‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಶಿವರಾಜ್​ಕುಮಾರ್ ಎನರ್ಜೆಟಿಕ್ ಡ್ಯಾನ್ಸ್; ಎದ್ದು ನಿಂತು ಚಪ್ಪಾಳೆ ತಟ್ಟಿದ ರಕ್ಷಿತಾ

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ನ 6ನೇ ಸೀಸನ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಶಿವರಾಜ್​ಕುಮಾರ್ ಅವರು ಈ ಕಾರ್ಯಕ್ರಮದ ಜಡ್ಜ್​ ಆಗಿದ್ದಾರೆ. ರಕ್ಷಿತಾ ಪ್ರೇಮ್ ಕೂಡ ಜಡ್ಜ್​ ಸ್ಥಾನದಲ್ಲಿ ಇದ್ದಾರೆ.

‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಶಿವರಾಜ್​ಕುಮಾರ್ ಎನರ್ಜೆಟಿಕ್ ಡ್ಯಾನ್ಸ್; ಎದ್ದು ನಿಂತು ಚಪ್ಪಾಳೆ ತಟ್ಟಿದ ರಕ್ಷಿತಾ
ಶಿವಣ್ಣ-ರಕ್ಷಿತಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 24, 2022 | 5:34 PM

ನಟ ಶಿವರಾಜ್​ಕುಮಾರ್ (Shivarajkumar) ಅವರು ಶೀಘ್ರವೇ 60ನೇ ವರ್ಷದ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅವರ ಎನರ್ಜಿ ಹಾಗೂ ಬಾಡಿ ಫಿಟ್​ನೆಸ್​ ನೋಡಿದರೆ ಯಾರೊಬ್ಬರೂ ಅವರಿಗೆ ಇಷ್ಟೊಂದು ವಯಸ್ಸು ಆಯಿತು ಎಂದು ಹೇಳಲು ಸಾಧ್ಯವೇ ಇಲ್ಲ. ಶಿವರಾಜ್​ಕುಮಾರ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಮಧ್ಯೆ ರಿಯಾಲಿಟಿ ಶೋಗೆ ಜಡ್ಜ್ ಕೂಡ ಆಗಿದ್ದಾರೆ. ಈಗ ಶಿವರಾಜ್​ಕುಮಾರ್ ಅವರು ಮಾಡಿರುವ ಎನರ್ಜೆಟಿಕ್  ಡ್ಯಾನ್ಸ್ ಸಖತ್ ವೈರಲ್ ಆಗುತ್ತಿದೆ. ಈ ಡ್ಯಾನ್ಸ್ ನೋಡಿ ರಕ್ಷಿತಾ ಪ್ರೇಮ್ (Rakshita Prem)​ ಅವರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ನ 6ನೇ ಸೀಸನ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಶಿವರಾಜ್​ಕುಮಾರ್ ಅವರು ಈ ಕಾರ್ಯಕ್ರಮದ ಜಡ್ಜ್​ ಆಗಿದ್ದಾರೆ. ರಕ್ಷಿತಾ ಪ್ರೇಮ್ ಕೂಡ ಜಡ್ಜ್​ ಸ್ಥಾನದಲ್ಲಿ ಇದ್ದಾರೆ. ಈ ವೇದಿಕೆ ಮೇಲೆ ಡ್ಯಾನ್ಸ್ ಮಾಡುವ ಹಲವು ಸ್ಪರ್ಧಿಗಳಿಗೆ ಶಿವಣ್ಣ ಅವರು ಸ್ಫೂರ್ತಿದಾಯಕ ಮಾತುಗಳನ್ನು ಆಡುತ್ತಾರೆ. ಈಗ ಶಿವಣ್ಣ ಅವರೇ ಡ್ಯಾನ್ಸ್ ಮಾಡಿದ್ದು ಹಲವರಿಗೆ ಖುಷಿ ನೀಡಿದೆ.

