Shivarajkumar: ‘ಬೈರಾಗಿ’ ಡೈಲಾಗ್ಗಳು ಹೇಗಿವೆ? ರಿಲೀಸ್ಗೂ ಮುಂಚೆ ವೇದಿಕೆಯಲ್ಲೇ ಝಲಕ್ ತೋರಿಸಿದ ಶಿವಣ್ಣ
Bairagee: ‘ಬೈರಾಗಿ’ ಚಿತ್ರವನ್ನು ಥಿಯೇಟರ್ನಲ್ಲಿ ನೋಡಲು ಶಿವರಾಜ್ಕುಮಾರ್ ಫ್ಯಾನ್ಸ್ ಕಾದಿದ್ದಾರೆ. ಶಿವಣ್ಣ ಹೇಳಿದ ಡೈಲಾಗ್ ಕೇಳಿ ಅಭಿಮಾನಿಗಳ ಕಾತರ ಇನ್ನಷ್ಟು ಹೆಚ್ಚಿದೆ.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ನಟನೆಯ ‘ಬೈರಾಗಿ’ ಸಿನಿಮಾ ಜುಲೈ 1ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಡಿಫರೆಂಟ್ ಪಾತ್ರ ಮಾಡಿದ್ದಾರೆ. ಅವರ ಜೊತೆ ಡಾಲಿ ಧನಂಜಯ್ (Daali Dhananjay), ಪೃಥ್ವಿ ಅಂಬಾರ್ ಮುಂತಾದವರು ನಟಿಸಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನ, ಕೃಷ್ಣ ಸಾರ್ಥಕ್ ಅವರ ನಿರ್ಮಾಣದಲ್ಲಿ ‘ಬೈರಾಗಿ’ ಚಿತ್ರ ಮೂಡಿಬಂದಿದೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಚಿತ್ರದಲ್ಲಿ ಯಾವ ರೀತಿಯ ಡೈಲಾಗ್ಗಳು ಇವೆ ಎಂಬುದನ್ನು ಶಿವಣ್ಣ ತಿಳಿಸಿದರು. ವೇದಿಕೆಯಲ್ಲೇ ಒಂದೆರಡು ಸ್ಯಾಂಪಲ್ಗಳನ್ನು ಅವರು ನೀಡಿದರು. ಚಿತ್ರಮಂದಿರದಲ್ಲಿ ‘ಬೈರಾಗಿ’ (Bairagee) ಚಿತ್ರವನ್ನು ಕಣ್ತುಂಬಿಕೊಳ್ಳಲು ಶಿವರಾಜ್ಕುಮಾರ್ ಫ್ಯಾನ್ಸ್ ಕಾದಿದ್ದಾರೆ. ಶಿವಣ್ಣನ ಡೈಲಾಗ್ ಕೇಳಿ ಅಭಿಮಾನಿಗಳ ಕಾತರ ಇನ್ನಷ್ಟು ಹೆಚ್ಚಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ‘ಬೈರಾಗಿ’ ಪ್ರೀ ರಿಲೀಸ್ ಇವೆಂಟ್; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಜುಲೈ 1ಕ್ಕೆ ‘ಬೈರಾಗಿ’ ರಿಲೀಸ್; ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಶಿವಣ್ಣ ಸಿನಿಮಾದ ಟಿವಿ ರೈಟ್ಸ್
Published on: Jun 29, 2022 11:11 AM
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಪರಿಷತ್ ಚುನಾವಣೆ: ಜೆಡಿಎಸ್ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ

