ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​

ಡಾಲಿ ಧನಂಜಯ, ವಿಕ್ಕಿ ಕೌಶಾಲ್​, ಜ್ಯೋತಿಕಾ, ತಾಪ್ಸೀ ಪನ್ನು ಮುಂತಾದ ನಟ-ನಟಿಯರು ಓಟಿಟಿ ಪ್ರೇಕ್ಷಕರ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಅಕ್ಟೋಬರ್​ ತಿಂಗಳಲ್ಲಿ ಕೆಲವು ಬಹುನಿರೀಕ್ಷಿತ ಚಿತ್ರಗಳು ಓಟಿಟಿ ಮೂಲಕ ಜನರನ್ನು ರಂಜಿಸಲು ಬರುತ್ತಿವೆ.

ಓಟಿಟಿ ಮೇಲೆ ಹೆಚ್ಚಿತು ಸಿನಿ ಮಂದಿಯ ಪ್ರೀತಿ; ಬಹುನಿರೀಕ್ಷಿತ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ರಿಲೀಸ್​
ತಾಪ್ಸೀ ಪನ್ನು, ವಿಕ್ಕಿ ಕೌಶಾಲ್​, ಜ್ಯೋತಿಕಾ, ಡಾಲಿ ಧನಂಜಯ

ಚಿತ್ರಮಂದಿರಗಳಲ್ಲಿ ಕುಳಿತು, ನೂರಾರು ಪ್ರೇಕ್ಷಕರ ಜೊತೆ ಸಿನಿಮಾ ನೋಡುವ ಮಜವೇ ಬೇರೆ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಓಟಿಟಿ ಮೇಲೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮನೆಯಲ್ಲೇ ಕುಳಿತು ಹೊಸ ಹೊಸ ಸಿನಿಮಾ ನೋಡಬೇಕು ಎಂದು ಬಯಸುವ ಪ್ರೇಕ್ಷಕರನ್ನೇ ಟಾರ್ಗೆಟ್​ ಆಗಿಟ್ಟುಕೊಂಡು ಅನೇಕ ಓಟಿಟಿ ಪ್ಲಾಟ್​ಫಾರ್ಮ್​ಗಳು ಕೆಲಸ ಮಾಡುತ್ತಿವೆ. ಎಲ್ಲ ಭಾಷೆಯ ಚಿತ್ರರಂಗಗಳಲ್ಲೂ ಕೆಲವು ನಿರ್ಮಾಪಕರು ಓಟಿಟಿ ರಿಲೀಸ್​ಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಪರಿಣಾಮವಾಗಿ ಅನೇಕ ಚಿತ್ರಗಳು ಆನ್​ಲೈನ್​ ಮೂಲಕ ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗುತ್ತಿವೆ.

 

ಅ.22ಕ್ಕೆ ‘ರತ್ನನ್​ ಪ್ರಪಂಚ’

ನಟ ಡಾಲಿ ಧನಂಜಯ ಅವರು ಎಲ್ಲ ಬಗೆಯ ಪಾತ್ರಗಳನ್ನೂ ಮಾಡುತ್ತ ಮುನ್ನುಗ್ಗುತ್ತಿದ್ದಾರೆ. ಅವರ ಹೊಸ ಸಿನಿಮಾ ‘ರತ್ನನ್​ ಪ್ರಪಂಚ’ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದರ ಟ್ರೇಲರ್​ಗೆ ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅ.22ರಂದು ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ‘ರತ್ನನ್​ ಪ್ರಪಂಚ’ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ರೋಹಿತ್​ ಪದಕಿ ನಿರ್ದೇಶನ ಮಾಡಿದ್ದಾರೆ.

