ಶಕ್ತಿಧಾಮದ ಮಕ್ಕಳ ಜತೆ ‘ಬೈರಾಗಿ’ ಹಾಡಿಗೆ ಡ್ಯಾನ್ಸ್ ಮಾಡಿದ ಶಿವರಾಜ್​ಕುಮಾರ್

ಬಿಡುವಿನ ವೇಳೆ ಶಕ್ತಿಧಾಮದ ಮಕ್ಕಳ ಜೊತೆ ಅವರು ಸಮಯ ಕಳೆದಿದ್ದಾರೆ. ‘ಬೈರಾಗಿ’ ಚಿತ್ರದ ಹಾಡಿಗೆ ಮಕ್ಕಳ ಜೊತೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

TV9kannada Web Team

| Edited By: Rajesh Duggumane

Jun 29, 2022 | 9:15 PM

ಪುನೀತ್ ರಾಜ್​ಕುಮಾರ್ (Puneeth Rajkumar) ನಿಧನದ ನಂತರದಲ್ಲಿ ಶಿವರಾಜ್​ಕುಮಾರ್​ ಅವರಿಗೆ ಮೈಸೂರಿನಲ್ಲಿರುವ ಶಕ್ತಿಧಾಮದ ನಂಟು ಹೆಚ್ಚಿದೆ. ರಾಜ್​ ಫ್ಯಾಮಿ ನಡೆಸುತ್ತಿರುವ ಶಕ್ತಿಧಾಮದ ಬಗ್ಗೆ ಪುನೀತ್​ ಹೆಚ್ಚು ಗಮನ ಹರಿಸುತ್ತಿದ್ದರು. ಈಗ ಶಿವಣ್ಣ ಹಾಗೂ ಗೀತಾ ಶಿವರಾಜ್​ಕುಮಾರ್ ಅವರು ಇಲ್ಲಿನ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆಗಾಗ ಈ ದಂಪತಿ ಇಲ್ಲಿಗೆ ಭೇಟಿ ನೀಡುತ್ತ ಇರುತ್ತಾರೆ. ಈಗ ಶಿವಣ್ಣ ಮೈಸೂರಿನಲ್ಲಿದ್ದಾರೆ. ಮುಂದಿನ ಚಿತ್ರ ‘ಬೈರಾಗಿ’ (Bairagee Movie) ಪ್ರಮೋಷನ್ ಮಾಡುತ್ತಿದ್ದಾರೆ. ಬಿಡುವಿನ ವೇಳೆ ಶಕ್ತಿಧಾಮದ ಮಕ್ಕಳ ಜೊತೆ ಅವರು ಸಮಯ ಕಳೆದಿದ್ದಾರೆ. ‘ಬೈರಾಗಿ’ ಚಿತ್ರದ ಹಾಡಿಗೆ ಮಕ್ಕಳ ಜೊತೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ‘ಬೈರಾಗಿ’ ಪ್ರೀ ರಿಲೀಸ್ ಇವೆಂಟ್; ಲೈವ್​ ನೋಡಲು ಇಲ್ಲಿ ಕ್ಲಿಕ್ ಮಾಡಿ

ಜುಲೈ 1ಕ್ಕೆ ‘ಬೈರಾಗಿ’ ರಿಲೀಸ್​; ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಶಿವಣ್ಣ ಸಿನಿಮಾದ ಟಿವಿ​ ರೈಟ್ಸ್​

Follow us on

Click on your DTH Provider to Add TV9 Kannada