‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ತಂದೆ ನೆನೆದು ಕಣ್ಣೀರು ಹಾಕಿದ ಶಿವಣ್ಣ; ಇದಕ್ಕೆ ಕಾರಣವಾಯ್ತು ಆ ಒಂದು ಹಾಡು

ಎಲ್ಲಾ ಚಿತ್ರಗಳ ಕೆಲಸಗಳ ಮಧ್ಯೆ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ನ ಆರನೇ ಸೀಸನ್​ಗೆ ಜಡ್ಜ್​ ಆಗಿ ಭಾಗಿ ಆಗುತ್ತಿದ್ದಾರೆ. ಶಿವಣ್ಣ ಅವರು ಈ ಕಾರ್ಯಕ್ರಮಕ್ಕೆ ಬಂದ ದಿನದಿಂದಲೂ ಹಲವು ಭಾವನಾತ್ಮಕ ಕ್ಷಣಗಳಿಗೆ ಈ ವೇದಿಕೆ ಸಾಕ್ಷಿ ಆಗುತ್ತಿದೆ.

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ತಂದೆ ನೆನೆದು ಕಣ್ಣೀರು ಹಾಕಿದ ಶಿವಣ್ಣ; ಇದಕ್ಕೆ ಕಾರಣವಾಯ್ತು ಆ ಒಂದು ಹಾಡು
TV9kannada Web Team

| Edited By: Rajesh Duggumane

Jun 25, 2022 | 5:28 PM

ರಾಜ್​ಕುಮಾರ್ (Rajkumar) ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರ ಮಕ್ಕಳಲ್ಲಿ ಒಬ್ಬರಾದ ಶಿವರಾಜ್​ಕುಮಾರ್ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಶೀಘ್ರವೇ ಅವರು 60ನೇ ವಯಸ್ಸಿಗೆ ಕಾಲಿಡುತ್ತಿದ್ದು, ಈ ವಯಸ್ಸಿನಲ್ಲೂ ಸಾಕಷ್ಟು ಎನರ್ಜಿ ತೋರುತ್ತಿದ್ದಾರೆ. ಹಲವು ವೇದಿಕೆಗಳ ಮೇಲೆ ಶಿವರಾಜ್​ಕುಮಾರ್ (Shivarajkumar) ಅವರು ತಂದೆ ರಾಜ್​ಕುಮಾರ್ ಹಾಗೂ ತಾಯಿ ಪಾರ್ವತಮ್ಮ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರನ್ನು ನೆನಪಿಸಿಕೊಂಡ ಮರುಕ್ಷಣ ಭಾವುಕರಾಗುತ್ತಾರೆ. ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ಶಿವರಾಜ್​ಕುಮಾರ್ ಕಣ್ಣೀರು ಹಾಕಿದ್ದಾರೆ. ಒಂದು ಹಾಡಿನಿಂದ ಅವರು ಭಾವುಕರಾಗಿದ್ದಾರೆ.

ಶಿವರಾಜ್​ಕುಮಾರ್ ಅವರು ಸ್ಯಾಂಡಲ್​ವುಡ್​ನಲ್ಲಿ ಸಖತ್​ ಬ್ಯುಸಿ ಹೀರೋ. ಒಂದಾದಮೇಲೆ ಒಂದರಂತೆ ಹಲವು ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ಅವರ ಹಲವು ಚಿತ್ರಗಳು ಘೋಷಣೆ ಆಗಿದ್ದು, ಶೂಟಿಂಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಈ ಎಲ್ಲಾ ಚಿತ್ರಗಳ ಕೆಲಸಗಳ ಮಧ್ಯೆ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​’ನ ಆರನೇ ಸೀಸನ್​ಗೆ ಜಡ್ಜ್​ ಆಗಿ ಭಾಗಿ ಆಗುತ್ತಿದ್ದಾರೆ. ಶಿವಣ್ಣ ಅವರು ಈ ಕಾರ್ಯಕ್ರಮಕ್ಕೆ ಬಂದ ದಿನದಿಂದಲೂ ಹಲವು ಭಾವನಾತ್ಮಕ ಕ್ಷಣಗಳಿಗೆ ಈ ವೇದಿಕೆ ಸಾಕ್ಷಿ ಆಗುತ್ತಿದೆ.

ಶಿವರಾಜ್​ಕುಮಾರ್ ಅವರು ಈಗಲೂ ರಾಜ್​ಕುಮಾರ್​ ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ. ಇದನ್ನು ಅವರು ಅನೇಕ ಬಾರಿ ಹೇಳಿಕೊಂಡಿದ್ದಿದೆ. ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ ವೇದಿಕೆ ಮೇಲೆ ‘ಜಗವೆ ಒಂದು ರಣ ರಂಗ..’ ಹಾಡನ್ನು ಪ್ರಸಾರ ಮಾಡಲಾಯಿತು. ಈ ಹಾಡಿಗೆ ಸ್ಪರ್ಧಿಗಳು ಡ್ಯಾನ್ಸ್ ಮಾಡಿದರು. ಮೂಲ ಹಾಡನ್ನು ಹಾಡಿದ್ದು ರಾಜ್​ಕುಮಾರ್. ಹೀಗಾಗಿ, ಶಿವಣ್ಣಗೆ ತಂದೆಯ ನೆನಪಾಯಿತು.

View this post on Instagram

A post shared by Zee Kannada (@zeekannada)

‘ಈ ಹಾಡನ್ನು ನೀವು ಪರ್ಫಾರ್ಮ್​ ಮಾಡುವಾಗ ರಣರಂಗ ಸೆಟ್​ಗೆ ಹೋದ ಹಾಗೆ ಆಯ್ತು. ಇವತ್ತು ನನ್ನ ತಂದೆಯನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಯಾವ ಘಳಿಗೆಯಲ್ಲಿ ಹಂಸಲೇಖ ಅವರು ಈ ಹಾಡನ್ನು ಬರೆದರೋ ಗೊತ್ತಿಲ್ಲ. ಅವರಿಗೋಸ್ಕರವೇ ಈ ಹಾಡನ್ನು ಬರೆದ ಹಾಗೆ ಇದೆ’ ಎಂದು ಹೇಳುತ್ತಿರುವಾಗಲೇ ಶಿವಣ್ಣ ಕಣ್ಣಲ್ಲಿ ನೀರು ಬಂತು. ಈ ಪ್ರೋಮೋವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಈ ರಿಯಾಲಿಟಿ ಶೋ ಪ್ರಸಾರವಾಗುತ್ತದೆ. ಅನುಶ್ರೀ ಅವರು ಆ್ಯಂಕರಿಂಗ್ ಮಾಡಿದರೆ, ರಕ್ಷಿತಾ ಪ್ರೇಮ್ ಜಡ್ಜ್​ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ‘ಬೈರಾಗಿ’ ಯಾತ್ರೆ: ಡಾ. ರಾಜ್​ ಹುಟ್ಟಿ ಬೆಳೆದ ಗಾಜನೂರು ನೋಡಲು ಶಿವಣ್ಣನ ಜತೆ ಹೊರಟ ಡಾಲಿ ಧನಂಜಯ

ಇದನ್ನೂ ಓದಿ

ರಾಮನಗರದಲ್ಲಿ ಶಿವರಾಜ್​ಕುಮಾರ್​ಗೆ ಭವ್ಯ ಸ್ವಾಗತ; ಇಲ್ಲಿದೆ ವಿಡಿಯೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada