AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಘೋಸ್ಟ್​’ ಸ್ವಾಗತಿಸಿದ ಕಿಚ್ಚ ಸುದೀಪ್​; ಶಿವರಾಜ್​ಕುಮಾರ್ ಲುಕ್ ನೋಡಿ ಫ್ಯಾನ್ಸ್ ಫಿದಾ

ಶ್ರೀನಿ ಅವರು ಸ್ಯಾಂಡಲ್​ವುಡ್​ನಲ್ಲಿ ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರಿಗೆ ಶಿವರಾಜ್​​ಕುಮಾರ್ ಚಿತ್ರಕ್ಕೆ ಆ್ಯಕ್ಷನ್​​ಕಟ್​ ಹೇಳುವ ಅವಕಾಶ ಸಿಕ್ಕಿದೆ.ಈಗ ಈ ಚಿತ್ರದ ಫಸ್ಟ್​ ಲುಕ್​ ಅನಾವರಣಗೊಂಡಿದೆ.

‘ಘೋಸ್ಟ್​’ ಸ್ವಾಗತಿಸಿದ ಕಿಚ್ಚ ಸುದೀಪ್​; ಶಿವರಾಜ್​ಕುಮಾರ್ ಲುಕ್ ನೋಡಿ ಫ್ಯಾನ್ಸ್ ಫಿದಾ
ಶಿವಣ್ಣ
TV9 Web
| Edited By: |

Updated on:Jul 12, 2022 | 3:13 PM

Share

ಶಿವರಾಜ್​ಕುಮಾರ್ (Shivarajkumar) ಅವರು ಇಂದು (ಜುಲೈ 12) 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಹೋದರ ಪುನೀತ್​ ರಾಜ್​ಕುಮಾರ್ (Puneeth Rajkumar) ನಿಧನ ಹಿನ್ನೆಲೆಯಲ್ಲಿ ಅವರು ಬರ್ತ್​ಡೇಯನ್ನು ಆಚರಿಸಿಕೊಂಡಿಲ್ಲ. ಆದರೆ, ಶಿವಣ್ಣನ ಬರ್ತ್​ಡೇ ಪ್ರಯುಕ್ತ ಅವರ ನಟನೆಯ ಹೊಸ ಚಿತ್ರಗಳ ಪೋಸ್ಟರ್​ ರಿಲೀಸ್ ಆಗುತ್ತಿದೆ. ಅದರಲ್ಲಿ ಹೆಚ್ಚು ಗಮನ ಸೆಳೆದಿದ್ದು ಶ್ರೀನಿ ನಿರ್ದೇಶನ ಮಾಡುತ್ತಿರುವ ‘ಘೋಸ್ಟ್’ ಚಿತ್ರದ  (Ghost Movie) ಫಸ್ಟ್ ಲುಕ್. ಕಿಚ್ಚ ಸುದೀಪ್ ಅವರು ಈ ಚಿತ್ರದ ಪೋಸ್ಟರ್​ ರಿಲೀಸ್ ಮಾಡಿದ್ದಾರೆ.

