ಹರ್ಷ-ಭುವಿ ಮದುವೆಯಿಂದ ಅರ್ಧಕ್ಕೆ ನಿರ್ಗಮಿಸಿದ ‘ಕನ್ನಡತಿ’ಯ ರತ್ನಮಾಲಾ ನಿಜಕ್ಕೂ ಇರೋದೆಲ್ಲಿ? ಇಲ್ಲಿದೆ ಉತ್ತರ

ಚಿತ್ಕಲಾ ಬಿರಾದಾರ ಅವರು ‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರ ಮಾಡುತ್ತಿದ್ದಾರೆ. ಅವರು ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ.

ಹರ್ಷ-ಭುವಿ ಮದುವೆಯಿಂದ ಅರ್ಧಕ್ಕೆ ನಿರ್ಗಮಿಸಿದ ‘ಕನ್ನಡತಿ’ಯ ರತ್ನಮಾಲಾ ನಿಜಕ್ಕೂ ಇರೋದೆಲ್ಲಿ? ಇಲ್ಲಿದೆ ಉತ್ತರ
TV9kannada Web Team

| Edited By: Rajesh Duggumane

Jul 13, 2022 | 6:30 AM

‘ಕನ್ನಡತಿ’ (Kannadathi) ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆ ಆಗಿದೆ. ಇದು ಅವರ ಫ್ಯಾನ್ಸ್​ಗೆ ಖುಷಿ ನೀಡಿದೆ. ಅವರು ಮದುವೆ ಆಗಬೇಕು ಎಂಬುದು ಅವರ ಫ್ಯಾನ್ಸ್​ನ​ ಹಲವು ಸಮಯದ ಕನಸಾಗಿತ್ತು. ಕೊನೆಗೂ ಈ ಕನಸು ನನಸಾಗಿದೆ. ಅದ್ದೂರಿಯಾಗಿ ಇವರ ಮದುವೆ ನೆರವೇರಿದೆ. ಈ ಮಧ್ಯೆ ಫ್ಯಾನ್ಸ್​ಗೆ ಬೇಸರವಾಗುವಂತಹ ವಿಚಾರ ಒಂದು ಜರುಗಿತ್ತು. ಹರ್ಷನ ತಾಯಿ ರತ್ನಮಾಲಾ ಮದುವೆ ಮುಗಿಯುತ್ತಿದ್ದಂತೆ ಧಾರಾವಾಹಿಯಿಂದ ನಿರ್ಗಮಿಸಿದರು. ರತ್ನಮಾಲಾ ಮರಳುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ಉತ್ತರ ಇಲ್ಲಿದೆ.

ಚಿತ್ಕಲಾ ಬಿರಾದಾರ ಅವರು ‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರ ಮಾಡುತ್ತಿದ್ದಾರೆ. ಅವರು ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಅವರ ನಟನೆಯನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ರತ್ನಮಾಲಾ ಪಾತ್ರ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟವಾಗಿದೆ. ಹರ್ಷ ಹಾಗೂ ಭುವಿ ಮದುವೆ ಸಂದರ್ಭದಲ್ಲಿ ರತ್ನಮಾಲಾ ಆರೋಗ್ಯ ಹದಗೆಟ್ಟಿದೆ ಎಂದು ತೋರಿಸಲಾಯಿತು. ಚಿಕಿತ್ಸೆ ಕಾರಣದಿಂದ ಅವರನ್ನು ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಧಾರಾವಾಹಿಯಲ್ಲಿ ಹೇಳಲಾಗಿದೆ. ಅವರು ನಿಜಕ್ಕೂ ಈಗ ಇರುವುದು ಅಮೆರಿಕದಲ್ಲಿಯೇ. ವೆಕೇಷನ್​ ತೆಗೆದುಕೊಂಡು ಚಿತ್ಕಲಾ ಅವರು ಅಮೆರಿಕ ತೆರಳಿದ್ದಾರೆ.

ಚಿತ್ಕಲಾ ಅವರು ಜಗದೀಶ್ ಅವರನ್ನು ಮದುವೆ ಆಗಿದ್ದಾರೆ. ಅವರ ದಾಂಪತ್ಯಕ್ಕೆ ಈಗ 30 ವರ್ಷ. ವಿವಾಹ ವಾರ್ಷಿಕೋತ್ಸವ ಆಚರಣೆಗೆ ಈ ದಂಪತಿ ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಚಿತ್ಕಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ವೆಕೇಷನ್​ ಮುಗಿಸಿ ಸಾಕು. ಬೇಗ ಮನೆಗೆ ಬನ್ನಿ’ ಎಂದು ಚಿತ್ಕಲಾ ಎದುರು ಫ್ಯಾನ್ಸ್ ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: Kiran Raj: ‘ಕನ್ನಡತಿ’ ಸೀರಿಯಲ್ ನಟ​ ಕಿರಣ್​ ರಾಜ್​ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ

ಇದನ್ನೂ ಓದಿ

‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಕಾಣಿಸಿಕೊಳ್ಳದಿದ್ದರೂ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದಾಳೆ. ಭುವಿಗೆ ಕರೆ ಮಾಡಿ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಳ್ಳುವಂತೆ ಕೋರಿದ್ದಾಳೆ ರತ್ನಮಾಲಾ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada