777 Charlie: ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ರಿಲೀಸ್​; ಪೈರಸಿ ತಡೆಯಲು ಚಿತ್ರತಂಡ ಮಾಡಿರುವ ತಯಾರಿ ಏನು?

Rakshit Shetty: ರಕ್ಷಿತ್​ ಶೆಟ್ಟಿ ಅವರ ‘ಪರಂವಾ ಸ್ಟುಡಿಯೋಸ್​’ ಮೂಲಕ ‘777 ಚಾರ್ಲಿ’ ಸಿನಿಮಾ ತಯಾರಾಗಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್​ ಆಗಿಯೂ ತೆರೆಕಂಡಿದೆ.

777 Charlie: ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ರಿಲೀಸ್​; ಪೈರಸಿ ತಡೆಯಲು ಚಿತ್ರತಂಡ ಮಾಡಿರುವ ತಯಾರಿ ಏನು?
ಚಾರ್ಲಿ, ರಕ್ಷಿತ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Jun 10, 2022 | 8:39 AM

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘777 ಚಾರ್ಲಿ’ ಸಿನಿಮಾ (777 Charlie) ಇಂದು (ಜೂನ್​ 10) ರಿಲೀಸ್​ ಆಗಿದೆ. ಈ ಚಿತ್ರ ನೋಡಲು ಸಿನಿಪ್ರೇಮಿಗಳು ಹಲವು ದಿನಗಳಿಂದ ಕಾದಿದ್ದರು. ಈಗ ಭಾರತ ಮಾತ್ರವಲ್ಲದೇ ವಿದೇಶದ ಹಲವು ಕಡೆಗಳಲ್ಲಿ ಈ ಸಿನಿಮಾವನ್ನು ರಿಲೀಸ್​ ಮಾಡಲಾಗಿದೆ. ಎಲ್ಲ ಸೇರಿ ಸಾವಿರಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ‘777 ಚಾರ್ಲಿ’ ಚಿತ್ರ ಇಂದು ಪ್ರದರ್ಶನ ಆರಂಭಿಸಿದೆ. ರಕ್ಷಿತ್​ ಶೆಟ್ಟಿ (Rakshit Shetty) ಅಭಿಮಾನಿಗಳು ಈ ಸಿನಿಮಾವನ್ನು ನೋಡಿ ಎಂಜಾಯ್​ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಸಿನಿಮಾಗಳಿಗೆ ಪೈರಸಿ (Piracy) ಕಾಟ ಎದುರಾಗುತ್ತಿದೆ. ಆ ರೀತಿ ಆಗಬಾರದು ಎಂದು ‘777 ಚಾರ್ಲಿ’ ಬಳಗ ಒಂದಷ್ಟು ಕ್ರಮಗಳನ್ನು ಕೈಗೊಂಡಿದೆ. ಆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಒಂದು ವೇಳೆ ಯಾರಾದರೂ ‘777 ಚಾರ್ಲಿ’ ಸಿನಿಮಾವನ್ನು ಪೈರಸಿ ಮಾಡಿದ್ದು ಗಮನಕ್ಕೆ ಬಂದರೆ ಆ ಬಗ್ಗೆ ಮಾಹಿತಿ ನೀಡುವಂತೆ ಪ್ರೇಕ್ಷಕರಲ್ಲಿ ಚಿತ್ರತಂಡ ಮನವಿ ಮಾಡಿಕೊಂಡಿದೆ. ಯಾವ ಖಾತೆಗೆ ಟ್ವೀಟ್​ ಮತ್ತು ಇ-ಮೇಲ್​ ಮೂಲಕ ರಿಪೋರ್ಟ್​ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಪೈರಸಿ ತಡೆಯಲು ಒಂದು ತಾಂತ್ರಿಕ ತಂಡವನ್ನು ‘777 ಚಾರ್ಲಿ’ ಟೀಮ್​ ನೇಮಿಸಿದೆ.

ಇದನ್ನೂ ಓದಿ
Image
777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ
Image
ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?
Image
777 Charlie: ಸುದ್ದಿಗೋಷ್ಠಿಗೆ ಚಾರ್ಲಿ ಶ್ವಾನಕ್ಕೆ ನೋ ಎಂಟ್ರಿ; ‘ಮನಸ್ಸು ಬದಲಾಗ್ಬೇಕು’ ಎಂದ ರಕ್ಷಿತ್​ ಶೆಟ್ಟಿ
Image
777 Charlie: ‘777 ಚಾರ್ಲಿ’ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಕ್ಷಿತ್​ ಶೆಟ್ಟಿ

ಇದನ್ನೂ ಓದಿ: 777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ

ಈ ಸಿನಿಮಾದಲ್ಲಿ ಶ್ವಾನ ಮತ್ತು ಮನುಷ್ಯನ ನಡುವಿನ ಸಂಬಂಧದ ಕಥೆಯನ್ನು ಹೇಳಲಾಗಿದೆ. ಕಿರಣ್​ ರಾಜ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಕ್ಷಿತ್​ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ, ದಾನಿಶ್​ ಸೇಠ್​, ರಾಜ್​ ಬಿ. ಶೆಟ್ಟಿ, ಬಾಬಿ ಸಿಂಹ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ನೋಬಿನ್​ ಪೌಲ್​ ಸಂಗೀತ ನೀಡಿದ್ದಾರೆ.

ರಕ್ಷಿತ್​ ಶೆಟ್ಟಿ ಅವರ ‘ಪರಂವಾ ಸ್ಟುಡಿಯೋಸ್​’ ಮೂಲಕ ‘777 ಚಾರ್ಲಿ’ ಸಿನಿಮಾ ತಯಾರಾಗಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್​ ಆಗಿಯೂ ತೆರೆಕಂಡಿದೆ. ಈಗಾಗಲೇ ದೇಶದ 21 ನಗರಗಳಲ್ಲಿ ಇದರ ಪ್ರೀಮಿಯರ್​ ಶೋ ಆಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಮ್ಯಾ, ರಿಷಬ್​ ಶೆಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್