ಚಾಮರಾಜನಗರದಲ್ಲಿ ‘ಬೈರಾಗಿ’ ಪ್ರೀ ರಿಲೀಸ್ ಇವೆಂಟ್; ಲೈವ್​ ನೋಡಲು ಇಲ್ಲಿ ಕ್ಲಿಕ್ ಮಾಡಿ

ಇಂದು (ಜೂನ್ 25) ಚಾಮರಾಜನಗರದಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ. ಇದು ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ. ಇದರಲ್ಲಿ ಅವರು ಡಿಫರೆಂಟ್​ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

TV9kannada Web Team

| Edited By: Rajesh Duggumane

Jun 25, 2022 | 7:01 PM

ಶಿವರಾಜ್​ಕುಮಾರ್ (Shivarajkumar) ನಟನೆಯ ‘ಬೈರಾಗಿ’ ಸಿನಿಮಾ (Bairagee Movie) ರಿಲೀಸ್​ಗೆ ರೆಡಿ ಇದೆ. ಇಂದು (ಜೂನ್ 25) ಚಾಮರಾಜನಗರದಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ. ಇದು ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ. ಇದರಲ್ಲಿ ಅವರು ಡಿಫರೆಂಟ್​ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹುಲಿ ವೇಷದಲ್ಲಿ ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡಲಿದ್ದಾರೆ. ಅಂಜಲಿ, ಯಶ ಶಿವಕುಮಾರ್​, ಶಶಿ ಕುಮಾರ್​ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ಕಷ್ಣ ಸಾರ್ಥಕ್​ ಅವರು ಬಂಡವಾಳ ಹೂಡಿದ್ದಾರೆ. ಅನೂಪ್​ ಸೀಳಿನ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಸಂಕಲನದಲ್ಲಿ ಈ ಸಿನಿಮಾ ತಯಾರಾಗಿದೆ. ಇಡೀ ತಂಡ ಪ್ರೀ ರಿಲೀಸ್ ಇವೆಂಟ್​ಗೆ ಹಾಜರಿ ಹಾಕಿದೆ.

ಇದನ್ನೂ ಓದಿ:‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಶಿವರಾಜ್​ಕುಮಾರ್ ಎನರ್ಜೆಟಿಕ್ ಡ್ಯಾನ್ಸ್; ಎದ್ದು ನಿಂತು ಚಪ್ಪಾಳೆ ತಟ್ಟಿದ ರಕ್ಷಿತಾ 

ರಾಮನಗರದಲ್ಲಿ ಶಿವರಾಜ್​ಕುಮಾರ್​ಗೆ ಭವ್ಯ ಸ್ವಾಗತ; ಇಲ್ಲಿದೆ ವಿಡಿಯೋ

Follow us on

Click on your DTH Provider to Add TV9 Kannada