ಹರ್ಷ ಮತ್ತು ಭುವಿ ಮದುವೆ ನೋಡಲು ಇರುವುದಿಲ್ಲ ರತ್ನಮಾಲಾ? ‘ಕನ್ನಡತಿ’ ಮದುವೆಯಲ್ಲಿ ಸ್ಮಶಾನದ ವಾತಾವರಣ

ಮದುವೆಗೂ ಮೊದಲು ನಡೆಯುವ ಅರಿಷಿಣ ಶಾಸ್ತ್ರ ನೆರವೇರಿದೆ. ಈ ಶಾಸ್ತ್ರವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಆದರೆ, ಆ ಸಂದರ್ಭದಲ್ಲಿ ರತ್ನಮಾಲಾ ಅಲ್ಲೆಲ್ಲೂ ಕಾಣಿಸಿಕೊಳ್ಳಲೇ ಇಲ್ಲ.

ಹರ್ಷ ಮತ್ತು ಭುವಿ ಮದುವೆ ನೋಡಲು ಇರುವುದಿಲ್ಲ ರತ್ನಮಾಲಾ? ‘ಕನ್ನಡತಿ’ ಮದುವೆಯಲ್ಲಿ ಸ್ಮಶಾನದ ವಾತಾವರಣ
ಹರ್ಷ ಮತ್ತು ಭುವಿ ಮದುವೆ ನೋಡಲು ಇರುವುದಿಲ್ಲ ರತ್ನಮಾಲಾ?
TV9kannada Web Team

| Edited By: Rajesh Duggumane

Jun 10, 2022 | 7:00 AM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಈಗ ಮದುವೆ ಸಂಭ್ರಮ ಮನೆ ಮಾಡಿದೆ. ಹರ್ಷ ಹಾಗೂ ಭುವಿ ಮದುವೆ ಆಗುತ್ತಿದ್ದಾರೆ. ಈ ವಿಚಾರ ವೀಕ್ಷಕರಿಗೆ ಖುಷಿ ನೀಡಿದೆ. ಈ ಮದುವೆ ಕಣ್ತುಂಬಿಕೊಳ್ಳಲು ಹರ್ಷ ಹಾಗೂ ಭುವಿ ಫ್ಯಾನ್ಸ್ ಕಾದು ಕೂತಿದ್ದಾರೆ. ಆದರೆ, ಈ ಮದುವೆಗೆ ಇರುವ ವಿಘ್ನಗಳು ಒಂದೆರಡಲ್ಲ. ಇದನ್ನು ದಾಟಿ ಹರ್ಷ ಹಾಗೂ ಭುವಿ ಹೇಗೆ ಮದುವೆ ಆಗುತ್ತಾರಾ ಅನ್ನೋದು ಸದ್ಯದ ಕುತೂಹಲ. ಈ ಮಧ್ಯೆ ಹರ್ಷನ ತಾಯಿ ರತ್ನಮಾಲಾ ಆರೋಗ್ಯ ತೀವ್ರ ಹದಗೆಟ್ಟಿದೆ. ಮದುವೆ ಮನೆಯಲ್ಲಿ ಯಾವುದೇ ಕ್ಷಣದಲ್ಲೂ ಸ್ಮಶಾನದ ವಾತಾವರಣ ನಿರ್ಮಾಣ ಆಗುವ ಎಚ್ಚರಿಕೆ ನೀಡಿದ್ದಾರೆ ವೈದ್ಯರು.

