‘ಬಿಗ್ ಬಾಸ್’ ಹೊಸ ಸೀಸನ್ ಬಗ್ಗೆ ಆರಂಭವಾಗಿದೆ ಗುಸುಗುಸು; ಆರಂಭ ಯಾವಾಗ?
ಬಿಗ್ ಬಾಸ್ನಲ್ಲಿ ಈಗ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಆರಂಭದಲ್ಲಿ ಬಿಗ್ ಬಾಸ್ ಕೇವಲ ಟಿವಿಯಲ್ಲಿ ಮಾತ್ರ ಪ್ರಸಾರವಾಗುತ್ತಿತ್ತು. ನಂತರ ಒಟಿಟಿಯಲ್ಲೂ ಈ ಶೋ ಪ್ರಸಾರ ಆಗೋಕೆ ಶುರುವಾಯಿತು.
ಹಿಂದಿಯಲ್ಲಿ ಮೊದಲು ಪ್ರಾರಂಭವಾದ ‘ಬಿಗ್ ಬಾಸ್’ (Bigg Boss)ನಂತರ ದೇಶದ ಬೇರೆ ಬೇರೆ ಭಾಷೆಗಳಲ್ಲಿ ಆರಂಭವಾಯಿತು. ಈ ಶೋಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಆರಂಭದಲ್ಲಿ ಇದ್ದಷ್ಟು ಕ್ರೇಜ್ ಈಗ ಉಳಿದುಕೊಂಡಿಲ್ಲವಾದರೂ ಒಂದಷ್ಟು ಜನರು ಈ ಶೋ ವೀಕ್ಷಿಸುತ್ತಾರೆ. ಕನ್ನಡದಲ್ಲಿ ಈಗಾಗಲೇ 8 ಸೀಸನ್ಗಳು ಪೂರ್ಣಗೊಂಡಿವೆ. ತೆಲುಗಿನಲ್ಲಿ 5 ಸೀಸನ್ಗಳು ಮುಗಿದಿದ್ದು, ಆರನೇ ಸೀಸನ್ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ‘ತೆಲುಗು ಬಿಗ್ ಬಾಸ್’ ಆರಂಭಗೊಳ್ಳುವ ನಿರೀಕ್ಷೆ ಇದೆ. ಯಾರ್ಯಾರು ಬಿಗ್ ಬಾಸ್ ಮನೆ ಪ್ರವೇಶಿಸುತ್ತಾರೆ ಎನ್ನುವ ಬಗ್ಗೆಯೂ ಸಾಕಷ್ಟು ವದಂತಿಗಳು ಹಬ್ಬಿದೆ. ಜತೆಗೆ ‘ಕನ್ನಡ ಬಿಗ್ ಬಾಸ್’ (Kannada Bigg Boss) ಹೊಸ ಸೀಸನ್ ಬಗ್ಗೆಯೂ ಚರ್ಚೆ ಆಗುತ್ತಿದೆ.
ಬಿಗ್ ಬಾಸ್ನಲ್ಲಿ ಈಗ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಆರಂಭದಲ್ಲಿ ಬಿಗ್ ಬಾಸ್ ಕೇವಲ ಟಿವಿಯಲ್ಲಿ ಮಾತ್ರ ಪ್ರಸಾರವಾಗುತ್ತಿತ್ತು. ನಂತರ ಒಟಿಟಿಯಲ್ಲೂ ಈ ಶೋ ಪ್ರಸಾರ ಆಗೋಕೆ ಶುರುವಾಯಿತು. ನಂತರ ಕೇವಲ ಒಟಿಟಿಯಲ್ಲಿ ಮಾತ್ರ ಪ್ರಸಾರ ಕಂಡಿತು. ಹಿಂದಿ ಹಾಗೂ ತೆಲುಗಿನಲ್ಲಿ ಈಗಾಗಲೇ ಈ ಪ್ರಯತ್ನ ನಡೆದಿದೆ. ಈ ಬಾರಿ ‘ತೆಲುಗು ಬಿಗ್ ಬಾಸ್’ ಟಿವಿಯಲ್ಲಿ ಮಾತ್ರ ಪ್ರಸಾರ ಆಗಲಿದೆ ಎಂದು ವರದಿ ಆಗಿದೆ.
