Actress Ramya: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ; ದೂರು ನೀಡಿದ್ದು ಯಾರ ವಿರುದ್ಧ?  

ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ರಮ್ಯಾ ವ್ಯಕ್ತಿಯೋರ್ವನಿಂದ ನಿಂದನೆ ಎದುರಿಸಿದ್ದಾರೆ. ಆತನಿಗೆ ಪಾಠ ಕಲಿಸಲು ರಮ್ಯಾ ಮುಂದಾಗಿದ್ದಾರೆ.

Actress Ramya: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ರಮ್ಯಾ; ದೂರು ನೀಡಿದ್ದು ಯಾರ ವಿರುದ್ಧ?  
ರಮ್ಯಾ
TV9kannada Web Team

| Edited By: Rajesh Duggumane

Jun 09, 2022 | 5:22 PM

ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇರಲು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟೀವ್ ಆಗಿರಲು ಇಷ್ಟಪಡುತ್ತಾರೆ. ನಿತ್ಯ ಹೊಸಹೊಸ ಫೋಟೋ ಹಂಚಿಕೊಂಡು ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ. ಆದರೆ, ಕೆಲವರ ನಡವಳಿಕೆ ಸರಿ ಇರುವುದಿಲ್ಲ. ಸೆಲೆಬ್ರಿಟಿಗಳ ಪೋಸ್ಟ್​ಗೆ ಬಾಯಿಗೆ ಬಂದಂತೆ ಕಮೆಂಟ್ ಹಾಕುತ್ತಾರೆ. ಸೆಲೆಬ್ರಿಟಿಗಳು ಏನೂ ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಅಶ್ಲೀಲ ಸಂದೇಶ ಕಳಿಸುತ್ತಾರೆ. ನಟಿ ರಮ್ಯಾ (Actress Ramya) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ನಿಂದನೆ ಎದುರಾಗಿತ್ತು. ಈ ವಿಚಾರದಲ್ಲಿ ಅವರು ಸುಮ್ಮನೆ ಕೂತಿಲ್ಲ. ಬದಲಿಗೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ನಟಿ ರಮ್ಯಾ ಕನ್ನಡದಲ್ಲಿ ಬಹುಬೇಡಿಕೆಯ ನಟಿ ಆಗಿದ್ದರು. ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಅವರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದರು. ಸಂಸದೆ ಕೂಡ ಆದರು. ಕಾಂಗ್ರೆಸ್​ ಪಕ್ಷದಲ್ಲಿ ಅವರು ಗುರುತಿಸಿಕೊಂಡಿದ್ದರು. ನಂತರ ರಾಜಕೀಯ ತೊರೆದರು. ಈಗ ರಮ್ಯಾ ಎರಡೂ ಕ್ಷೇತ್ರದಿಂದ ದೂರ ಇದ್ದಾರೆ. ಕೆಲ ಸಮಯಗಳ ಕಾಲ ಅವರು ಸೋಶಿಯಲ್ ಮೀಡಿಯಾದಿಂದಲೂ ಅಂತರ ಕಾಯ್ದುಕೊಂಡಿದ್ದರು. ಈಗ ರಮ್ಯಾ ಇನ್​ಸ್ಟಾಗ್ರಾಮ್​ನಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಹಲವು ವಿಚಾರಗಳ ಬಗ್ಗೆ ರಮ್ಯಾ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ರಮ್ಯಾ ವ್ಯಕ್ತಿಯೋರ್ವನಿಂದ ನಿಂದನೆ ಎದುರಿಸಿದ್ದಾರೆ. ಆತನಿಗೆ ಪಾಠ ಕಲಿಸಲು ರಮ್ಯಾ ಮುಂದಾಗಿದ್ದಾರೆ. ಬೆಂಗಳೂರಿನ ಹಲಸೂರು ಗೇಟ್ ಠಾಣೆ ಬಳಿ ಇರುವ ಕೇಂದ್ರ ವಿಭಾಗದ ಸೈಬರ್​ ಕ್ರೈಮ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಂತಹ ಪ್ರಕರಣದಲ್ಲಿ ಸೆಲೆಬ್ರಿಟಿಗಳು ತಮ್ಮ ವಕೀಲರನ್ನು ಕಳುಹಿಸಿ ದೂರು ದಾಖಲು ಮಾಡುತ್ತಾರೆ. ಆದರೆ, ರಮ್ಯಾ ಹಾಗಲ್ಲ. ಅವರು ಖುದ್ದು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ರಮ್ಯಾ ದೂರಿನ ಮೇರೆಗೆ ಎಫ್​ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸುವಂತೆ ಕಮಿಷನರ್​ಗೆ ರಮ್ಯಾ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ‘ರಮ್ಯಾ ನನ್ನ ಕ್ರಶ್​, ಆದರೆ ಮದುವೆ ಬಗ್ಗೆ ಹಬ್ಬಿರೋದು ಗಾಸಿಪ್​’: ನೇರ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

ರಮ್ಯಾ ನಟನೆಯಿಂದ ದೂರ ಇದ್ದರೂ ಚಿತ್ರರಂಗದಿಂದ ಅಂತರ ಕಾಯ್ದು ಕೊಂಡಿಲ್ಲ. ಅನೇಕ ಸಿನಿಮಾಗಳ ಬಗ್ಗೆ ಅವರು ಮೆಚ್ಚುಗೆ ಸೂಚಿಸುತ್ತಾರೆ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ  ನೋಡಿ ಮೆಚ್ಚಿಕೊಂಡಿದ್ದಾರೆ. ತಂಡಕ್ಕೆ ಅವರು ಶುಭಹಾರೈಸಿದ್ದರು. ‘777 ಚಾರ್ಲಿ ಎಮೋಷನಲ್ ಸಿನಿಮಾ. ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ ಇದು. ಇಂತಹದೊಂದು ಅದ್ಭುತ ವಿಚಾರ ಇರುವ ಸಿನಿಮಾವನ್ನು ಕೊಟ್ಟಿರುವ ರಕ್ಷಿತ್ ಶೆಟ್ಟಿ ಹಾಗೂ ತಂಡಕ್ಕೆ ಶುಭ ಹಾರೈಕೆ’ ಎಂದು ರಮ್ಯಾ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada