AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anchor Anushree: ಆ್ಯಂಕರ್​ ಅನುಶ್ರೀಗೆ ಜಾಕೆಟ್​ ಗಿಫ್ಟ್​ ನೀಡಿ, ಕೈಯಾರೆ ತೊಡಿಸಿದ ಶಿವಣ್ಣ; ವಿಡಿಯೋ ವೈರಲ್​

Shivarajkumar | Dance Karnataka Dance: ಅಪ್​ಲೋಡ್​ ಮಾಡಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. 71 ಸಾವಿರಕ್ಕೂ ಅಧಿಕ ಜನರು ಲೈಕ್​ ಮಾಡಿದ್ದಾರೆ.

Anchor Anushree: ಆ್ಯಂಕರ್​ ಅನುಶ್ರೀಗೆ ಜಾಕೆಟ್​ ಗಿಫ್ಟ್​ ನೀಡಿ, ಕೈಯಾರೆ ತೊಡಿಸಿದ ಶಿವಣ್ಣ; ವಿಡಿಯೋ ವೈರಲ್​
ಶಿವರಾಜ್​ಕುಮಾರ್​, ಆ್ಯಂಕರ್ ಅನುಶ್ರೀ
TV9 Web
| Updated By: ಮದನ್​ ಕುಮಾರ್​|

Updated on:Jun 28, 2022 | 8:05 AM

Share

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್​ ಅನುಶ್ರೀ (Anchor Anushree) ಅವರು ಟಾಪ್​ ನಿರೂಪಕಿ ಆಗಿ ಮಿಂಚುತ್ತಿದ್ದಾರೆ. ಅನೇಕ ಸಿನಿಮಾ ಕಾರ್ಯಕ್ರಮಗಳನ್ನೂ ಅವರು ನಡೆಸಿಕೊಡುತ್ತಾರೆ. ಬಹುಬೇಡಿಕೆಯ ಈ ನಿರೂಪಕಿ ಎಂದರೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ (Dance Karnataka Dance) ಕಾರ್ಯಕ್ರಮ ಕೂಡ ಅನುಶ್ರೀ ಅವರಿಂದಾಗಿ ಕಳೆ ಕಟ್ಟಿದೆ. ಈ ಶೋನಲ್ಲಿ ಶಿವರಾಜ್​ಕುಮಾರ್​ (Shivarajkumar) ಜಡ್ಜ್​ ಆಗಿದ್ದಾರೆ. ಶಿವಣ್ಣನಿಂದ ಅನುಶ್ರೀಗೆ ಈಗ ಒಂದು ಗಿಫ್ಟ್​ ಸಿಕ್ಕಿದೆ. ಆ ಉಡುಗೊರೆ ಸಿಕ್ಕಿದ್ದಕ್ಕೆ ಅವರು ಹಿರಿಹಿರಿ ಹಿಗ್ಗುತ್ತಿದ್ದಾರೆ. ಆ ಗಿಫ್ಟ್​ ಬೇರೇನೂ ಅಲ್ಲ. ಸ್ವತಃ ಶಿವಣ್ಣ ಧರಿಸಿದ್ದ ಜಾಕೆಟ್​. ಹೌದು, ಈ ಉಡುಗೊರೆ ಪಡೆದ ಕ್ಷಣ ಹೇಗಿತ್ತು ಎಂಬುದನ್ನು ವಿಡಿಯೋ ಸಮೇತ ವಿವರಿಸಿದ್ದಾರೆ ಅನುಶ್ರೀ. ಆ ವಿಡಿಯೋ ಈಗ ವೈರಲ್​ ಆಗಿದೆ.