ಭುವಿ ಹಾಗೂ ಹರ್ಷ ಪರಸ್ಪರ ಪ್ರೀತಿಸಿದವರು. ಹರ್ಷನೇ ಮೊದಲು ಭುವಿ ಎದುರು ಪ್ರೀತಿ ತೋಡಿಕೊಂಡಿದ್ದ. ಇದನ್ನು ಆಕೆ ಒಪ್ಪಿಕೊಂಡಳು. ಈಗ ಇವರಿಬ್ಬರೂ ಮದುವೆ ಆಗುತ್ತಿರುವುದು ವೀಕ್ಷಕರಿಗೆ ಖುಷಿಯ ವಿಚಾರವೇ. ಮದುವೆಗೂ ಮೊದಲು ನಡೆಯುವ ಅರಿಷಿಣ ಶಾಸ್ತ್ರ ನೆರವೇರಿದೆ. ಈ ಶಾಸ್ತ್ರವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಆದರೆ, ಆ ಸಂದರ್ಭದಲ್ಲಿ ರತ್ನಮಾಲಾ ಅಲ್ಲೆಲ್ಲೂ ಕಾಣಿಸಿಕೊಳ್ಳಲೇ ಇಲ್ಲ.

ರತ್ನಮಾಲಾ ಆರೋಗ್ಯ ಹದಗೆಟ್ಟಿರುವ ವಿಚಾರ ವೈದ್ಯರಿಗೆ ತಿಳಿದು ಮನೆಗೆ ಬಂದಿದ್ದಾರೆ. ರತ್ನಮಾಲಾಳನ್ನು ಆಸ್ಪತ್ರೆಗೆ ದಾಖಲು ಮಾಡದೆ ಇದ್ದರೆ ಯಾವ ಸಂದರ್ಭದಲ್ಲಿ ಬೇಕಿದ್ದರೂ ಅವಳು ಸಾಯಬಹುದು ಎನ್ನುವ ಎಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲ, ರತ್ನಮಾಲಾಳಿಗೆ ಇರುವ ಕಾಯಿಲೆ ತುಂಬಾನೇ ವಿಚಿತ್ರವಾದುದ್ದು. ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ಸಿಗದೇ ಇದ್ದರೆ ಅವಳಿಗೆ ಅರಳುಮರಳು ಶುರುವಾಗಬಹುದು. ಈ ಮದುವೆಯನ್ನು ರತ್ನಮಾಲಾ ನೋಡದೆಯೂ ಇರಬಹುದು ಎನ್ನುವ ಎಚ್ಚರಿಕೆ ವೈದ್ಯರ ಕಡೆಯಿಂದ ಬಂದಿದೆ. ಹೀಗಾಗಿ, ರತ್ನಮಾಲಾ ಸಾವು ಈ ಜೋಡಿಯ ಮದುವೆ ನಿಲ್ಲಲು ಕಾರಣವಾಗಬಹುದು.

ಇದನ್ನೂ ಓದಿ: ‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ

ಹರ್ಷನನ್ನು ಮದುವೆ ಆಗಲು ವರುಧಿನಿ ಪ್ರಯತ್ನಿಸುತ್ತಿದ್ದಾಳೆ. ಕೊನೆಯ ಕ್ಷಣದವರೆಗೂ ಅವಳು ಹೋರಾಡೋಕೆ ರೆಡಿ ಇದ್ದಾಳೆ. ಇವಳಿಗೆ ಕ್ರಿಮಿನಲ್ ಸಾನಿಯಾ ಸಾಥ್ ನೀಡುತ್ತಿದ್ದಾಳೆ. ಹರ್ಷ ಹಾಗೂ ಭುವಿ ಮದುವೆ ಸಾಂಗತ್ಯವಾಗಿ ನೆರವೇರಲಿದೆಯೇ ಅನ್ನೋದು ಸದ್ಯದ ಕುತೂಹಲ. ಭುವಿಗೆ ತುರ್ತಾಗಿ ಹಣ ಬೇಕಿದೆ. ಮದುವೆ ಕೆಲಸಗಳಿಗೆ ಹಣ ಹೊಂದಿಸಲು ಅವಳ ಬಳಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬ್ಯಾಂಕ್​ನಿಂದ ಸಾಲ ಪಡೆಯುತ್ತಿದ್ದಾಳೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada