BBK 9: ಈ ಬಾರಿ ಕನ್ನಡ ಬಿಗ್​ ಬಾಸ್​ನಲ್ಲಿ ಯಾರೆಲ್ಲ ಇರಬೇಕು? ಈಗಲೇ ಶುರುವಾಗಿದೆ ಚರ್ಚೆ

Bigg Boss Kannada Season 9: ಪ್ರತಿ ಬಾರಿಯೂ ಸಿನಿಮಾ ಮತ್ತು ಸೀರಿಯಲ್​ ಜಗತ್ತಿನ ಸೆಲೆಬ್ರಿಟಿಗಳಿಗೆ ಆದ್ಯತೆ ನೀಡಲಾಗುತ್ತದೆ. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ನೀಡಿ ಎಂಬ ಒತ್ತಾಯ ಕೇಳಿಬಂದಿದೆ.

BBK 9: ಈ ಬಾರಿ ಕನ್ನಡ ಬಿಗ್​ ಬಾಸ್​ನಲ್ಲಿ ಯಾರೆಲ್ಲ ಇರಬೇಕು? ಈಗಲೇ ಶುರುವಾಗಿದೆ ಚರ್ಚೆ
ಬಿಗ್ ಬಾಸ್ ಕನ್ನಡ
Follow us
TV9 Web
| Updated By: ಮದನ್​ ಕುಮಾರ್​

Updated on: Jul 13, 2022 | 2:29 PM

ಕನ್ನಡ ಕಿರುತೆರೆ ಪ್ರೇಕ್ಷಕರು ಬಿಗ್​ ಬಾಸ್​ (Bigg Boss Kannada) ಹೊಸ ಸೀಸನ್​ಗಾಗಿ ಕಾಯುತ್ತಿದ್ದಾರೆ. ಈ ರಿಯಾಲಿಟಿ ಶೋಗೆ ಅದರದ್ದೇ ಆದಂತಹ ವೀಕ್ಷಕರ ವರ್ಗ ಇದೆ. ಪ್ರತಿ ಬಾರಿ ಬಿಗ್​ ಬಾಸ್​ ಶುರುವಾದಾಗಲೂ ದೊಡ್ಡ ಸೆನ್ಸೇಷನ್​ ಕ್ರಿಯೇಟ್​ ಆಗುತ್ತದೆ. ಗ್ರ್ಯಾಂಡ್​ ಓಪನಿಂಗ್​ ಆಗುವುದಕ್ಕೂ ಮುನ್ನವೇ ಹತ್ತಾರು ಬಗೆಯ ಚರ್ಚೆ ಹುಟ್ಟಿಕೊಳ್ಳುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಕನ್ನಡ ಬಿಗ್​ ಬಾಸ್​ 9ನೇ ಸೀಸನ್​ (Bigg Boss Kannada Season 9) ಆರಂಭಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ವರ್ಷ ಯಾವೆಲ್ಲ ಸೆಲೆಬ್ರಿಟಿಗಳು ಸ್ಪರ್ಧಿಸಬಹುದು ಎಂಬ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ಕಲರ್ಸ್​ ಕನ್ನಡ ವಾಹಿನಿ (Colors Kannada) ಬಿಸ್ನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ‘ಬಿಗ್​ ಬಾಸ್​’ ಮನೆ ನಿರ್ಮಾಣ ಕಾರ್ಯದ ಬಗ್ಗೆ ಅಪ್​ಡೇಟ್​ ನೀಡಿದಾಗಿನಿಂದ ವೀಕ್ಷಕರ ವಲಯದಲ್ಲಿ ಕೌತುಕ ಹೆಚ್ಚಿದೆ.

ಎಲ್ಲ ಭಾಷೆಯಲ್ಲೂ ಬಿಗ್​ ಬಾಸ್​ ಕಾರ್ಯಕ್ರಮ ಫೇಮಸ್​ ಆಗಿದೆ. ಕನ್ನಡದಲ್ಲಿ ಈವರೆಗೂ 8 ಸೀಸನ್​ಗಳು ಯಶಸ್ವಿಯಾಗಿ ಮುಗಿದಿವೆ. ಈ ಬಾರಿಯೂ ಕಿಚ್ಚ ಸುದೀಪ್​ ಅವರು ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಪ್ರೋಮೋ ಶೂಟಿಂಗ್​ ಕೂಡ ಮುಗಿದಿದೆ. ಹಾಗಿದ್ದರೆ ಯಾರಿಗೆಲ್ಲ ಈ ಸಲ ದೊಡ್ಮನೆ ಪ್ರವೇಶಿಸುವ ಚಾನ್ಸ್​ ಸಿಗಲಿದೆ ಎಂಬುದನ್ನು ತಿಳಿಯಲು ವೀಕ್ಷಕರು ಕಾತರರಾಗಿದ್ದಾರೆ.

