಿತ್ರಕಥೆ ಬರಹಗಾರನಾಗಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. 20ರ ಪ್ರಾಯಕ್ಕೂ ಮುನ್ನವೇ ಅವರು ಹೀರೋ ಆದರು. 21ನೇ ವಯಸ್ಸಿಗೆ ‘ಮನ್ಮಥಂ’ ಚಿತ್ರದ ಸ್ಕ್ರಿಪ್ಟ್​ ಬರೆದು, ನಿರ್ದೇಶನ ವಿಭಾಗದ ಮೇಲ್ವಿಚಾರಣೆ ನೋಡಿಕೊಂಡರು. ಆ ಚಿತ್ರ ಸೂಪರ್​ ಹಿಟ್​ ಆಯಿತು. ನಟನಾಗಿ ಅವರ ವೃತ್ತಿಜೀವನಕ್ಕೆ ದೊಡ್ಡ ಯಶಸ್ಸು ತಂದುಕೊಟ್ಟಿತು. ಕೈತುಂಬ ಆಫರ್​ ಇಟ್ಟುಕೊಂಡು, ಬಹುಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.

ಸಿಂಬುಗೆ ಡಾಕ್ಟರೇಟ್​ ಗೌರವ:

ಕೆಲವೇ ದಿನಗಳ ಹಿಂದೆ ಸಿಂಬು ಮುಡಿಗೆ ಇನ್ನೊಂದು ಗರಿ ಸೇರಿಕೊಂಡಿತು. ಅವರಿಗೆ ಗೌರವ ಡಾಕ್ಟರೇಟ್​ ಸಿಕ್ಕಿದೆ. ಸಿನಿಮಾ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಈಗ ಗೌರವ ನೀಡಲಾಗಿದೆ. ವೇಲ್ಸ್​ ವಿಶ್ವವಿದ್ಯಾಲಯವು ಸಿಂಬುಗೆ ಗೌರವ ಡಾಕ್ಟರೇಟ್​ ಪದವಿ ನೀಡಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸಿಂಬು ಈ ಗೌರವ ಸ್ವೀಕರಿಸಿದರು. ‘ಈ ದೊಡ್ಡ ಗೌರವವನ್ನು ನಾನು ತಮಿಳು ಚಿತ್ರರಂಗಕ್ಕೆ ಹಾಗೂ ನನ್ನ ತಂದೆ-ತಾಯಿಗೆ ಅರ್ಪಿಸುತ್ತೇನೆ. ಅವರಿಂದಲೇ ನಾನು ಸಿನಿಮಾರಂಗದಲ್ಲಿ ಬೆಳೆಯಲು ಸಾಧ್ಯವಾಯಿತು. ಅಂತಿಮವಾಗಿ ನನ್ನ ಅಭಿಮಾನಿಗಳು. ಅವರಿಲ್ಲದೇ ನಾನಿಲ್ಲ’ ಎಂದು ಸಿಂಬು ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ:

 ಶೀಘ್ರವೇ ಸಿಂಬು-ನಿಧಿ ಅಗರ್​ವಾಲ್​ ಮದುವೆ? ಹೊರ ಬಿತ್ತು ಹೊಸ ಸುದ್ದಿ

‘ಎಲ್ಲರೂ ತೊಂದರೆ ಕೊಡ್ತಿದ್ದಾರೆ’ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದ ಸ್ಟಾರ್​ ನಟ ಸಿಂಬು

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