777 Charlie: ಚಿತ್ರಮಂದಿರಕ್ಕೆ ಬಂದು ತನ್ನದೇ ಸಿನಿಮಾ ನೋಡಿದ ಚಾರ್ಲಿ; ಇಲ್ಲಿದೆ ಕ್ಯೂಟ್ ವಿಡಿಯೋ
777 Charlie movie: ‘777 ಚಾರ್ಲಿ’ ಸಿನಿಮಾವನ್ನು ನೋಡಲು ಚಾರ್ಲಿ ಶ್ವಾನ ಕೂಡ ಚಿತ್ರಮಂದಿರಕ್ಕೆ ಬಂದಿದೆ. ಅದಕ್ಕಾಗಿಯೇ ಒಂದು ಆಸನವನ್ನು ಮೀಸಲಿಟ್ಟಿದ್ದು ವಿಶೇಷ.
‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ (777 Charlie) ಸಿನಿಮಾ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇಂದು (ಜೂನ್ 10) ದೇಶಾದ್ಯಂತ ಸಿನಿಮಾ ರಿಲೀಸ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಅಭಿಮಾನಿಗಳು ಮುಗಿಬಿದ್ದು ಈ ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆ ಹೇಳುವ ‘777 ಚಾರ್ಲಿ’ ಚಿತ್ರದಲ್ಲಿ ಚಾರ್ಲಿ ಹೆಸರಿನ ಶ್ವಾನ ನಟಿಸಿದೆ. ಈ ಶ್ವಾನ ತನ್ನದೇ ಸಿನಿಮಾವನ್ನು ಇಂದು ಚಿತ್ರಮಂದಿರದಲ್ಲಿ ನೋಡಿದೆ. ಅದಕ್ಕಾಗಿಯೇ ಒಂದು ಆಸನವನ್ನು ಮೀಸಲಿಟ್ಟಿದ್ದು ವಿಶೇಷ. ಅಭಿಮಾನಿಗಳ ಜೊತೆಯಲ್ಲಿ ಕುಳಿತು ರಕ್ಷಿತ್ ಶೆಟ್ಟಿ (Rakshit Shetty) ಮತ್ತು ಚಿತ್ರತಂಡದ ಇತರೆ ಸದಸ್ಯರು ಸಿನಿಮಾ ನೋಡಿ ಆನಂದಿಸಿದ್ದಾರೆ. ಎಲ್ಲೆಡೆಯಿಂದ ಈ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಇದು ಸಿನಿಮಾ ತಂಡದವರ ಖುಷಿಗೆ ಕಾರಣ ಆಗಿದೆ. ಪರಂವಾ ಸ್ಟುಡಿಯೋಸ್ ಬ್ಯಾನರ್ ಮೂಲಕ ನಿರ್ಮಾಣವಾದ ಈ ಚಿತ್ರಕ್ಕೆ ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಸಂಗೀತಾ ಶೃಂಗೇರಿ ನಟಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 10, 2022 01:50 PM
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

