‘ಜೇಮ್ಸ್’ ನಿರ್ಮಾಪಕ ಕಿಶೋರ್ ಆರೋಗ್ಯ ಗಂಭೀರವಾಗಲು ಕಾರಣವೇನು? ವೈದ್ಯರು ನೀಡಿದ್ರು ಇಂಚಿಂಚು ಮಾಹಿತಿ
ಕಿಶೋರ್ ಪತ್ತಿಕೊಂಡ ಅವರ ಆರೋಗ್ಯಸ್ಥಿತಿ ಇಷ್ಟು ಗಂಭೀರವಾಗಲು ಕಾರಣವೇನು ಎಂಬುದನ್ನು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ವಿವರಿಸಿದ್ದಾರೆ
ನಿರ್ಮಾಪಕ ಕಿಶೋರ್ ಪತ್ತಿಕೊಂಡ (Kishore Pathikonda) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ ಜೂನ್ 5ರಂದು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಐಸಿಯುನಲ್ಲಿ (ICU) ಇರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಿಶೋರ್ ಪತ್ತಿಕೊಂಡ ಅವರ ಆರೋಗ್ಯಸ್ಥಿತಿ ಇಷ್ಟು ಗಂಭೀರವಾಗಲು ಕಾರಣವೇನು ಎಂಬುದನ್ನು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ವಿವರಿಸಿದ್ದಾರೆ. ಪುನೀತ್ ರಾಜ್ಕುಮಾರ್ (Puneeth Rajkumar) ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದರು.
ಇದನ್ನೂ ಓದಿ: ‘ಕಿಶೋರ್ ಪತ್ತಿಕೊಂಡಗೆ ಮೆದುಳಿನ ಸರ್ಜರಿ ಆಗಿದೆ, ಅವರು ಔಟ್ ಆಫ್ ಡೇಂಜರ್’; ಧೀರೇನ್ ರಾಮ್ಕುಮಾರ್
‘ಐರನ್ ಮ್ಯಾನ್ ತರ ಇದ್ರು, ಯಾಕೆ ಹಿಂಗಾಯ್ತೋ ಗೊತ್ತಿಲ್ಲ’; ಕಿಶೋರ್ ಪತ್ತಿಕೊಂಡ ಬಗ್ಗೆ ತಂದೆ ರಿಯಾಕ್ಷನ್
Latest Videos