ಸಂಚಾರಿ ವಿಜಯ್​ ಪುಣ್ಯ ಸ್ಮರಣೆ: ಪ್ರತಿಭಾವಂತ ನಟನ ನೆನಪಿಗಾಗಿ ಹುಟ್ಟೂರಿನಲ್ಲಿ ಪ್ರತಿಮೆ ನಿರ್ಮಾಣ

TV9 Digital Desk

| Edited By: ಮದನ್​ ಕುಮಾರ್​

Updated on:Jun 04, 2022 | 12:31 PM

ಸಂಚಾರಿ ವಿಜಯ್​ ಇಲ್ಲದೇ ಒಂದು ವರ್ಷ ಕಳೆಯುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ ಇಂದು (ಜೂನ್​ 4) ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯ ಮಾಡಲಾಗಿದೆ.

Jun 04, 2022 | 12:31 PM
ನಟ ಸಂಚಾರಿ ವಿಜಯ್​ ಅವರನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ. ಕಳೆದ ವರ್ಷ ಜೂನ್​ 15ರಂದು ನಿಧನರಾದ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಯಿತು. ವಿಜಯ್​ ಇಲ್ಲದೇ ಒಂದು ವರ್ಷ ಕಳೆಯುತ್ತಿದೆ. ಹಿಂದೂ ಪಂಚಾಂಗದ ಪ್ರಕಾರ ಇಂದು (ಜೂನ್​ 4) ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯ ಮಾಡಲಾಗಿದೆ.

Late actor Sanchari Vijay statue unveiled by family members in Panchanahalli

1 / 5
ಅದ್ಭುತ ನಟನೆಯಿಂದ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಅಪ್ರತಿಮ ಕಲಾವಿದ ಸಂಚಾರಿ ವಿಜಯ್​. ಅವರು ಇಲ್ಲ ಎಂಬ ಕೊರಗು ಅಭಿಮಾನಿಗಳು ಮತ್ತು ಆಪ್ತರ ಎದೆಯಲ್ಲಿ ಎಂದಿಗೂ ಕೊನೆಯಾಗುವುದಿಲ್ಲ. ಅವರ ನೆನಪುಗಳು ಅಮರ. ಅವರ ನೆನಪಿಗಾಗಿ ಪ್ರತಿಮೆ ನಿರ್ಮಿಸಲಾಗಿದೆ.

Late actor Sanchari Vijay statue unveiled by family members in Panchanahalli

2 / 5
ಸಂಚಾರಿ ವಿಜಯ್​ ಅವರ ಅಂತ್ಯ ಸಂಸ್ಕಾರವನ್ನು ಹುಟ್ಟೂರಾದ ಪಂಚನಹಳ್ಳಿಯಲ್ಲಿ ಮಾಡಲಾಗಿತ್ತು. ಇಂದು ಅಲ್ಲಿಯೇ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಗಿದೆ. ಅಂತ್ಯ ಸಂಸ್ಕಾರ ನಡೆದ ಜಾಗದಲ್ಲಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.

3 / 5
ಪುಣ್ಯ ಸ್ಮರಣೆ ಮತ್ತು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಂಚಾರಿ ವಿಜಯ್​ ಕುಟುಂಬದವರು ಮತ್ತು ಆಪ್ತರು ಪಾಲ್ಗೊಂಡಿದ್ದಾರೆ. ವಿಜಯ್​ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಕೋರಲಾಗಿದೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನನ್ನು ಸ್ಮರಿಸುತ್ತಿದ್ದಾರೆ.

4 / 5
‘ಹರಿವು’, ‘ನಾನು ಅವನಲ್ಲ ಅವಳು’, ‘ನಾತಿಚರಾಮಿ’ ಮುಂತಾದ ಗಮನಾರ್ಹ ಸಿನಿಮಾಗಳಲ್ಲಿ ಸಂಚಾರಿ ವಿಜಯ್​ ನಟಿಸಿದ್ದರು. ‘ನಾನು ಅವನಲ್ಲ ಅವಳು’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್​ಫೇರ್​ ಪ್ರಶಸ್ತಿ ಪಡೆದಿದ್ದ ಪ್ರತಿಭಾವಂತ ಅವರು. ಪ್ರೇಕ್ಷಕರ ಮನದಲ್ಲಿ ಸಿನಿಮಾಗಳ ಮೂಲಕ ಅವರು ಶಾಶ್ವತ ಸ್ಥಾನ ಪಡೆದಿದ್ದಾರೆ.

5 / 5

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada