AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಕು ಡೊಂಕು ದಾರಿಯಲ್ಲಿ ಬಂದ ‘ಹೇ ಫಕೀರಾ’; ಪ್ರೇಕ್ಷಕರಿಗೆ ಇಷ್ಟವಾಯ್ತು ‘ವಿಕ್ರಾಂತ್ ರೋಣ’ ಹೊಸ ಹಾಡು

ಒಂದು ಸಿನಿಮಾ ಹಿಟ್ ಆಗೋಕೆ ಹಾಡುಗಳ ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ. ಈಗ ‘ವಿಕ್ರಾಂತ್ ರೋಣ’ ಸಿನಿಮಾದ ಹಾಡುಗಳು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ.

ಅಂಕು ಡೊಂಕು ದಾರಿಯಲ್ಲಿ ಬಂದ ‘ಹೇ ಫಕೀರಾ’; ಪ್ರೇಕ್ಷಕರಿಗೆ ಇಷ್ಟವಾಯ್ತು ‘ವಿಕ್ರಾಂತ್ ರೋಣ’ ಹೊಸ ಹಾಡು
ನಿರೂಪ್
TV9 Web
| Edited By: |

Updated on:Jul 12, 2022 | 6:08 PM

Share

‘ವಿಕ್ರಾಂತ್ ರೋಣ’ ಸಿನಿಮಾದ (Vikrant Rona Movie) ಮೂರನೇ ಹಾಡು ರಿಲೀಸ್ ಆಗಿದೆ. ‘ಹೇ ಫಕೀರಾ’ (Hey Fakira Song) ಲಿರಿಕಲ್ ಹಾಡನ್ನು ಇಂದು (ಜುಲೈ 12) ಬಿಡುಗಡೆ ಮಾಡಲಾಗಿದೆ. ಈ ಸಾಂಗ್​ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅವರು ಸಂಜು ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಜು ಪಾತ್ರವನ್ನು ಬಣ್ಣಿಸುವ ರೀತಿಯಲ್ಲಿ ಈ ಹಾಡು ಮೂಡಿ ಬಂದಿದೆ.

ಒಂದು ಸಿನಿಮಾ ಹಿಟ್ ಆಗೋಕೆ ಹಾಡುಗಳ ಪಾತ್ರ ತುಂಬಾನೇ ಮುಖ್ಯವಾಗಿರುತ್ತದೆ. ಈಗ ‘ವಿಕ್ರಾಂತ್ ರೋಣ’ ಸಿನಿಮಾದ ಎರಡು ಹಾಡುಗಳು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. ಈ ಚಿತ್ರದ ‘ರಾ ರಾ ರಕ್ಕಮ್ಮ’ ಹಾಡಂತೂ ಧೂಳೆಬ್ಬಿಸಿದೆ. ನಂತರ ರಿಲೀಸ್ ಆದ ‘ರಾಜಕುಮಾರಿ..’ ಲಾಲಿ ಹಾಡನ್ನು ಸುದೀಪ್ ಫ್ಯಾನ್ಸ್ ಇಷ್ಟಪಟ್ಟರು. ಈಗ ಮೂರನೇ ಹಾಡು ‘ಹೇ ಫಕೀರಾ..’ ಕೂಡ ಸಾಕಷ್ಟು ವೀವ್ಸ್ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ
Image
ಬಾಗಲಕೋಟೆಯಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ನೂರಾರು ಜನರಿಂದ ಭರ್ಜರಿ ಸ್ಟೆಪ್
Image
Jacqueline Fernandez: ಸೆನ್ಸೇಶನ್ ಸೃಷ್ಟಿಸಿದ ‘ರಾ ರಾ ರಕ್ಕಮ್ಮ’; ಕನ್ನಡದಲ್ಲೇ ಧನ್ಯವಾದ ಹೇಳಿದ ಜಾಕ್ವೆಲಿನ್​
Image
 ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ
Image
Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

‘ಅಂಕು ಡೊಂಕು ದಾರಿ..’ ಎಂದು ಆರಂಭವಾಗುವ ಈ ಹಾಡಿಗೆ ಸಂಜಿತ್ ಹೆಗಡೆ, ಚಿನ್ಮಯಿ ಶ್ರೀಪಾದ್, ಬಿ.ಅಜನೀಶ್​ ಲೋಕನಾಥ್​, ಅನೂಪ್ ಭಂಡಾರಿ ಧ್ವನಿ ನೀಡಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದ ಇತರ ಹಾಡುಗಳನ್ನು ಕೇಳಲು ಪ್ರೇಕ್ಷಕರು ಕಾಯುತ್ತಿದ್ದಾರೆ.

ಇದನ್ನೂ ಓದಿ: ರೀ-ಕ್ರಿಯೇಟ್ ಆಯ್ತು ‘ವಿಕ್ರಾಂತ್​ ರೋಣ’ ಸಿನಿಮಾದ ‘ರಾ ರಾ ರಕ್ಕಮ್ಮ..’ ಹಾಡು

ಈಗಾಗಲೇ ರಿಲೀಸ್ ಆಗಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೇಲರ್ ಗಮನ ಸೆಳೆಯುತ್ತಿದೆ. ಈ ಚಿತ್ರ ಸಖತ್ ಸಸ್ಪೆನ್ಸ್ ರೀತಿಯಲ್ಲಿ ಮೂಡಿ ಬಂದಿದೆ ಎಂಬುದು ಟ್ರೇಲರ್​ನಲ್ಲೇ ಗೊತ್ತಾಗಿದೆ. ಸುದೀಪ್ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅನೂಪ್ ಭಂಡಾರಿ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಜಾಕ್ ಮಂಜು ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜುಲೈ 28ರಂದು ಸಿನಿಮಾ ವಿಶ್ವಾದ್ಯಂತ  ರಿಲೀಸ್ ಆಗುತ್ತಿದೆ. ಈ ಚಿತ್ರ 3ಡಿ ಅವತರಣಿಕೆಯಲ್ಲೂ ರಿಲೀಸ್ ಆಗುತ್ತಿರುವುದು ವಿಶೇಷ.

Published On - 6:00 pm, Tue, 12 July 22

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು