Jersey Movie: ರಿಮೇಕ್​ ಮಾಡಿ ಕೈ ಸುಟ್ಟುಕೊಂಡ ಬಳಿಕ ಶಾಹಿದ್ ಕಪೂರ್​ಗೆ ಜ್ಞಾನೋದಯ; ಸ್ಟಾರ್ ನಟ ಈಗ ಹೇಳಿದ್ದೇನು?

Shahid Kapoor: ಶಾಹಿದ್ ಕಪೂರ್ ನಟನೆಯ ‘ಜೆರ್ಸಿ’ ಚಿತ್ರ ಬಾಕ್ಸಾಫೀಸ್​ನಲ್ಲಿ ಸೋಲು ಕಂಡಿತ್ತು. ಇದೀಗ ನಟ ಚಿತ್ರದ ಸೋಲಿನ ಬಗ್ಗೆ ಮೌನ ಮುರಿದಿದ್ದಾರೆ.

Jersey Movie: ರಿಮೇಕ್​ ಮಾಡಿ ಕೈ ಸುಟ್ಟುಕೊಂಡ ಬಳಿಕ ಶಾಹಿದ್ ಕಪೂರ್​ಗೆ ಜ್ಞಾನೋದಯ; ಸ್ಟಾರ್ ನಟ ಈಗ ಹೇಳಿದ್ದೇನು?
‘ಜೆರ್ಸಿ’ ಚಿತ್ರದಲ್ಲಿ ಶಾಹಿದ್ ಕಪೂರ್
Follow us
TV9 Web
| Updated By: shivaprasad.hs

Updated on:Jun 05, 2022 | 9:35 AM

ಬಾಲಿವುಡ್ ನಟ ಶಾಹಿದ್ ಕಪೂರ್ (Shahid Kapoor) ಅಭಿನಯಿಸಿದ್ದ ‘ಜೆರ್ಸಿ’ (Jersey Movie) ಏಪ್ರಿಲ್ 22ರಂದು ತೆರೆಕಂಡಿತ್ತು. ಅದೇ ಹೆಸರಿನ ತೆಲುಗು ಚಿತ್ರದ ರಿಮೇಕ್ ಆಗಿದ್ದ ‘ಜೆರ್ಸಿ’ ಬಾಕ್ಸಾಫೀಸ್​ನಲ್ಲಿ ಸೋಲು ಕಂಡಿತ್ತು. ಜತೆಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ನಟ ಚಿತ್ರದ ಸೋಲಿನ ಬಗ್ಗೆ ಮೌನಮುರಿದಿದ್ದಾರೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಐಐಎಫ್​ಎ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ಜೆರ್ಸಿ ಸೋಲಿನ ಬಗ್ಗೆ ಪ್ರಶ್ನೆ ಎದುರಾಗಿದೆ. ಕ್ರಿಕೆಟ್​​ ಕುರಿತ ಕತೆ ಹೊಂದಿರುವ ‘ಜೆರ್ಸಿ’ ತಮಗೆ ಬಹಳ ಆಪ್ತವಾಗಿತ್ತು. ಆದರೆ ಜೀವನದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಪಾಠವನ್ನು ಈ ಚಿತ್ರ ಕಲಿಸಿದೆ ಎಂದಿದ್ದಾರೆ ಶಾಹಿದ್.

‘ಜೆರ್ಸಿ’ ಚಿತ್ರದಲ್ಲಿ ಮೃಣಾಲ್ ಥಾಕೂರ್, ಪಂಕಜ್ ಕಪೂರ್ ಮೊದಲಾದವರು ಬಣ್ಣಹಚ್ಚಿದ್ದರು. 2019ರಲ್ಲಿ ತೆಲುಗಿನಲ್ಲಿ ತೆರೆಕಂಡಿದ್ದ ನಾನಿ ಅಭಿನಯದ ‘ಜೆರ್ಸಿ’ ಅಲ್ಲಿ ಯಶಸ್ಸನ್ನು ಪಡೆದ ಬಳಿಕ ಬಾಲಿವುಡ್​ನಲ್ಲಿ ರಿಮೇಕ್ ಆಗಿತ್ತು. ಅಲ್ಲು ಅರವಿಂದ್, ದಿಲ್ ರಾಜು, ಅಮನ್ ಗಿಲ್​ ಈ ಚಿತ್ರವನ್ನು ನಿರ್ಮಿಸಿದ್ದರು. ಸುಮಾರು 35 ಕೋಟಿ ರೂ ವೆಚ್ಚದಲ್ಲಿ ಚಿತ್ರ ತಯಾರಾಗಿತ್ತು. ರಿಲೀಸ್ ಆದ ಮೊದಲ ದಿನ ಕೇವಲ 4 ಕೋಟಿ ರೂ ಗಳಿಸಿದ್ದ ಚಿತ್ರ ಒಟ್ಟಾರೆ 20 ಕೋಟಿ ರೂ ಆಸುಪಾಸಿನಷ್ಟು ಗಳಿಸಿತ್ತು ಎಂದು ವರದಿಗಳು ಹೇಳಿವೆ. ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದ ಚಿತ್ರದ ಸೋಲಿನ ಬಗ್ಗೆ ಶಾಹಿದ್ ಕಪೂರ್ ಮುಕ್ತವಾಗಿ ಮಾತನಾಡಿದ್ದಾರೆ.

