BBK 9: ‘ಕನ್ನಡ ಬಿಗ್​ ಬಾಸ್​’ 9ನೇ ಸೀಸನ್​ ಕೆಲಸ ಶುರು; ಬಿಗ್​ ಅಪ್​ಡೇಟ್​ ನೀಡಿದ ಪರಮೇಶ್ವರ್​ ಗುಂಡ್ಕಲ್​

Bigg Boss Kannada Season 9: ಈ ಬಾರಿ ಯಾರೆಲ್ಲ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಸಖತ್​ ಕೌತುಕ ಇದೆ. ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರಿಗೂ ಸ್ಪರ್ಧಿಸುವ ಅವಕಾಶ ನೀಡಿ ಎಂದು ಅನೇಕರು ಮನವಿ ಮಾಡಿಕೊಂಡಿದ್ದಾರೆ.

BBK 9: ‘ಕನ್ನಡ ಬಿಗ್​ ಬಾಸ್​’ 9ನೇ ಸೀಸನ್​ ಕೆಲಸ ಶುರು; ಬಿಗ್​ ಅಪ್​ಡೇಟ್​ ನೀಡಿದ ಪರಮೇಶ್ವರ್​ ಗುಂಡ್ಕಲ್​
ಪರಮೇಶ್ವರ್​ ಗುಂಡ್ಕಲ್
Follow us
TV9 Web
| Updated By: Digi Tech Desk

Updated on:Jul 13, 2022 | 11:06 AM

Bigg Boss Kannada Season 9 | ರಿಯಾಲಿಟಿ ಶೋಗಳ ಪೈಕಿ ‘ಬಿಗ್​ ಬಾಸ್​’ (Bigg Boss) ಕಾರ್ಯಕ್ರಮಕ್ಕೆ ಸ್ಪೆಷಲ್​ ಸ್ಥಾನವಿದೆ. ಪ್ರತಿ ಬಾರಿ ಈ ಶೋ ಆರಂಭ ಆಗುವುದಕ್ಕೂ ಮುನ್ನ ಒಂದು ಬಗೆಯ ಕಾತರ ಮನೆ ಮಾಡಿರುತ್ತದೆ. ಹೊಸ ಬಿಗ್​ ಬಾಸ್​ ಮನೆ ಹೇಗಿರಲಿದೆ? ಈ ಸಲ ಬರುವ ಸ್ಪರ್ಧಿಗಳು ಯಾರು? ನಿಯಮದಲ್ಲಿ ಏನಾದರೂ ಹೊಸತನ ಇರಲಿದೆಯೇ? ಇಂಥ ಹಲವು ಪ್ರಶ್ನೆಗಳು ಕೊರೆಯುತ್ತಲೇ ಇರುತ್ತವೆ. ಕನ್ನಡದಲ್ಲಿ ಈವರೆಗೂ 8 ಸೀಸನ್​ಗಳು (Bigg Boss Kannada) ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈಗ 9ನೇ ಸೀಸನ್​ಗೆ ಕಾಯುವಿಕೆ ಶುರುವಾಗಿದೆ. ಈ ಹೊಸ ಸೀಸನ್​ ಯಾವಾಗ ಆರಂಭ ಆಗಲಿದೆ ಎಂದು ನಿರೀಕ್ಷಿಸುತ್ತಿದ್ದ ಎಲ್ಲ ವೀಕ್ಷಕರಿಗೂ ಈಗೊಂದು ಅಪ್​ಡೇಟ್​ ಸಿಕ್ಕಿದೆ. ‘ಕನ್ನಡ ಬಿಗ್​ ಬಾಸ್​ ಸೀಸನ್​ 9’ ಕೆಲಸಗಳು ಯಾವ ಹಂತದಲ್ಲಿದೆ ಎಂಬುದಕ್ಕೆ ಕಲರ್ಸ್​ ಕನ್ನಡ ವಾಹಿನಿ ಬಿಸ್ನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ (Parameshwar Gundkal) ಉತ್ತರ ನೀಡಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಪರಮೇಶ್ವರ ಗುಂಡ್ಕಲ್​ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ‘ನಿರ್ಮಾಣ ಕಾರ್ಯ ಪ್ರಗತಿಯಲ್ಲಿ’ ಎಂದು ಅವರು ಆ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಇದು ಬಿಗ್​ ಬಾಸ್​ ಸೆಟ್​ ಫೋಟೋ ಎಂದು ನೆಟ್ಟಿಗರು ಸುಲಭವಾಗಿ ಊಹಿಸಿದ್ದಾರೆ. ಅಲ್ಲದೇ, ಹತ್ತಾರು ಬಗೆಯ ಕಮೆಂಟ್​ಗಳ ಮೂಲಕ ಜನರು ತಮ್ಮ ಕಾತರವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
Image
ಬಿಗ್​ ಬಾಸ್​ ನಿರೂಪಕರು ಚೇಂಜ್​; ಅಧಿಕೃತ ಘೋಷಣೆ ಮಾಡಿದ ಸ್ಟಾರ್​ ನಟ; ವೀಕ್ಷಕರಿಗೆ ಬೇಸರ
Image
‘ಬಿಗ್​ ಬಾಸ್​’ ಮನೆಯಲ್ಲಿ ಅಗ್ನಿ ಅವಘಡ; ಸಾವು-ನೋವಿನ ಬಗ್ಗೆ ಆಗಿಲ್ಲ ವರದಿ
Image
ಬಿಗ್​ ಬಾಸ್​ ಗೆದ್ದವರ ಹಿಂದೆ ಲಾಬಿ ಇದೆಯೋ ಇಲ್ಲವೋ? ನೇರವಾಗಿ ಮಾತಾಡಿದ ಸ್ಪರ್ಧಿ ಕರಣ್​ ಕುಂದ್ರಾ

