- Kannada News Photo gallery After RRR and Dhaakad Akshay Kumar and Manushi Chillar starring Samrat Prithviraj team visits to Varanasi to promote film
Samrat Prithviraj: ‘ಆರ್ಆರ್ಆರ್’, ‘ಧಾಕಡ್’ ಹಾದಿಯಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’; ವಾರಾಣಸಿಯಲ್ಲಿ ಚಿತ್ರದ ಪ್ರಚಾರ
Akshay Kumar | Manushi Chillar | Varanasi ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಪ್ರಚಾರದಲ್ಲಿ ಅಕ್ಷಯ್ ಕುಮಾರ್ ಬ್ಯುಸಿಯಾಗಿದ್ದಾರೆ. ಇದೀಗ ಚಿತ್ರತಂಡ ವಾರಾಣಸಿಗೆ ಭೇಟಿ ನೀಡಿದೆ. ‘ಆರ್ಆರ್ಆರ್’ ಹಾಗೂ ‘ಧಾಕಡ್’ ನಂತರ ಅಕ್ಷಯ್ ನಟನೆಯ ಚಿತ್ರವೂ ಕಾಶಿಯಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.
Updated on:Jun 02, 2022 | 9:56 AM

ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರ ಜೂನ್ 3ರಂದು ವಿಶ್ವಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಪ್ರಚಾರ ಕಾರ್ಯದಲ್ಲಿ ಅಕ್ಷಯ್ ಬ್ಯುಸಿಯಾಗಿದ್ದಾರೆ.

ಅಕ್ಷಯ್ ಅವರೊಂದಿಗೆ ನಟಿ ಮಾನುಷಿ ಚಿಲ್ಲರ್ ಹಾಗೂ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಇತ್ತೀಚೆಗೆ ವಾರಾಣಸಿಗೆ ಭೇಟಿ ನೀಡಿದ್ದಾರೆ.

ಚಿತ್ರತಂಡ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ನಂತರ ಗಂಗಾಘಾಟ್ ಸೇರಿದಂತೆ ಪವಿತ್ರ ಸ್ಥಳಗಳಲ್ಲಿ ಪೂಜೆ ಸಲ್ಲಿಸಿದೆ.

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಈ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ವೃತ್ತಿ ಜೀವನಕ್ಕೆ ಈ ಚಿತ್ರ ಮಹತ್ವದ್ದಾಗಿದೆ.

ಇತ್ತೀಚೆಗೆ ಕರಣಿಸೇನ ಸಂಘಟನೆಯ ಆಕ್ಷೇಪದ ನಂತರ ಈ ಹಿಂದೆ ಇದ್ದ ‘ಪೃಥ್ವಿರಾಜ್’ ಶೀರ್ಷಿಕೆಯನ್ನು ಬದಲಾಯಿಸಿ ‘ಸಾಮ್ರಾಟ್ ಪೃಥ್ವಿರಾಜ್’ ಎಂದು ಮರುನಾಮಕರಣ ಮಾಡಲಾಗಿತ್ತು.

ಚಿತ್ರವು ಸುಮಾರು 300 ಕೋಟಿ ರೂ ವೆಚ್ಚದಲ್ಲಿ ತಯಾರಾಗಿದ್ದು, ಯಶ್ ರಾಜ್ ಫಿಲ್ಮ್ಸ್ ಸಿನಿಮಾವನ್ನು ನಿರ್ಮಾಣ ಮಾಡಿದೆ.

ಬಾಲಿವುಡ್ಗೆ ಈ ಚಿತ್ರದ ಗೆಲುವು ಬಹಳ ಮಹತ್ವದ್ದಾಗಿದೆ. ಇದಕ್ಕೆ ಪೂರಕವಾಗಿ ಅಕ್ಷಯ್ ನಟನೆಯ ಚಿತ್ರ ದೊಡ್ಡ ಮಟ್ಟದ ಪ್ರಚಾರ ಕಾರ್ಯವನ್ನೂ ನಡೆಸುತ್ತಿದೆ.

ಈ ಹಿಂದೆ ‘ಆರ್ಆರ್ಆರ್’ ಹಾಗೂ ‘ಧಾಕಡ್’ ಚಿತ್ರತಂಡಗಳು ವಾರಾಣಸಿಯಲ್ಲಿ ಪ್ರಚಾರ ನಡೆಸಿದ್ದವು. ಈ ಹಿಂದೆ ಬಾಲಿವುಡ್ ಚಿತ್ರಗಳು ಅಲ್ಲಿ ಪ್ರಚಾರ ನಡೆಸಿದ್ದು ಕಡಿಮೆ. ಇದೀಗ ಅಕ್ಷಯ್ ನಟನೆಯ ಚಿತ್ರ ಅಲ್ಲಿ ಪ್ರಚಾರ ನಡೆಸಿರುವುದು ಗಮನಸೆಳೆದಿದೆ.
Published On - 9:54 am, Thu, 2 June 22