ಶ್ರೀನಿ ಅವರು ಸ್ಯಾಂಡಲ್​ವುಡ್​ನಲ್ಲಿ ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ‘ಬೀರ್​ಬಲ್​’ ಅಂತಹ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ತೆರೆಗೆ ಬಂದ ‘ಓಲ್ಡ್​ ಮಾಂಕ್​’ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುವುದರ ಜತೆಗೆ ನಟಿಸಿದ್ದರು. ಈ ಚಿತ್ರ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ಅವರಿಗೆ ಶಿವರಾಜ್​​ಕುಮಾರ್ ಚಿತ್ರಕ್ಕೆ ಆ್ಯಕ್ಷನ್​​ಕಟ್​ ಹೇಳುವ ಅವಕಾಶ ಸಿಕ್ಕಿದ್ದು, ಅವರು ಸಖತ್ ಖುಷಿಪಟ್ಟಿದ್ದಾರೆ. ಶಿವರಾಜ್​ಕುಮಾರ್ ಬರ್ತ್​ಡೇ ಪ್ರಯುಕ್ತ ಚಿತ್ರದ ಫಸ್ಟ್​ ಲುಕ್​ ಅನಾವರಣಗೊಂಡಿದೆ. ಇದನ್ನು ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ
Image
‘ಓಂ’ ಸಿನಿಮಾ ಸ್ಟೈಲ್​ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್​ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ
Image
‘ಪಾಸ್​ಪೋರ್ಟ್​ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್​ಕುಮಾರ್
Image
ಶಕ್ತಿಧಾಮದ ಮಕ್ಕಳ ಜತೆ ‘ಬೈರಾಗಿ’ ಹಾಡಿಗೆ ಡ್ಯಾನ್ಸ್ ಮಾಡಿದ ಶಿವರಾಜ್​ಕುಮಾರ್
Image
Sudeep: ‘ನಾನು-ಶಿವಣ್ಣ ಕೆಲವು ಸಮಯ ಮಾತಾಡ್ತಾ ಇರಲಿಲ್ಲ, ಕಾರಣ ಹುಡುಕ್ತಾ ಹೋದ್ರೆ..’; ಸುದೀಪ್​ ನೇರ ಮಾತು

ಶಿವರಾಜ್​ಕುಮಾರ್-ಶ್ರೀನಿ ಕಾಂಬಿನೇಷನ್​ ಚಿತ್ರಕ್ಕೆ ‘ಘೋಸ್ಟ್​’ ಎಂದು ಹೆಸರು ಇಟ್ಟಾಗಲೇ ಕೌತುಕ ಹೆಚ್ಚಾಗಿತ್ತು. ಈಗ ‘ಘೋಸ್ಟ್’ ಚಿತ್ರದ ಪೋಸ್ಟರ್ ಈ ಕೌತುಕವನ್ನು ದ್ವಿಗುಣ ಮಾಡಿದೆ. ಪೋಸ್ಟರ್​ನಲ್ಲಿ ಗನ್ ಹಾಗೂ ಕಾರು ಎರಡೂ ಇದೆ. ಅದರ ಹಿಂದೆ ಶಿವರಾಜ್​ಕುಮಾರ್ ನಿಂತಿದ್ದಾರೆ. ‘ಹ್ಯಾಪಿ ಬರ್ತ್​ಡೇ ಕಿಂಗ್ ಆಫ್ ಆಲ್ ಮಾಸಸ್​’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಮಕ್ಕಳಿಂದ ಶಿವರಾಜ್​ಕುಮಾರ್​ಗೆ ಕ್ಯೂಟ್​ ಬರ್ತ್​ಡೇ ವಿಶ್​; ದೇವಸ್ಥಾನದಲ್ಲಿ ವಿಶೇಷ ಪೂಜೆ

ಈ ಪೋಸ್ಟರ್​ಅನ್ನು ಸುದೀಪ್ ಅವರು ಅನಾವರಣ ಮಾಡಿರುವುದು ವಿಶೇಷ.  ಟ್ವಿಟರ್​ನಲ್ಲಿ ಫಸ್ಟ್ ಪೋಸ್ಟರ್ ಹಂಚಿಕೊಂಡು ತಂಡಕ್ಕೆ ಹಾಗೂ ಶಿವಣ್ಣನಿಗೆ ಸುದೀಪ್ ವಿಶ್ ಮಾಡಿದ್ದಾರೆ. ಈ ಟ್ವೀಟ್ ಸಾವಿರಾರು ಬಾರಿ ರೀ ಟ್ವೀಟ್ ಆಗಿದೆ. ಶಿವರಾಜ್​ಕುಮಾರ್ ಜತೆ ಈ ಸಿನಿಮಾದಲ್ಲಿ ಮತ್ತೆ ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸಂದೇಶ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದಲ್ಲದೆ, ‘ಸತ್ಯಮಂಗಳ’, ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ ‘45’ ಚಿತ್ರಗಳ ಬಗ್ಗೆಯೂ ಅಪ್​ಡೇಟ್ ನೀಡಲಾಗಿದೆ.

Published On - 3:11 pm, Tue, 12 July 22

ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್​​ ಪ್ರವಾಸಿಗರು!
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಶಾಲಾ ಬಸ್​ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