AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samrat Prithviraj: ₹ 300 ಕೋಟಿ ವೆಚ್ಚದ ‘ಸಾಮ್ರಾಟ್ ಪೃಥ್ವಿರಾಜ್’ ಮೊದಲ ದಿನ ಗಳಿಸಿದ್ದೆಷ್ಟು? ಇಲ್ಲಿದೆ ಅಕ್ಷಯ್ ಚಿತ್ರದ ಬಾಕ್ಸಾಫೀಸ್ ಲೆಕ್ಕಾಚಾರ

Akshay Kumar | Samrat Prithviraj BO Collection: 300 ಕೋಟಿ ರೂಗಿಂತಲೂ ಅಧಿಕ ವೆಚ್ಚದಲ್ಲಿ ತಯಾರಾಗಿರುವ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರ ಮೊದಲ ದಿನವೇ ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆಯಬಹುದೆಂಬ ನಿರೀಕ್ಷೆ ಇತ್ತು. ನಿರೀಕ್ಷೆ ನಿಜವಾಗಿದೆಯೇ? ವಿವರ ಇಲ್ಲಿದೆ.

Samrat Prithviraj: ₹ 300 ಕೋಟಿ ವೆಚ್ಚದ ‘ಸಾಮ್ರಾಟ್ ಪೃಥ್ವಿರಾಜ್’ ಮೊದಲ ದಿನ ಗಳಿಸಿದ್ದೆಷ್ಟು? ಇಲ್ಲಿದೆ ಅಕ್ಷಯ್ ಚಿತ್ರದ ಬಾಕ್ಸಾಫೀಸ್ ಲೆಕ್ಕಾಚಾರ
‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಪೋಸ್ಟರ್
TV9 Web
| Updated By: shivaprasad.hs|

Updated on:Jun 04, 2022 | 3:20 PM

Share

ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿತ್ತು. ಜೂನ್ 3ರಂದು ವಿಶ್ವಾದ್ಯಂತ ತೆರೆ ಕಂಡಿರುವ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಚಿತ್ರದ ಮೊದಲ ದಿನದ ಗಳಿಕೆಯ ವಿವರ ಹೊರಬಿದ್ದಿದೆ. ಬರೋಬ್ಬರಿ 300 ಕೋಟಿ ರೂ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಮೊದಲ ದಿನವೇ ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆಯಬಹುದೆಂಬ ನಿರೀಕ್ಷೆ ಇತ್ತು. ಅದು ಸಾಧ್ಯವಾಗದೆ ಹೋದರೂ, ಸಿನಿಮಾವು ಉತ್ತಮ ಮೊತ್ತವನ್ನು ಗಳಿಸಿದೆ. ಬಾಕ್ಸಾಫೀಸ್ ವಿಶ್ಲೇಶಕ ತರಣ್ ಆದರ್ಶ್ ಪ್ರಕಾರ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರವು ಮೊದಲ ದಿನದಂದು ಹಿಂದಿಯಲ್ಲಿ ಸುಮಾರು 10.71 ಕೋಟಿ ರೂಗಳನ್ನು ಗಳಿಕೆ ಮಾಡಿದೆ. ವೀಕೆಂಡ್ ಆಗಿರುವ ಕಾರಣ, ಶನಿವಾರ ಹಾಗೂ ಭಾನುವಾರ ಕಲೆಕ್ಷನ್​ನಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.

ರಜಪೂತರ ರಾಜ ಪೃಥ್ವಿರಾಜ್ ಚೌಹಾಣ್ ಜೀವನವನ್ನು ಆಧರಿಸಿದ ಈ ಚಿತ್ರವನ್ನು ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶಿಸಿದ್ದಾರೆ. ಚಿತ್ರದ ಕತೆಯ ಕೆಲಸಕ್ಕೆ ಸುಮಾರು 18 ವರ್ಷಗಳನ್ನು ವ್ಯಯಿಸಲಾಗಿದೆ. ಸಾಕಷ್ಟು ಸಂಶೋಧನೆ ನಡೆಸಿ ಮೂಲಕ್ಕೆ ನಿಷ್ಠವಾಗಿ ಕತೆ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದರು. ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ. ಸಂಜಯ್ ದತ್, ಸೋನು ಸೂದ್ ಮೊದಲಾದ ತಾರೆಯರು ಬಣ್ಣಹಚ್ಚಿದ್ದಾರೆ. ಬಾಲಿವುಡ್​ನಲ್ಲಿ ಮೊದಲ ದಿನ ಹೆಚ್ಚು ಗಳಿಸಿದ ಚಿತ್ರಗಳು ಯಾವುವು ಎಂಬ ವಿವರ ಇಲ್ಲಿದೆ.

