ನಟಿ ಐಶ್ವರ್ಯಾ ರೈ ಜತೆ ಡ್ಯಾನ್ಸ್ ಮಾಡಿದ ಆರಾಧ್ಯಾ; ಇಲ್ಲಿದೆ ಕ್ಯೂಟ್ ವಿಡಿಯೋ

ಈ ಬಾರಿ ದೊಡ್ಡ ಮಟ್ಟದಲ್ಲಿ ಈ ಫಂಕ್ಷನ್ ನಡೆದಿದೆ. ಬಾಲಿವುಡ್​ನ ಬಹುತೇಕ ಸೆಲೆಬ್ರಿಟಿಗಳು ಇದರಲ್ಲಿ ಹಾಜರಿ ಹಾಕಿದ್ದರು.

ನಟಿ ಐಶ್ವರ್ಯಾ ರೈ ಜತೆ ಡ್ಯಾನ್ಸ್ ಮಾಡಿದ ಆರಾಧ್ಯಾ; ಇಲ್ಲಿದೆ ಕ್ಯೂಟ್ ವಿಡಿಯೋ
ಐಶ್ವರ್ಯಾ,ಆರಾಧ್ಯಾ, ಅಭಿಷೇಕ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 25, 2022 | 6:35 AM

ನಟಿ ಐಶ್ವರ್ಯಾ ರೈ (Aishwarya Rai) ಅವರು ಕುಟುಂಬದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಆಗೊಂದು ಈಗೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಬಹುತೇಕ ಸಮಯವನ್ನು ತಮ್ಮ ಕುಟುಂಬದ ಜತೆ ಕಳೆಯುತ್ತಿದ್ದಾರೆ. ಮಗಳು ಆರಾಧ್ಯಾಗೆ (Aaradhya Bachchan) ಈಗ ವಯಸ್ಸು 10. ಅವಳು ಶಾಲೆಗೆ ತೆರಳುತ್ತಿದ್ದಾಳೆ. ಅವಳ ಶಿಕ್ಷಣದ ಬಗ್ಗೆಯೂ ಐಶ್ವರ್ಯಾ ಗಮನ ಹರಿಸುತ್ತಿದ್ದಾರೆ. ಇನ್ನು, ಐಶ್ವರ್ಯಾ ಹಲವು ಕಾರ್ಯಕ್ರಮಕ್ಕೆ ಆರಾಧ್ಯಾಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಫೋಟೋ ಹಾಗೂ ವಿಡಿಯೋಗಳನ್ನು ಐಶ್ವರ್ಯಾ ರೈ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಐಶ್ವರ್ಯಾ ಹಾಗೂ ಆರಾಧ್ಯಾ ಪ್ರತಿಷ್ಠಿತ ‘ಐಐಎಫ್​ಎ ಅವಾರ್ಡ್ಸ್​ 2022 ಕಾರ್ಯಕ್ರಮ’ಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅಮ್ಮ-ಮಗಳು ಇಬ್ಬರೂ ಒಟ್ಟಾಗಿ ಡ್ಯಾನ್ಸ್ ಮಾಡಿದ್ದಾರೆ.

‘ಐಐಎಫ್​ಎ ಅವಾರ್ಡ್ಸ್​ 2022 ಕಾರ್ಯಕ್ರಮ’ ಅಬುಧಾಬಿಯಲ್ಲಿ ನಡೆಯಿತು. ಜೂನ್​ 25ರಂದು ಕಾರ್ಯಕ್ರಮ ಕಲರ್ಸ್​ನಲ್ಲಿ ಪ್ರಸಾರವಾಗಲಿದೆ. ಈಗ ವಾಹಿನಿ ಹಲವು ಪ್ರೋಮೋಗಳನ್ನು ಹಂಚಿಕೊಳ್ಳುತ್ತಿದೆ. ಆ ಪೈಕಿ ಐಶ್ವರ್ಯಾ ರೈ ಹಾಗೂ ಆರಾಧ್ಯಾ ಡ್ಯಾನ್ಸ್ ಮಾಡಿದ ವಿಡಿಯೋ ಕೂಡ ಒಂದು.