ಕಳೆದ ಕೆಲ ಸೀಸನ್ಗಳಲ್ಲಿ ದೊಡ್ಡ ಸೆಲೆಬ್ರಿಟಿಗಳು ಬಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆದ ವ್ಯಕ್ತಿಗಳನ್ನು ಕರೆತರಲಾಗುತ್ತಿದೆ. ಈ ಬಾರಿಯೂ ಇದೇ ರೀತಿಯ ಪ್ರಯತ್ನ ಆಗಲಿದೆ ಎನ್ನಲಾಗುತ್ತಿದೆ. ಯೂಟ್ಯೂಬ್ನಲ್ಲಿ ಹೆಚ್ಚು ಖ್ಯಾತಿ ಪಡೆದವರನ್ನು ತರುವ ಪ್ರಯತ್ನ ಆಗಲಿದೆ ಎಂದು ವರದಿ ಆಗಿದೆ. ಇದರ ಜತೆಗೆ ಹಿನ್ನೆಲೆಗೆ ಸರಿದ ಕಲಾವಿದರಿಗೂ ಆದ್ಯತೆ ನೀಡಲು ವಾಹಿನಿಯವರು ಚಿಂತನೆ ನಡೆಸಿದ್ದಾರೆ.
ಶಿವ, ವರ್ಷಿಣಿ, ದೀಪಿಕಾ ಪಿಲ್ಲಿ, ನವ್ಯಾ ಸ್ವಾಮಿ, ಧನ್ಶು, ಚಿತ್ರಾ ರೈ ಮೊದಲಾದವರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ‘ಸ್ಟಾರ್ ಮಾ’ ವಾಹಿನಿಯಲ್ಲಿ ಪ್ರಸಾರವಾಗುವ ಈ ಶೋಗೆ ಸಾಮಾನ್ಯ ವ್ಯಕ್ತಿಗಳು ಕೂಡ ಈ ಬಾರಿ ಬರಲಿದ್ದಾರೆ. ಈ ಕಾರಣಕ್ಕೂ ‘ತೆಲುಗು ಬಿಗ್ ಬಾಸ್ 6’ ಕುತೂಹಲ ಮೂಡಿಸಿದೆ. ನಾಗಾರ್ಜುನ ಅವರು ಈ ಬಾರಿಯ ಬಿಗ್ ಬಾಸ್ ಹೋಸ್ಟ್ ಮಾಡುತ್ತಿದ್ದಾರೆ. ಆರಂಭದಲ್ಲಿ ಸಮಂತಾ ಅವರು ಈ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ ಎನ್ನಲಾಗಿತ್ತು.
ಕನ್ನಡ ಬಿಗ್ ಬಾಸ್ ವಿಚಾರಕ್ಕೆ ಬರುವುದಾದರೆ, ಸುದೀಪ್ ಅವರು ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ‘ಕನ್ನಡ ಬಿಗ್ ಬಾಸ್ 9’ ಆರಂಭವಾಗುವ ನಿರೀಕ್ಷೆ ಇದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯಿಂದ ಅಪ್ಡೇಟ್ ಸಿಗಬೇಕಿದೆ.
ಇದನ್ನೂ ಓದಿ: ಲೈವ್ನಲ್ಲಿ ಹೆಂಡತಿಗೆ ಕಿಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿ; ಸಿಟ್ಟಾದ ಪತ್ನಿ, ವೈರಲ್ ಆಯ್ತು ವಿಡಿಯೋ
‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದ ವೇಳೆ ಕಪ್ಪುಡುಗೆ ತೊಟ್ಟು ಮಿಂಚಿದ ಜಾಕ್ವೆಲಿನ್ ಫರ್ನಾಂಡಿಸ್
Published On - 6:30 am, Sun, 26 June 22