ಇದನ್ನೂ ಓದಿ
Image
ರಜನಿಕಾಂತ್ ಜತೆ ಶಿವಣ್ಣ ನಟನೆ; ವಿಷಯ ಖಚಿತಪಡಿಸಿ ಹೊಸ ಅಪ್​ಡೇಟ್ ನೀಡಿದ ಶಿವರಾಜ್​ಕುಮಾರ್
Image
‘ಮಗಳ ಪ್ರೊಡಕ್ಷನ್​ನಲ್ಲಿ ನಾನೂ ಒಂದು ವೆಬ್ ಸೀರಿಸ್ ಮಾಡ್ತಾ ಇದೀನಿ’; ಶಿವರಾಜ್​ಕುಮಾರ್ ಅಚ್ಚರಿಯ ಘೋಷಣೆ
Image
ಭೂಗತ ಲೋಕದ ಕಥೆಯಲ್ಲಿ ಶಿವರಾಜ್​​ಕುಮಾರ್; ‘ಓಂ’ ರೀತಿಯಲ್ಲಿ ಹೊಸ ಸಿನಿಮಾ
Image
ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಶಿವರಾಜ್​ಕುಮಾರ್

‘ಜೋಗಿ’ ಪ್ರೇಮ್ ನಿರ್ದೇಶನದ, ಶಿವರಾಜ್​ಕುಮಾರ್ ನಟನೆಯ ‘ಜೋಗಯ್ಯ’ ಸಿನಿಮಾ 2011ರಲ್ಲಿ ತೆರೆಗೆ ಬಂತು. ಈ ಚಿತ್ರದ ‘ಗಂಗೆಯ ಅವನ ತಲೆ ಮೇಲೆ..’ ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡಿಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6​’ ಸ್ಪರ್ಧಿಗಳು ಡ್ಯಾನ್ಸ್ ಮಾಡಿದರು. ಈ ಹಾಡನ್ನು ನೋಡಿ ಶಿವಣ್ಣ ಸುಮ್ಮನೆ ಕೂರಲಿಲ್ಲ. ಅವರು ಮಸ್ತ್​ ಆಗಿ ಡ್ಯಾನ್ಸ್ ಮಾಡಿದ್ದಾರೆ. ಶಿವರಾಜ್​ಕುಮಾರ್ ಎನರ್ಜಿ ನೋಡಿ ರಕ್ಷಿತಾ ಸಖತ್ ಖುಷಿ ಆದರು. ಸದ್ಯ, ಜೀ ಕನ್ನಡ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

View this post on Instagram

A post shared by Zee Kannada (@zeekannada)

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ಕಾರ್ಯಕ್ರಮ ಪ್ರತಿ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿದೆ. ಇತ್ತೀಚೆಗೆ ಈ ಕಾರ್ಯಕ್ರಮದ ಅವಾರ್ಡ್​ ಹೇಗಿರಲಿದೆ ಎಂಬುದನ್ನು ಅನಾವರಣ ಮಾಡಲಾಗಿತ್ತು. ಅವಾರ್ಡ್​ ಮೇಲೆ ಪುನೀತ್​ ರಾಜ್​ಕುಮಾರ್ ರಾರಾಜಿಸಿದ್ದರು. ಇದನ್ನು ನೋಡಿ ಶಿವಣ್ಣ ಭಾವುಕರಾಗಿದ್ದರು.

ಇದನ್ನೂ ಓದಿ: ಆತ್ಮೀಯತೆಯಿಂದ ಮಾತನಾಡಿದ ಶಿವರಾಜ್​ಕುಮಾರ್ ಹಾಗೂ ಅಶ್ವಿನಿ ಪುನೀತ್​ರಾಜ್​ಕುಮಾರ್; ಇಲ್ಲಿದೆ ವಿಡಿಯೋ

ರಜನಿಕಾಂತ್ ಜತೆ ಶಿವಣ್ಣ ನಟನೆ; ವಿಷಯ ಖಚಿತಪಡಿಸಿ ಹೊಸ ಅಪ್​ಡೇಟ್ ನೀಡಿದ ಶಿವರಾಜ್​ಕುಮಾರ್

Published On - 5:33 pm, Fri, 24 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