ಇದನ್ನೂ ಓದಿ
Image
ಖ್ಯಾತ ಹಾಸ್ಯ ನಟ ನರಸಿಂಹ ರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ; ಹೃದಯಾಘಾತದಿಂದ ನಿಧನ
Image
ಸಂಚಾರಿ ವಿಜಯ್​ ಪುಣ್ಯ ಸ್ಮರಣೆ: ಪ್ರತಿಭಾವಂತ ನಟನ ನೆನಪಿಗಾಗಿ ಹುಟ್ಟೂರಿನಲ್ಲಿ ಪ್ರತಿಮೆ ನಿರ್ಮಾಣ
Image
‘ವಿಕ್ರಮ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​; ಮೊದಲ ದಿನ ಕಮಲ್​ ಹಾಸನ್​ ಸಿನಿಮಾ ಗಳಿಸಿದ್ದೆಷ್ಟು?
Image
ವಿಷ್ಣುವರ್ಧನ್​ ಪ್ರೀತಿಸಿದ ಹುಡುಗಿಗೆ ಸುಂದರ್​ ರಾಜ್​ ಹೂವು ಕೊಟ್ಟಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್​ ಘಟನೆಯ ವಿವರ

ಬಾಲಿವುಡ್​ನಲ್ಲಿ ಮೊದಲ ದಿನ ಹೆಚ್ಚು ಗಳಿಕೆ ಮಾಡಿದ ಚಿತ್ರಗಳು ಯಾವುವು?

2022 ಬಾಲಿವುಡ್​ಗೆ ಹೆಚ್ಚು ಸಂತಸ ನೀಡಿಲ್ಲ. ಕಾರಣ, ದಕ್ಷಿಣ ಭಾರತದ ಚಿತ್ರಗಳ ಹಿಂದಿ ಅವತರಣಿಕೆಗಳೇ ಜನರ ಮನಗೆದ್ದಿವೆ. ಬೆರಳೆಣಿಕೆಯ ಮೂಲ ಹಿಂದಿ ಚಿತ್ರಗಳನ್ನು ಹೊರತುಪಡಿಸಿ ಮತ್ತೆಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಮಾಡುವಲ್ಲಿ ಹಿಂದೆ ಬಿದ್ದಿವೆ. ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಹಿಂದಿ ಅವತರಣಿಕೆ ಮೊದಲ ದಿನವೇ ಸುಮಾರು 53.95 ಕೋಟಿ ರೂಗಳನ್ನು ಬಾಚಿಕೊಂಡಿತ್ತು. ‘ಆರ್​ಆರ್​ಆರ್​’ ಚಿತ್ರ 20.07 ಕೋಟಿ ಗಳಿಸಿತ್ತು.

ಇತ್ತೀಚೆಗೆ ತೆರೆಕಂಡಿದ್ದ ‘ಭೂಲ್ ಭುಲಯ್ಯ 2’ ಮೊದಲ ದಿನ ಸುಮಾರು 14.11 ಕೋಟಿ ರೂ ಗಳಿಸಿತ್ತು. ‘ಬಚ್ಚನ್ ಪಾಂಡೆ’ 13.25 ಕೋಟಿ ರೂ, ‘ಸಾಮ್ರಾಟ್ ಪೃಥ್ವಿರಾಜ್’ 10.71 ಕೋಟಿ ರೂ, ‘ಗಂಗೂಬಾಯಿ ಕಾಠಿಯಾವಾಡಿ’ 10.50 ಕೋಟಿ ರೂ ಗಳಿಸಿವೆ.

ಇದನ್ನೂ ಓದಿ: ‘ವಿಕ್ರಮ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​; ಮೊದಲ ದಿನ ಕಮಲ್​ ಹಾಸನ್​ ಸಿನಿಮಾ ಗಳಿಸಿದ್ದೆಷ್ಟು?

ಬೇರೆಲ್ಲಾ ಬಾಲಿವುಡ್​ ಚಿತ್ರಗಳಿಗೆ ಹೋಲಿಸಿದರೆ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಬಜೆಟ್​ ತೀರಾ ಹೆಚ್ಚು. ಹೀಗಾಗಿ ನಿರ್ಮಾಣ ಸಂಸ್ಥೆ ‘ಯಶ್ ರಾಜ್ ಫಿಲ್ಮ್ಸ್​​’ ಗೆ ಚಿತ್ರಮಂದಿರಗಳ ಗಳಿಕೆಯೇ ಜೀವಾಳವಾಗಿದೆ. ಮುಂದಿನ ದಿನಗಳಲ್ಲಿ ಅಕ್ಷಯ್ ನಟನೆಯ ಚಿತ್ರ ಎಷ್ಟು ಮೊತ್ತ ಗಳಿಸಲಿದೆ ಎಂದು ಕಾದುನೋಡಬೇಕಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:19 pm, Sat, 4 June 22