Anushree: ರಮ್ಯಾ ಭೇಟಿ ಮಾಡಿ ‘ನೀವು ಯಾಕಿಷ್ಟು ಚಂದ’ ಎಂದು ಕೇಳಿದ ಆ್ಯಂಕರ್ ಅನುಶ್ರೀ

ರಮ್ಯಾ ಹಾಗೂ ಅನುಶ್ರೀ ಅವರು ಒಂದೇ ಇಂಡಸ್ಟ್ರಿಯಲ್ಲಿ ಇದ್ದವರು. ಆದಾಗ್ಯೂ ರಮ್ಯಾ ಜತೆಗಿನ ಒಂದೊಳ್ಳೆಯ ಫೋಟೋ ಅನುಶ್ರೀ ಬಳಿ ಇರಲಿಲ್ಲವಂತೆ. ಹೀಗಾಗಿ, ಅವರನ್ನು ಭೇಟಿಯಾದಾಗ ಒಂದು  ಸೆಲ್ಫೀ ತೆಗೆದುಕೊಂಡು ಅದನ್ನು ಪೋಸ್ಟ್ ಮಾಡಿದ್ದಾರೆ.

Anushree: ರಮ್ಯಾ ಭೇಟಿ ಮಾಡಿ ‘ನೀವು ಯಾಕಿಷ್ಟು ಚಂದ’ ಎಂದು ಕೇಳಿದ ಆ್ಯಂಕರ್ ಅನುಶ್ರೀ
ರಮ್ಯಾ-ಅನುಶ್ರೀ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 10, 2022 | 2:58 PM

ನಟಿ ರಮ್ಯಾ ಅವರು (Actress Ramya) ನಟನೆಯಿಂದ ದೂರ ಉಳಿದಿದ್ದಾರೆ. ಹಾಗಂತ, ಅವರು ಚಿತ್ರರಂಗದ ಜತೆ ನಂಟು ಕಳೆದುಕೊಂಡಿಲ್ಲ. ಅವರು ಅನೇಕ ಸಿನಿಮಾಗಳಿಗೆ ಬೆಂಬಲ ನೀಡುತ್ತಿರುತ್ತಾರೆ. ರಮ್ಯಾ ನಟನೆಯಿಂದ ದೂರ ಉಳಿದು ಹಲವು ವರ್ಷಗಳು ಕಳೆದರೂ ಅವರ ಅಭಿಮಾನಿ ಬಳಗ ಕಿರಿದಾಗಿಲ್ಲ. ಅನೇಕರು ಈಗಲೂ ಅವರನ್ನು ಆರಾಧಿಸುತ್ತಾರೆ. ರಮ್ಯಾ ಮಾಡಿದ ಮೋಡಿ ಅಷ್ಟು ದೊಡ್ಡದು. ಅವರ ವಯಸ್ಸು 39. ಈಗಲೂ ಯುವತಿಯರನ್ನೂ ನಾಚಿಸುವಂತಿದೆ ಅವರ ಅಂದ. ಆ್ಯಂಕರ್​ ಅನುಶ್ರೀ ಅವರು (Acnhor Anushree) ರಮ್ಯಾ ಅವರನ್ನು ಭೇಟಿ ಮಾಡಿದ್ದಾರೆ. ಈ ಖುಷಿಯಲ್ಲಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಮ್ಯಾ ಹಾಗೂ ಅನುಶ್ರೀ ಅವರು ಒಂದೇ ಇಂಡಸ್ಟ್ರಿಯಲ್ಲಿ ಇದ್ದವರು. ಆದಾಗ್ಯೂ ರಮ್ಯಾ ಜತೆಗಿನ ಒಂದೊಳ್ಳೆಯ ಫೋಟೋ ಅನುಶ್ರೀ ಬಳಿ ಇರಲಿಲ್ಲವಂತೆ. ಹೀಗಾಗಿ, ಅವರನ್ನು ಭೇಟಿಯಾದಾಗ ಒಂದು  ಸೆಲ್ಫೀ ತೆಗೆದುಕೊಂಡು ಅದನ್ನು ಪೋಸ್ಟ್ ಮಾಡಿದ್ದಾರೆ ಅನುಶ್ರೀ. ಈ ಫೋಟೋದಲ್ಲಿ ಇಬ್ಬರೂ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಅನುಶ್ರೀ ಉದ್ದನೆಯ ಅಡಿಬರಹ ನೀಡಿದ್ದಾರೆ.

