ಮೊಬೈಲ್​ನಲ್ಲಿ ಮುಳುಗಿದವರ ಮನೆ ಹೇಗಿರುತ್ತೆ ಅಂತ ವಿವರಿಸುವ ‘ಹೋಮ್​’ ಚಿತ್ರಕ್ಕೀಗ ರಿಮೇಕ್​ ಭಾಗ್ಯ

TV9 Digital Desk

|

Updated on:Oct 08, 2021 | 9:35 AM

ಮಲಯಾಳಂನ ‘ಹೋಮ್’ ಸಿನಿಮಾ ಆ.19ರಂದು ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಬಿಡುಗಡೆ ಆಗಿತ್ತು. ಫ್ಯಾಮಿಲಿ ಪ್ರೇಕ್ಷಕರು ಈ ಚಿತ್ರವನ್ನು ಸಖತ್​ ಇಷ್ಟಪಟ್ಟಿದ್ದರು. ಈಗ ಹಿಂದಿಗೆ ರಿಮೇಕ್​ ಆಗುತ್ತಿದೆ.

ಮೊಬೈಲ್​ನಲ್ಲಿ ಮುಳುಗಿದವರ ಮನೆ ಹೇಗಿರುತ್ತೆ ಅಂತ ವಿವರಿಸುವ ‘ಹೋಮ್​’ ಚಿತ್ರಕ್ಕೀಗ ರಿಮೇಕ್​ ಭಾಗ್ಯ
‘ಹೋಮ್​’ ಸಿನಿಮಾ ಪೋಸ್ಟರ್​
Follow us

ಮಲಯಾಳಂ ಸಿನಿಮಾಗಳಿಗೆ ಕ್ಲಾಸ್​ ಪ್ರೇಕ್ಷಕರು ಫಿದಾ ಆಗುತ್ತಾರೆ. ಎಲ್ಲ ಪ್ರದೇಶಕ್ಕೂ ಸೂಕ್ತ ಆಗುವಂತಹ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವಲ್ಲಿ ಮಾಲಿವುಡ್​ ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ. ಈ ವರ್ಷ ಓಟಿಟಿಯಲ್ಲಿ ತೆರೆಕಂಡ ‘ಹೋಮ್​’ ಚಿತ್ರ ಭಾರಿ ಪ್ರಶಂಸೆ ಪಡೆದುಕೊಂಡಿತ್ತು. ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಬಿಡುಗಡೆ ಆದ ಆ ಚಿತ್ರವೀಗ ಹಿಂದಿಗೆ ರಿಮೇಕ್​ ಆಗುತ್ತಿದೆ. ಆ ಮೂಲಕ ಒಂದು ಹೃದಯಸ್ಪರ್ಶಿ ಕಥೆಯನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸಲು ನಿರ್ಮಾಪಕರು ಸಜ್ಜಾಗಿದ್ದಾರೆ. ಬಾಲಿವುಡ್​ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಈ ಕಾರ್ಯಕ್ಕೆ ಕೈ ಜೋಡಿಸಿದೆ.

ರೋಜಿನ್​ ಥಾಮಸ್​ ನಿರ್ದೇಶನದ ‘ಹೋಮ್​’ ಸಿನಿಮಾದಲ್ಲಿ ಒಂದು ಫ್ರೆಶ್​ ಕಥೆ ಇದೆ. ಹಿರಿಯರು ಮತ್ತು ಹೊಸ ತಲೆಮಾರಿನವರ ನಡುವೆ ಮೊಬೈಲ್​ ಎಂಬ ಮಾಯಾವಿ ಯಂತ್ರ ಅಡ್ಡ ಬಂದಾಗ ಏನೆಲ್ಲ ಎಡವಟ್ಟುಗಳು ಆಗುತ್ತವೆ ಎಂಬುದನ್ನು ಈ ಚಿತ್ರ ವಿವರಿಸುತ್ತದೆ. ಆ ಕಥೆಗೆ ಬಾಲಿವುಡ್​ ನಿರ್ಮಾಪಕರು ಫಿದಾ ಆಗಿದ್ದಾರೆ. ಅಬಂಡನ್ಷಾ ಎಂಟರ್​ಟೇನ್​ಮೆಂಟ್​ ಸಂಸ್ಥೆ ಮೂಲಕ ಈ ಸಿನಿಮಾ ಹಿಂದಿಗೆ ರಿಮೇಕ್​ ಆಗಲಿದೆ. ಮೂಲ ಚಿತ್ರ ನಿರ್ಮಾಣ ಮಾಡಿದ್ದ ‘ಫ್ರೈಡೇ ಫಿಲ್ಮ್​ ಹೌಸ್​’ ಕೂಡ ರಿಮೇಕ್​ಗೆ ಸಾಥ್​ ನೀಡುತ್ತಿದೆ.

ಇಂದ್ರನ್ಸ್​, ಶ್ರೀನಾಥ್​ ಭಾಸಿ, ಶ್ರೀಕಂಠ್​ ಮುರಳಿ, ಮುಂಜು ಪಿಳ್ಳೈ, ಜಾನಿ ಆಂಟೊನಿ ಮುಂತಾದವರು ಮುಖ್ಯಭೂಮಿಕೆ ನಿಭಾಯಿಸಿರುವ ‘ಹೋಮ್’ ಸಿನಿಮಾ ಆ.19ರಂದು ಬಿಡುಗಡೆ ಆಗಿತ್ತು. ಫ್ಯಾಮಿಲಿ ಪ್ರೇಕ್ಷಕರು ಈ ಚಿತ್ರವನ್ನು ಸಖತ್​ ಇಷ್ಟಪಟ್ಟಿದ್ದರು. ಓಟಿಟಿಯಲ್ಲಿ ಯಶಸ್ಸು ಕಂಡು ಈ ಸಿನಿಮಾವನ್ನು ಈಗ ಹಿಂದಿ ಪ್ರೇಕ್ಷಕರಿಗಾಗಿ ರಿಮೇಕ್​ ಮಾಡಲಾಗುತ್ತಿದೆ.

ದಕ್ಷಿಣ ಭಾರತದ ಅನೇಕ ಸಿನಿಮಾಗಳು ಹಿಂದಿಗೆ ರಿಮೇಕ್​ ಆದಾಗ ಅಲ್ಲಿನ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈಗ ‘ಹೋಮ್’​ ಕೂಡ ರಿಮೇಕ್​ ಆಗುವ ಸುದ್ದಿ ಹೊರಬಿದ್ದಿದ್ದು, ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡುವಂತಾಗಿದೆ. ರಿಮೇಕ್​ನಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ.

ಇದನ್ನೂ ಓದಿ:

ಸೋತು ಸುಣ್ಣವಾದ ಶಾರುಖ್​ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್​ ಮಾಡಿದ ನಟ

ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​

ತಾಜಾ ಸುದ್ದಿ

Related Stories

Click on your DTH Provider to Add TV9 Kannada