ಇದನ್ನೂ ಓದಿ
Image
ನಟಿ ಐಶ್ವರ್ಯಾ ರೈ ಅವರ ಒಟ್ಟೂ ಆಸ್ತಿ ಎಷ್ಟು? ನಟನೆಯಿಂದ ದೂರ ಉಳಿದರೂ ಬರುತ್ತಿದೆ ಕೋಟಿ ಕೋಟಿ ದುಡ್ಡು
Image
30 ವರ್ಷಗಳ ಹಿಂದೆ ಐಶ್ವರ್ಯಾ ರೈ ಹೇಗಿದ್ರು ಗೊತ್ತಾ? ಇಲ್ಲಿದೆ ಫೋಟೋ
Image
ಐಶ್ವರ್ಯಾ ರೈ ಇ.ಡಿ.ವಿಚಾರಣೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಕೂಗಾಡಿದ ಜಯಾ ಬಚ್ಚನ್​; ಕೆಂಪು ಟೋಪಿ ಶಕ್ತಿ ತೋರಿಸುತ್ತೇವೆಂದು ಖಡಕ್​ ಎಚ್ಚರಿಕೆ
Image
ನಟಿ ಐಶ್ವರ್ಯಾ ರೈ ಬಚ್ಚನ್​ಗೆ ಇಡಿ ಸಮನ್ಸ್​; ಪನಾಮಾ ಪೇಪರ್ಸ್​ ಲೀಕ್​ ಪ್ರಕರಣದಲ್ಲಿ ಮತ್ತೆ ಸಂಕಷ್ಟ

ಐಐಎಫ್​ಎ ಅವಾರ್ಡ್ಸ್​ ಕಾರ್ಯಕ್ರಮ ಪ್ರತಿ ವರ್ಷ ಬೇರೆ ಬೇರೆ ರಾಷ್ಟ್ರಗಳಲ್ಲಿ ನಡೆಯುತ್ತದೆ. ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷ ಈ ಕಾರ್ಯಕ್ರಮಕ್ಕೆ ಅದ್ದೂರಿತನ ಇರಲಿಲ್ಲ. ಆದರೆ, ಈ ಬಾರಿ ದೊಡ್ಡ ಮಟ್ಟದಲ್ಲಿ ಈ ಫಂಕ್ಷನ್ ನಡೆದಿದೆ. ಬಾಲಿವುಡ್​ನ ಬಹುತೇಕ ಸೆಲೆಬ್ರಿಟಿಗಳು ಇದರಲ್ಲಿ ಹಾಜರಿ ಹಾಕಿದ್ದರು. ಇಲ್ಲಿ ಕೇವಲ ಪ್ರಶಸ್ತಿ ಪ್ರದಾನ ಇರುವುದಿಲ್ಲ. ಸ್ಟಾರ್ ನಟ-ನಟಿಯರು ಪರ್ಫಾರ್ಮೆನ್ಸ್ ನೀಡುತ್ತಾರೆ.

ಅಭಿಷೇಕ್ ಬಚ್ಚನ್ ಅವರು ವೇದಿಕೆ ಮೇಲೆ ಡ್ಯಾನ್ಸ್ ಮಾಡಿದರು. ಅವರು ಡ್ಯಾನ್ಸ್ ಮಾಡುತ್ತಾ ವೇದಿಕೆ ಕೆಳಭಾಗದಲ್ಲಿ ಬಂದರು. ಎದುರಿನ ಸಾಲಿನಲ್ಲಿ ಕೂತಿದ್ದ ಐಶ್ವರ್ಯಾ ಹಾಗೂ ಆರಾಧ್ಯಾ ಜತೆ ಸ್ಟೆಪ್ ಹಾಕಿದರು. ಅಭಿಷೇಕ್ ಬಚ್ಚನ್ ಜತೆ ಐಶ್ವರ್ಯಾ ಹಾಗೂ ಆರಾಧ್ಯಾ ಕೂತಲ್ಲಿಯೇ ಡ್ಯಾನ್ಸ್ ಮಾಡಿದರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

View this post on Instagram

A post shared by IIFA Awards (@iifa)

ಐಶ್ವರ್ಯಾ ರೈ ಅವರ ಮುಂದಿನ ಸಿನಿಮಾ ಬಗ್ಗೆ ಹಲವು ವದಂತಿಗಳು ಹುಟ್ಟಿಕೊಂಡಿವೆ. ಅವರು ರಜನಿಕಾಂತ್​ಗೆ ಜತೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ

ನಟಿ ಐಶ್ವರ್ಯಾ ರೈ ಅವರ ಒಟ್ಟೂ ಆಸ್ತಿ ಎಷ್ಟು? ನಟನೆಯಿಂದ ದೂರ ಉಳಿದರೂ ಬರುತ್ತಿದೆ ಕೋಟಿ ಕೋಟಿ ದುಡ್ಡು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