ಈ ಬಾರಿ ಯಾರೆಲ್ಲ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಸಖತ್​ ಕೌತುಕ ಇದೆ. ಕೆಲವು ಸೀಸನ್​ಗಳಲ್ಲಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರಿಗೂ ಸ್ಪರ್ಧಿಸುವ ಅವಕಾಶ ನೀಡಲಾಗಿತ್ತು. ಈ ಬಾರಿ ಕೂಡ ಹಾಗೆ ಅವಕಾಶ ನೀಡಿ ಎಂದು ಅನೇಕರು ಕಮೆಂಟ್​ಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ವೈರಲ್​ ಆಗಿದೆ. ಪ್ರತಿ ಬಾರಿಯೂ ಬಿಗ್​ ಬಾಸ್​ ಮನೆಯ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಈ ಬಾರಿ ದೊಡ್ಮನೆ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಕನ್ನಡದಲ್ಲಿ ಎಲ್ಲ ಸೀಸನ್​ಗಳನ್ನು ಯಶಸ್ವಿಯಾಗಿ ನಿರೂಪಿಸಿದ ಖ್ಯಾತಿ ಕಿಚ್ಚ ಸುದೀಪ್​ ಅವರಿಗೆ ಸಲ್ಲುತ್ತದೆ. ಈ ಬಾರಿ ಕೂಡ ಅವರೇ ನಿರೂಪಕರಾಗಿ ಮುಂದುವರಿಯುತ್ತಾರೆ. ಪ್ರತಿ ವೀಕೆಂಡ್​ನಲ್ಲಿ ಟಿವಿ ಪರದೆಯ ಮೇಲೆ ಕಿಚ್ಚನ ಖಡಕ್​ ನಿರೂಪಣೆ ನೋಡಲು ಫ್ಯಾನ್ಸ್​ ಕಾದಿದ್ದಾರೆ. ಸದ್ಯ ‘ವಿಕ್ರಾಂತ್​ ರೋಣ’ ಚಿತ್ರದ ಪ್ರಮೋಷನ್​ನಲ್ಲಿ ಸುದೀಪ್​ ಬ್ಯುಸಿ ಆಗಿದ್ದಾರೆ. ಜುಲೈ 28ರಂದು ಆ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೇಲರ್​ ಮೂಲಕ ಸಖತ್​ ನಿರೀಕ್ಷೆ ಮೂಡಿಸಲಾಗಿದೆ.

Published On - 7:14 am, Tue, 12 July 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