ವಿಕ್ಕಿ ಕೌಶಕ್​ ಅಭಿಮಾನಿಗಳಿಗೆ ಸರ್ದಾರ್​ ಉದ್ಧಮ್​:

ಬಾಲಿವುಡ್​ನಲ್ಲಿ ನಟ ವಿಕ್ಕಿ ಕೌಶಲ್​ ಯಶಸ್ವಿ ಹೀರೋ ಆಗಿದ್ದಾರೆ. ‘ಉರಿ’ ಚಿತ್ರದ ಬಳಿಕ ಅವರು ಸ್ಟಾರ್​ ನಟನಾಗಿದ್ದಾರೆ. ವಿಕ್ಕಿ ನಟಿಸಿರುವ ‘ಸರ್ದಾರ್​ ಉದ್ಧಮ್​’ ಸಿನಿಮಾ ಅ.16ರಂದು ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಪ್ರಸಾರ ಆರಂಭಿಸಲಿದೆ. ಸ್ವಾತಂತ್ರ್ಯ ಹೋರಾಟಗಾರ ಉದ್ಧಮ್​ ಸಿಂಗ್​ ಜೀವನವನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

‘ರಶ್ಮಿ ರಾಕೆಟ್​’ಗಾಗಿ ತಾಪ್ಸೀ ಫ್ಯಾನ್ಸ್​ ಕಾತರ:

ನಟಿ ತಾಪ್ಸೀ ಪನ್ನು ಅವರು ಸಿನಿಮಾಗಳ ಆಯ್ಕೆಯಲ್ಲಿ ತಮ್ಮತನ ಕಾಯ್ದುಕೊಂಡಿದ್ದಾರೆ. ಬರೀ ಗ್ಲಾಮರ್​ಗೆ ಸೀಮಿತವಾಗದೇ, ಗಟ್ಟಿ ವಸ್ತುವಿಷಯ ಇರುವಂತಹ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ತಾಪ್ಸೀ ಅಭಿನಯದ ‘ರಶ್ಮಿ ರಾಕೆಟ್​’ ಚಿತ್ರ ಅ.15ರಂದು ಜೀ5 ಮೂಲಕ ವೀಕ್ಷಣೆಗೆ ಲಭ್ಯವಾಗಲಿದೆ. ಈ ಸಿನಿಮಾಗಾಗಿ ಅವರು ಬಾಡಿ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಂಡಿದ್ದಾರೆ.

ಓಟಿಟಿಯಲ್ಲಿ ಜ್ಯೋತಿಕಾ ಮತ್ತೆ ಅದೃಷ್ಟ ಪರೀಕ್ಷೆ:

ಕಾಲಿವುಡ್​ ನಟಿ ಜ್ಯೋತಿಕಾ ಅವರು ಕಳೆದ ವರ್ಷ ‘ಪೊನ್​ಮಗಳ್​ ವಂದಾಳ್​’ ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಅಮೇಜಾನ್​ ಪ್ರೈಂ ವಿಡಿಯೋ ಮೂಲಕ ಬಿಡುಗಡೆಯಾಗಿತ್ತು. ಈಗ ಅವರು ನಟಿಸಿರುವ ಹೊಸ ಚಿತ್ರ ‘ಉಡನ್​ಪಿರಪ್ಪೆ’ ಕೂಡ ಅಮೇಜಾನ್​ ಪ್ರೈಂ ವಿಡಿಯೋನಲ್ಲಿ ಅ.14ರಿಂದ ವೀಕ್ಷಣೆಗೆ ಲಭ್ಯವಾಗುತ್ತಿದೆ. ಈಗಾಗಲೇ ಟ್ರೇಲರ್​ ಮೂಲಕ ಈ ಸಿನಿಮಾ ಗಮನ ಸೆಳೆದಿದೆ.

ಸನ್ನಿ ಕೌಶಾಲ್​, ರಾಧಿಕಾ ಮದನ್​, ಮೋಹಿತ್​ ರೈನಾ ಮುಂತಾದವರು ನಟಿಸಿರುವ ‘ಶಿದ್ಧತ್​’ ಸಿನಿಮಾ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಅ.1ರಂದು ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:

ಸೋತು ಸುಣ್ಣವಾದ ಶಾರುಖ್​ಗೆ ಈಗ ಓಟಿಟಿ ಅನಿವಾರ್ಯ; ಸತ್ಯ ಒಪ್ಪಿಕೊಂಡು ವಿಡಿಯೋ ಶೇರ್​ ಮಾಡಿದ ನಟ

ನ.2ರಂದು ‘ಜೈ ಭೀಮ್​’ ಸಿನಿಮಾ ರಿಲೀಸ್​; ಮತ್ತೆ ಓಟಿಟಿ ಮೇಲೆ ಭರವಸೆ ಇಟ್ಟ ಸೂರ್ಯ

Read Full Article

Click on your DTH Provider to Add TV9 Kannada