ನಟಿ ಐಶ್ವರ್ಯಾ ರೈ ಅವರ ಒಟ್ಟೂ ಆಸ್ತಿ ಎಷ್ಟು? ನಟನೆಯಿಂದ ದೂರ ಉಳಿದರೂ ಬರುತ್ತಿದೆ ಕೋಟಿ ಕೋಟಿ ದುಡ್ಡು

ಐಶ್ವರ್ಯಾ ರೈ ಅವರು ನಟನೆಯಿಂದ ದೂರ ಉಳಿದುಕೊಂಡರೂ ಅವರಿಗೆ ಉದ್ಯಮ ಹಾಗೂ ನಾನಾ ಬ್ರ್ಯಾಂಡ್​ಗಳಿಂದ ದುಡ್ಡು ಹರಿದು ಬರುತ್ತಲೇ ಇದೆ.

ನಟಿ ಐಶ್ವರ್ಯಾ ರೈ ಅವರ ಒಟ್ಟೂ ಆಸ್ತಿ ಎಷ್ಟು? ನಟನೆಯಿಂದ ದೂರ ಉಳಿದರೂ ಬರುತ್ತಿದೆ ಕೋಟಿ ಕೋಟಿ ದುಡ್ಡು
ಐಶ್ವರ್ಯಾ ರೈ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 15, 2022 | 6:18 PM

ನಟಿ ಐಶ್ವರ್ಯಾ ರೈ (Aishwarya Rai)  ಅವರು ಬಾಲಿವುಡ್​ನ ಬೇಡಿಕೆಯ ನಟಿಯಲ್ಲಿ ಒಬ್ಬರು. ಆದರೆ, ಇತ್ತೀಚೆಗೆ ಅವರು ನಟನೆ ಬಗ್ಗೆ ಅಷ್ಟು ಆಸಕ್ತಿ ತೋರುತ್ತಿಲ್ಲ. ಕುಟುಂಬದ ಕಡೆ ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಆದಾಗ್ಯೂ ಐಶ್ವರ್ಯಾ ರೈ ಅಭಿಮಾನಿ ಬಳಗ ಹಿರಿದಾಗುತ್ತಲೇ ಇದೆ. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಹಿಂಬಾಲಿಸುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಐಶ್ವರ್ಯಾ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅನೇಕರಲ್ಲಿ ಇದೆ. ಅವರ ಒಟ್ಟೂ ಆಸ್ತಿ ಎಷ್ಟು ಎನ್ನುವ ಕುತೂಹಲ ಅನೇಕರಲ್ಲಿದೆ. ಅದಕ್ಕೆ ಉತ್ತರ ಪಡೆಯಲು ಮುಂದೆ ಓದಿ.

2010ರಲ್ಲಿ ತೆರೆಗೆ ಬಂದ ‘ಗುಜಾರಿಷ್’ ಸಿನಿಮಾ ಬಳಿಕ ಕೇವಲ 4 ಸಿನಿಮಾಗಳಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ. ಇದು ಅವರ ಅಭಿಮಾನಿಗಳ ಪಾಲಿಗೆ ಬೇಸರದ ವಿಚಾರವೇ. ಅವರು ತಮ್ಮ ಸಂಪೂರ್ಣ ಸಮಯವನ್ನು ಕುಟುಂಬದ ಮೇಲೆ ವಿನಿಯೋಗಿಸುತ್ತಿದ್ದಾರೆ. ಅವರು ನಟನೆಯಿಂದ ದೂರ ಉಳಿದುಕೊಂಡರೂ ಅವರಿಗೆ ಉದ್ಯಮ ಹಾಗೂ ನಾನಾ ಬ್ರ್ಯಾಂಡ್​ಗಳಿಂದ ದುಡ್ಡು ಹರಿದು ಬರುತ್ತಲೇ ಇದೆ.