ಇದನ್ನೂ ಓದಿ
Image
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?
Image
Ramya Divya Spandana: ಚೇತನಾ ರಾಜ್​ ನಿಧನದ ಬಗ್ಗೆ ರಮ್ಯಾ ಪ್ರತಿಕ್ರಿಯೆ; ಚಿತ್ರರಂಗದ ಕಹಿ ಸತ್ಯದ ಕುರಿತು ಮೌನ ಮುರಿದ ನಟಿ
Image
ಉದಯಪುರದಲ್ಲಿ ಪಾಟೀಲ್ – ಡಿಕೆಶಿ ಹೆಗಲ ಮೇಲೆ ಕೈ ಹಾಕಿ ಭಾಯ್ ಭಾಯ್! ಇತ್ತ ನಟಿ ರಮ್ಯಾ ಕೂಲ್ ಕೂಲ್ ಟ್ವೀಟ್! ಏನದು?
Image
Rakshit Shetty: ‘ರಮ್ಯಾ ನನ್ನ ಕ್ರಶ್​, ಆದರೆ ಮದುವೆ ಬಗ್ಗೆ ಹಬ್ಬಿರೋದು ಗಾಸಿಪ್​’: ನೇರ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

‘ನೀವು ನಂಬಲ್ಲ, ಇಷ್ಟು ವರ್ಷ ಇಲ್ಲಿ ಕೆಲಸ ಮಾಡಿಯೂ ಇವರ ಜೊತೆ ಒಂದೇ ಒಂದು ಫೋಟೋ ಇರಲಿಲ್ಲ. ಈಗ ಸಿಕ್ಕಿತು. ರಮ್ಯಾ ಅವರೇ ನೀವು ತುಂಬಾನೇ ನಮ್ರ ಗುಣದವರು. ನೀವು ತೋರಿದ ಪ್ರೀತಿ, ನನ್ನ ಬೆಳವಣಿಗೆ ಬಗ್ಗೆ ಹೇಳಿದ ರೀತಿ ಅತ್ಯಂತ ಖುಷಿ ಕೊಟ್ಟಿತು. ನೀವು ಪ್ರತಿ ಬಾರಿ ಇಷ್ಟು ಚಂದ ಹೇಗೆ ಕಾಣುತ್ತೀರಿ?’ ಎಂದು ಅನುಶ್ರೀ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actress Ramya: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ; ದೂರು ನೀಡಿದ್ದು ಯಾರ ವಿರುದ್ಧ?  

ಧನಂಜಯ ನಟನೆಯ ‘ಬಡವ ರಾಸ್ಕಲ್​’ ಸಿನಿಮಾ ಸೂಪರ್ ಹಿಟ್ ಆಗಿತು. ಈ ಚಿತ್ರದಲ್ಲಿ ಬರುವ ‘ಉಡುಪಿ ಹೋಟೆಲು..’ ಹಾಡು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತು. ಈ ಹಾಡಿನಲ್ಲಿ ‘ಯಾಕೆ ಇಷ್ಟು ಚಂದ ನೀನು..’ ಎಂಬ ಸಾಲು ಬರುತ್ತದೆ. ರಮ್ಯಾ ಅವರ ಅಂದವನ್ನು ಹೊಗಳಲು ಅನುಶ್ರೀ ಈ ಸಾಲುಗಳನ್ನು ಉಪಯೋಗಿಸಿದ್ದಾರೆ.

ನಿಮ್ಮನ್ನು ಭೇಟಿ ಮಾಡಿದಾಗ ನೆನಪಾದ ಹಾಡು..…

ಯಾಕೆ ಇಷ್ಟು ಚಂದ ನೀನು

ದೃಷ್ಟಿ ಬೊಟ್ಟನಿಡಲೇನು

ಮಲ್ಗೆ ಹೂವಿನಂಥ ಬಣ್ಣ

ಹೊತ್ತು ಹೊಳಿತಿರೋ ಚಿನ್ನಾ

ಬೆಳದಿಂಗಳ ಕುಡಿದವಳೇ ಚಂದಿರನ ಕಿರಿಮಗಳೆ…

ಎಂದು ಬರೆದುಕೊಂಡಿರುವ ಅವರು, ಈ ಸಾಲುಗಳಿಗೆ ಹೇಳಿಮಾಡಿಸಿದ ಚಂದ. ಅದಕ್ಕೂ ಮೀರಿ ನಿಮ್ಮ ಪ್ರೀತಿಯ ಮಾತು ಅಂದವೋ ಅಂದ’ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Fri, 10 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