‘ನಾವು ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು’: ಶಾಹಿದ್ ಕಪೂರ್​

ಇದನ್ನೂ ಓದಿ
Image
ಕರಣ್​ ಜೋಹರ್​ ಬರ್ತ್​ಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್​? ಶಾಕಿಂಗ್​ ಸುದ್ದಿ ವೈರಲ್​
Image
Aniruddha Jatkar: ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಲಹೆಗಳನ್ನು ಮುಂದಿಟ್ಟ ನಟ ಅನಿರುದ್ಧ; ವಿವರ ಇಲ್ಲಿದೆ
Image
ಹಿಂಗೂ ಕಟ್ಟಿ ಹಾಕ್ತಾರಾ? ಸಿಲ್ಲಿ ಕಾರಣಕ್ಕೆ ಸಖತ್​ ಟ್ರೋಲ್​ ಆದ ಅಕ್ಷಯ್​ ಕುಮಾರ್​ ಚಿತ್ರ ‘ಸಾಮ್ರಾಟ್​ ಪೃಥ್ವಿರಾಜ್​’
Image
Samantha: ಆ ಸ್ಟಾರ್ ನಟನೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರಾ ಸಮಂತಾ? ಕೇಳಿ ಬರುತ್ತಿದೆ ಹೊಸ ಗುಸುಗುಸು

ಸಂವಾದದಲ್ಲಿ ಮಾತನಾಡಿದ ಶಾಹಿದ್, ‘‘ಜೆರ್ಸಿ ನನಗೆ ಬಹಳ ಆಪ್ತವಾದ ಚಿತ್ರವಾಗಿತ್ತು. ಅದಕ್ಕೆ ಜನರ ಪ್ರೀತಿಯೂ ಸಿಕ್ಕಿದೆ. ಆದರೆ ಕೊವಿಡ್​ ನಂತರದ ಕಳೆದ ಎರಡು ವರ್ಷಗಳಿಂದ ಜನರ ಮನಸ್ಥಿತಿ ಬದಲಾಗಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು’’ ಎಂದಿದ್ದಾರೆ. ಈ ಮೂಲಕ ಚಿತ್ರದ ಸೋಲಿಗೆ ಕಾರಣ ಹುಡುಕುವ ಯತ್ನ ನಡೆಸಿದ್ದಾರೆ.

‘‘ಜೆರ್ಸಿ ಮುಂದೆಯೂ ನನ್ನ ಹೃದಯಕ್ಕೆ ಆಪ್ತವಾದ ಚಿತ್ರವೇ ಆಗಿರುತ್ತದೆ’’ ಎಂದಿರುವ ನಟ, ‘‘ಆದರೆ ಈ ಚಿತ್ರ ನನಗೆ ಜೀವನದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದನ್ನು ಕಲಿಸಿದೆ’’ ಎಂದಿದ್ದಾರೆ. ‘ಜೆರ್ಸಿ’ ಬಾಕ್ಸಾಫೀಸ್​ ಸೋಲು ನಿರಾಶೆ ತಂದಿದೆಯೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಇಲ್ಲ ಎಂದಿದ್ದಾರೆ ಶಾಹಿದ್.

ಶಾಹಿದ್ ಕಪೂರ್ ಅವರ ಈ ಹಿಂದಿನ ಚಿತ್ರ ‘ಕಬೀರ್ ಸಿಂಗ್’ ಕೂಡ ತೆಲುಗು ರಿಮೇಕ್ ಆಗಿತ್ತು. ‘ಅರ್ಜುನ್ ರೆಡ್ಡಿ’ ಚಿತ್ರವನ್ನು ಕಬೀರ್ ಸಿಂಗ್ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಆ ಚಿತ್ರ ಬಾಕ್ಸಾಫೀಸ್​ನಲ್ಲಿ ಗೆದ್ದು ಬೀಗಿತ್ತು. ನಂತರದಲ್ಲಿ ಶಾಹಿದ್ ‘ಜೆರ್ಸಿ’ ರಿಮೇಕ್​ಗೆ ಮುಂದಾಗಿದ್ದರು. ಆದರೆ ಅದು ಯಶಸ್ವಿಯಾಗಿಲ್ಲ. ಇತ್ತೀಚೆಗೆ ಬಾಲಿವುಡ್​ನ ಸ್ಟಾರ್ ನಟರು ಮೂಲ ಚಿತ್ರಗಳಿಗಿಂತ ದಕ್ಷಿಣದ ಚಿತ್ರಗಳ ರಿಮೇಕ್ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ತೀವ್ರ ಟೀಕೆಗಳೂ ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶಾಹಿದ್ ಕಪೂರ್ ಮುಂದಿನ ಚಿತ್ರಗಳ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎನ್ನುವುದು ಕುತೂಹಲ ಮೂಡಿಸಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 am, Sun, 5 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