ಒಂದು ವರದಿಯ ಪ್ರಕಾರ ಐಶ್ವರ್ಯಾ ರೈ ಅವರ ಒಟ್ಟೂ ಆಸ್ತಿ ಮೌಲ್ಯ 776 ಕೋಟಿ ರೂಪಾಯಿ. ಮುಂಬೈನ ಅನೇಕ ಕಡೆಗಳಲ್ಲಿ ಅವರು ಮನೆ ಹೊಂದಿದ್ದಾರೆ. ಬಾಂದ್ರಾ ಸಮೀಪ 21 ಕೋಟಿ ರೂಪಾಯಿ ಫ್ಲ್ಯಾಟ್ ಅವರ ಹೆಸರಲ್ಲಿದೆ. 8 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಸೇರಿ ಸಾಕಷ್ಟು ಐಷಾರಾಮಿ ಕಾರುಗಳು ಅವರ ಬಳಿ ಇವೆ. ಐಶ್ವರ್ಯಾ ರೈ ಕೇವಲ ನಟಿ ಮಾತ್ರವಲ್ಲ ಉದ್ಯಮಿ ಕೂಡ ಹೌದು. ಅವರು ಅನೇಕ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಹಲವು ಸ್ಟಾರ್ಟ್​​ಅಪ್​ಗಳ ಮೇಲೆ ಬಂಡವಾಳ ಹಾಕಿದ್ದಾರೆ. ಇದರಿಂದ ಅವರಿಗೆ ಹಣ ಬರುತ್ತಿದೆ.

ಇದನ್ನೂ ಓದಿ
Image
30 ವರ್ಷಗಳ ಹಿಂದೆ ಐಶ್ವರ್ಯಾ ರೈ ಹೇಗಿದ್ರು ಗೊತ್ತಾ? ಇಲ್ಲಿದೆ ಫೋಟೋ
Image
1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ
Image
ಐಶ್ವರ್ಯಾ ರೈ ಇ.ಡಿ.ವಿಚಾರಣೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಕೂಗಾಡಿದ ಜಯಾ ಬಚ್ಚನ್​; ಕೆಂಪು ಟೋಪಿ ಶಕ್ತಿ ತೋರಿಸುತ್ತೇವೆಂದು ಖಡಕ್​ ಎಚ್ಚರಿಕೆ
Image
ನಟಿ ಐಶ್ವರ್ಯಾ ರೈ ಬಚ್ಚನ್​ಗೆ ಇಡಿ ಸಮನ್ಸ್​; ಪನಾಮಾ ಪೇಪರ್ಸ್​ ಲೀಕ್​ ಪ್ರಕರಣದಲ್ಲಿ ಮತ್ತೆ ಸಂಕಷ್ಟ

ಇದನ್ನೂ ಓದಿ: 30 ವರ್ಷಗಳ ಹಿಂದೆ ಐಶ್ವರ್ಯಾ ರೈ ಹೇಗಿದ್ರು ಗೊತ್ತಾ? ಇಲ್ಲಿದೆ ಫೋಟೋ

ಐಶ್ವರ್ಯಾ ರೈ ಅವರು ರಜನಿಕಾಂತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿದೆ. ಅವರು ಪ್ರತಿ ಸಿನಿಮಾಗೆ 10-12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುತ್ತಿದೆ ವರದಿ. ಇದರಿಂದಲೂ ಅವರಿಗೆ ದುಡ್ಡು ಬರುತ್ತದೆ. ಐಶ್ವರ್ಯಾ ರೈ ಅವರು ಹಲವು ದೊಡ್ಡ ಬ್ರ್ಯಾಂಡ್​ಗಳ ರಾಯಭಾರಿ ಆಗಿದ್ದಾರೆ. ಜ್ಯುವೆಲರಿ, ತಂಪು ಪಾನೀಯ, ಸಾಬೂನು ಸೇರಿ ನಾನಾ ಕಂಪನಿಗಳ ಪ್ರಚಾರ ಕಾರ್ಯದಲ್ಲಿ ಅವರು ಭಾಗಿಯಾಗುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