ಇದನ್ನೂ ಓದಿ
Image
‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
Image
ಬಿಗ್​ ಬಾಸ್​ ನಿರೂಪಕರು ಚೇಂಜ್​; ಅಧಿಕೃತ ಘೋಷಣೆ ಮಾಡಿದ ಸ್ಟಾರ್​ ನಟ; ವೀಕ್ಷಕರಿಗೆ ಬೇಸರ
Image
‘ಬಿಗ್​ ಬಾಸ್​’ ಮನೆಯಲ್ಲಿ ಅಗ್ನಿ ಅವಘಡ; ಸಾವು-ನೋವಿನ ಬಗ್ಗೆ ಆಗಿಲ್ಲ ವರದಿ
Image
ಬಿಗ್​ ಬಾಸ್​ ಗೆದ್ದವರ ಹಿಂದೆ ಲಾಬಿ ಇದೆಯೋ ಇಲ್ಲವೋ? ನೇರವಾಗಿ ಮಾತಾಡಿದ ಸ್ಪರ್ಧಿ ಕರಣ್​ ಕುಂದ್ರಾ

ಪ್ರತಿ ಬಾರಿಯೂ ಸಿನಿಮಾ ಮತ್ತು ಸೀರಿಯಲ್​ ಜಗತ್ತಿನ ಸೆಲೆಬ್ರಿಟಿಗಳಿಗೆ ಅವಕಾಶ ನೀಡಲಾಗುತ್ತದೆ. ಅದರಲ್ಲೂ ಕೊಂಚ ವಿವಾದಾತ್ಮಕ ವ್ಯಕ್ತಿಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ ಎಂದರೂ ತಪ್ಪಿಲ್ಲ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳಲ್ಲಿನ ಪ್ರತಿಭೆಗಳಿಗೆ ಈ ಸಲ ಕೂಡ ಚಾನ್ಸ್​ ಸಿಗಲಿದೆ. ಇತ್ತೀಚಿನ ತಿಂಗಳಲ್ಲಿ ವಿವಾದ ಮಾಡಿಕೊಂಡ ಸೆಲೆಬ್ರಿಟಿಗಳ ಮೇಲೂ ಬಿಗ್ ಬಾಸ್​ ಆಯೋಜಕರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಕೆಲವು ಸೀಸನ್​ಗಳಲ್ಲಿ ಸೆಲೆಬ್ರಿಟಿಗಳ ಜೊತೆಗೆ ಜನ ಸಾಮಾನ್ಯರಿಗೂ ಅವಕಾಶ ಸಿಕ್ಕ ಉದಾಹರಣೆ ಇದೆ. ಕಳೆದ ಸೀಸನ್​ನಲ್ಲಿ ಸೆಲೆಬ್ರಿಟಿಗಳ ಜೊತೆ ಕೆಲವು ಯೂಟ್ಯೂಬರ್​ಗಳು ಕೂಡ ಸ್ಪರ್ಧಿಸಿದ್ದರು. ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ನೀಡಬೇಕು ಎಂದು ಜನರು ಒತ್ತಾಯ ಹೇರುತ್ತಿದ್ದಾರೆ. ಕಮೆಂಟ್​ಗಳ ಮೂಲಕ ನೆಟ್ಟಿಗರು ತಮ್ಮ ಹಂಬಲ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್​ ಮೀಡಿಯಾದ ಹವಾ ಹೆಚ್ಚಿದೆ. ಇನ್​ಸ್ಟಾಗ್ರಾಮ್​, ಯೂಟ್ಯೂಬ್​, ಫೇಸ್​ಬುಕ್​ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರಿಗೂ ಈ ಬಾರಿಯ ಬಿಗ್​ ಬಾಸ್​ನಲ್ಲಿ ಚಾನ್ಸ್​ ಸಿಗಬಹುದು ಎಂಬ ನಿರೀಕ್ಷೆ ಇದೆ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್