‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಬಗ್ಗೆ ಸುದೀಪ್ ಮಾತು; ಲೀಕ್ ಆಯ್ತು ಲುಕ್
Kannada Bigg Boss Season 9: ‘ಬಿಗ್ ಬಾಸ್’ ಶೋ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಎಲ್ಲಾ ಸೀಸನ್ಗಳು ಯಶಸ್ಸು ಕಂಡಿದೆ. ಎಂಟನೇ ಸೀಸನ್ ಕಳೆದ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಂಡಿತ್ತು. ಈಗ ಹೊಸ ಸೀಸನ್ ಆಗಸ್ಟ್ನಲ್ಲೇ ಆರಂಭವಾಗುವ ನಿರೀಕ್ಷೆ ಇದೆ.
‘ಬಿಗ್ ಬಾಸ್ ಕನ್ನಡ ಸೀಸನ್ 9’ರ (Bigg Boss Kannada 9) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಯಾರೆಲ್ಲ ದೊಡ್ಮನೆ ಒಳಗೆ ಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ. ಹೀಗಿರುವಾಗಲೇ ಹೊಸ ಸೀಸನ್ನ ಪ್ರೋಮೋ ಶೂಟಿಂಗ್ ಪೂರ್ಣಗೊಂಡಿದೆ. ಈ ಬಗ್ಗೆ ಕಿಚ್ಚ ಸುದೀಪ್ (Kichcha Sudeep) ಕಡೆಯಿಂದಲೇ ಅಪ್ಡೇಟ್ ಸಿಕ್ಕಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ತೆರೆಕಂಡ ಬಳಿಕ ಹೊಸ ಸೀಸನ್ ಆರಂಭ ಆಗಲಿದೆ ಎನ್ನಲಾಗುತ್ತಿದೆ.
‘ಬಿಗ್ ಬಾಸ್’ ಶೋ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಎಲ್ಲಾ ಸೀಸನ್ಗಳು ಯಶಸ್ಸು ಕಂಡಿದೆ. ಎಂಟನೇ ಸೀಸನ್ ಕಳೆದ ಆಗಸ್ಟ್ ತಿಂಗಳಲ್ಲಿ ಪೂರ್ಣಗೊಂಡಿತ್ತು. ಈಗ ಹೊಸ ಸೀಸನ್ ಆಗಸ್ಟ್ನಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಬಿಗ್ ಬಾಸ್ ಹೊಸ ಸೀಸನ್ ಪ್ರೋಮೋ ಹೇಗಿರಲಿದೆ ಎನ್ನುವ ಕುತೂಹಲ ಕಾಡುತ್ತಿದೆ. ‘ಬಿಗ್ ಬಾಸ್ ಕನ್ನಡ ಹೊಸ ಸೀಸನ್ಗಾಗಿ ಪ್ರೋಮೋ ಶೂಟ್ ಮುಗಿಸಿದೆ. ಇಡೀ ತಂಡಕ್ಕೆ ನನ್ನ ಧನ್ಯವಾದ. ಈ ಶೂಟ್ನಲ್ಲಿ ಭಾಗಿಯಾದ ಎಲ್ಲರಿಗೂ ಥ್ಯಾಂಕ್ಸ್. ಪ್ರೋಮೋ ಶೀಘ್ರವೇ ಬರಲಿದೆ. ನಿಜಕ್ಕೂ ಇದು ಸೂಪರ್ ಘೋಷಣೆ’ ಎಂದಿದ್ದಾರೆ ಕಿಚ್ಚ ಸುದೀಪ್.
ಹೊಸ ಸೀಸನ್ ಆರಂಭಕ್ಕೂ ಮೊದಲೇ ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆಗೆ ತೆರಳಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಜನಸಾಮಾನ್ಯರಿಗೂ ಅವಕಾಶ ನೀಡಬೇಕು ಎನ್ನುವ ಕೋರಿಕೆ ಇಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ವ್ಯಕ್ತಿಗಳಿಗೆ ಕಳೆದ ಸೀಸನ್ನಲ್ಲಿ ಅವಕಾಶ ನೀಡಲಾಗಿತ್ತು. ಈ ಬಾರಿಯೂ ಅದು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಇದರ ಜತೆಗೆ ಹಿರಿತೆರೆ ಹಾಗೂ ಕಿರುತೆರೆಯಿಂದ ಯಾರು ಆಗಮಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Exciting promo shoot for the new #BigBossKannada. Thanks to the entire team for all ua efforts,, and also to all those lovely people who participated in the shoot. You all,,look forward to the promo soon ,,, its a supaa announcement . ?????@ColorsKannada
— Kichcha Sudeepa (@KicchaSudeep) July 13, 2022
Every Girls Reaction After Seeing This Pic ?
En Boss @KicchaSudeep Nim Secret@KicchaSudeep || #VikrantRona#VikrantRonaJuly28 || #BBK9 pic.twitter.com/KqjmX5D7R1
— Kicchana Crazy Memes (@KicchanaMemes) July 13, 2022
ಇದನ್ನೂ ಓದಿ: ‘ಬಿಗ್ ಬಾಸ್’ ಹೊಸ ಸೀಸನ್ ಬಗ್ಗೆ ಆರಂಭವಾಗಿದೆ ಗುಸುಗುಸು; ಆರಂಭ ಯಾವಾಗ?
ಕಿಚ್ಚ ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಜುಲೈ 28ರಂದು ತೆರೆಗೆ ಬರಲಿದೆ. ಈ ಸಿನಿಮಾ ತೆರೆಕಂಡ ಬಳಿಕ ಬಿಗ್ ಬಾಸ್ ಆರಂಭ ಆಗಲಿದೆ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಕೊವಿಡ್ ಅಬ್ಬರ ಇಲ್ಲದ ಕಾರಣ ಈ ಬಾರಿ ಅದ್ದೂರಿಯಾಗಿ ‘ಬಿಗ್ ಬಾಸ್’ ಆರಂಭ ಆಗಲಿದೆ ಎನ್ನಲಾಗುತ್ತಿದೆ.
Published On - 7:10 pm, Wed, 13 July 22