ಅನುಶ್ರೀ ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಅವರು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ‘ಇದು ಯಾವ ಜನ್ಮದ ಪುಣ್ಯ? ಕಳೆದ ವಾರ ಡಿಕೆಡಿ ಶೂಟ್ ವೇಳೆ ಹೇಳಿದೆ ಅಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ. ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು. ಸುಮ್ನೆ ಹೇಳಿರ್ತಾರೆ ಅಂದ್ಕೊಂಡೆ ನಾನು. ಆದ್ರೆ ಎಷ್ಟೇ ಆದ್ರೂ ಅಣ್ಣಾವರ ರಕ್ತ ಅಲ್ವಾ? ಆಕಾಶ ನೋಡದ ಕೈ, ಪ್ರೀತಿ ಹಂಚಿದ ಕೈಗಳು ಅವು. ಹೊರಡುವ ಮುನ್ನ. ಜಾಕೆಟ್ ಬಿಚ್ಚಿ ಅದರ ಮೇಲೆ ‘With lots of love to dearest friend Anu’ ಅಂತ ಬರೆದು ಸಹಿ ಹಾಕಿ, ತಮ್ಮ ಕೈಯಾರೆ ಜಾಕೆಟ್ ತೊಡಿಸಿ, ಮತ್ತೊಮ್ಮೆ ಮಮತೆ ಮೆರೆದ ಮುತ್ತಣ್ಣ. ಶಿವಣ್ಣ.. ನಿಮ್ಮ ರೂಪದಲ್ಲಿ ನಮ್ಮ ಪರಮಾತ್ಮನನ್ನು ಕಾಣ್ತಿದೀವಿ. ಮತ್ತೊಮ್ಮೆ ಧನ್ಯವಾದಗಳು ಸರ್’ ಎಂದು ಅನುಶ್ರೀ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
Anushree: ರಮ್ಯಾ ಭೇಟಿ ಮಾಡಿ ‘ನೀವು ಯಾಕಿಷ್ಟು ಚಂದ’ ಎಂದು ಕೇಳಿದ ಆ್ಯಂಕರ್ ಅನುಶ್ರೀ
Image
ಅಮ್ಮನನ್ನು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಶಿವಣ್ಣ; ಕ್ಷಮೆ ಕೇಳಿದ ಅನುಶ್ರೀ
Image
ಆ್ಯಂಕರ್ ಅನುಶ್ರೀ ಅವರದ್ದು ಎನ್ನಲಾದ ಸ್ಫೋಟಕ ಆಡಿಯೋ ವೈರಲ್
Image
‘ನಾನಿರೋದು ಬಾಡಿಗೆ ಮನೆಯಲ್ಲಿ’; ಪ್ರಶಾಂತ್​ ಸಂಬರಗಿಗೆ ತಿರುಗೇಟು ನೀಡಿದ ಅನುಶ್ರೀ

ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್​ ಮಾಡಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. 71 ಸಾವಿರಕ್ಕೂ ಅಧಿಕ ಜನರು ಲೈಕ್​ ಮಾಡಿದ್ದಾರೆ. ಕಮೆಂಟ್​ಗಳ ಮೂಲಕ ನೂರಾರು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ‘ನೀವು ತುಂಬಾ ಲಕ್ಕಿ’ ಎಂದು ಎಲ್ಲರೂ ಕಮೆಂಟ್​ ಮಾಡಿದ್ದಾರೆ.

ಪ್ರಸ್ತುತ ಶಿವರಾಜ್​ಕುಮಾರ್​ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿದ ‘ಬೈರಾಗಿ’ ಸಿನಿಮಾ ಜುಲೈ 1ರಂದು ಬಿಡುಗಡೆ ಆಗುತ್ತಿದೆ. ಈ ಚಿತ್ರದಲ್ಲಿ ಪೃಥ್ವಿ ಅಂಬಾರ್​ ಮತ್ತು ಡಾಲಿ ಧನಂಜಯ್​ ಕೂಡ ನಟಿಸಿದ್ದಾರೆ. ವಿಜಯ್​ ಮಿಲ್ಟನ್​ ನಿರ್ದೇಶನ ಮಾಡಿದ್ದು, ಕೃಷ್ಣ ಸಾರ್ಥಕ್​ ಅವರು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ

‘ಅಯ್ಯಯ್ಯೋ ಮುಟ್ಟಬಾರದು’; ಅರ್ಜುನ್​ ಜನ್ಯರನ್ನು ಆಕಾಂಕ್ಷಾ ಟಚ್​ ಮಾಡಿದ್ದಕ್ಕೆ ಅನುಶ್ರೀ ರಿಯಾಕ್ಷನ್​

Published On - 7:46 am, Tue, 28 June 22