ಮತ್ತೆ ಕಿರುತೆರೆ ಕದ ತಟ್ಟಿದ ನಟ ಗಣೇಶ್; ‘ಇಸ್ಮಾರ್ಟ್​’ ಜೋಡಿಗಳ ಜತೆ ಬರಲಿದ್ದಾರೆ ‘ಗೋಲ್ಡನ್​ ಸ್ಟಾರ್​’

‘ಸೂಪರ್ ಮಿನಿಟ್​’ ಹಾಗೂ ‘ಗೋಲ್ಡನ್ ಗ್ಯಾಂಗ್​’ ಹೆಸರಿನ ಕಿರುತೆರೆ ರಿಯಾಲಿಟಿ ಶೋಗಳನ್ನು ಗಣೇಶ್​ ನಿರೂಪಣೆ ಮಾಡಿದ್ದಾರೆ. ಈಗ ಅವರು ಮತ್ತೆ ಕಿರುತೆರೆಗೆ ಹಿಂದಿರುಗುತ್ತಿದ್ದಾರೆ.

ಮತ್ತೆ ಕಿರುತೆರೆ ಕದ ತಟ್ಟಿದ ನಟ ಗಣೇಶ್; ‘ಇಸ್ಮಾರ್ಟ್​’ ಜೋಡಿಗಳ ಜತೆ ಬರಲಿದ್ದಾರೆ ‘ಗೋಲ್ಡನ್​ ಸ್ಟಾರ್​’
ಗಣೇಶ್
TV9kannada Web Team

| Edited By: Rajesh Duggumane

Jun 28, 2022 | 9:28 PM

‘ಗೋಲ್ಡನ್ ಸ್ಟಾರ್​’ ಗಣೇಶ್ (Golden Star Ganesh) ಅವರು ಮೊದಲು ಕಿರುತೆರೆಯಲ್ಲಿ ಮಿಂಚಿದವರು. ‘ನಮಸ್ಕಾರ.. ನಮಸ್ಕಾರ..’ ಎಂದು ಹೇಳಿ ಕಿರುತೆರೆ ಜಗತ್ತಿನಲ್ಲಿ ಫೇಮಸ್ ಆದರು. ‘ಮುಂಗಾರು ಮಳೆ’ (Mungaru Male) ಚಿತ್ರದಿಂದ ಅವರ ಲಕ್ ಬದಲಾಯಿತು. ಆದರೂ, ಅವರು ಕಿರುತೆರೆ ಜಗತ್ತಿನ ಜತೆಗಿನ ನಂಟನ್ನು ಕಳೆದುಕೊಂಡಿಲ್ಲ. ಹಲವು ರಿಯಾಲಿಟಿ ಶೋಗಳನ್ನು ಅವರು ನಿರೂಪಿಸಿ ಗಮನ ಸೆಳೆದಿದ್ದಾರೆ. ಈಗ ಅವರು ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

2003ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ಕಾಮಿಡಿ ಟೈಮ್’ ಮೂಲಕ ಗಣೇಶ್​ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. 2006ರಲ್ಲಿ ತೆರೆಗೆ ಬಂದ ‘ಚೆಲ್ಲಾಟ’ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಹೀರೋ ಆಗಿ ಕಾಣಿಸಿಕೊಂಡರು. ಅದೇ ವರ್ಷ ರಿಲೀಸ್ ಆದ ‘ಮುಂಗಾರು ಮಳೆ’ ಸಿನಿಮಾ ಗಣೇಶ್ ಅವರ ಅದೃಷ್ಟ ಬದಲಿಸಿತು. ನಂತರ ಹಲವು ಚಿತ್ರಗಳಲ್ಲಿ ಗಣೇಶ್ ನಟಿಸಿದರು. ಈ ಮಧ್ಯೆ ‘ಸೂಪರ್ ಮಿನಿಟ್​’ ಹಾಗೂ ‘ಗೋಲ್ಡನ್ ಗ್ಯಾಂಗ್​’ ಹೆಸರಿನ ಕಿರುತೆರೆ ರಿಯಾಲಿಟಿ ಶೋಗಳನ್ನು ಅವರು ನಿರೂಪಣೆ ಮಾಡಿದ್ದಾರೆ. ಈಗ ಅವರು ಮತ್ತೆ ಕಿರುತೆರೆಗೆ ಹಿಂದಿರುಗುತ್ತಿದ್ದಾರೆ.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ ‘ಇಸ್ಮಾರ್ಟ್​ ಜೋಡಿ’ ರಿಯಾಲಿಟಿ ಶೋಗೆ ಗಣೇಶ್ ನಿರೂಪಕರಾಗಲಿದ್ದಾರೆ. ಈ ಬಗ್ಗೆ ಸ್ಟಾರ್ ಸುವರ್ಣ ವಾಹಿನಿ ಪ್ರೋಮೋ ಹಂಚಿಕೊಂಡು ಮಾಹಿತಿ ನೀಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಕಾರ್ಯಕ್ರಮ ಯಾವ ರೀತಿ ಮೂಡಿಬರಲಿದೆ ಎನ್ನುವ ಕುತೂಹಲ ವೀಕ್ಷಕರಲ್ಲಿದೆ.

View this post on Instagram

A post shared by Star Suvarna (@starsuvarna)

ಪ್ರೋಮೋ ಹಂಚಿಕೊಂಡಿರುವ ಸ್ಟಾರ್ ಸುವರ್ಣ ವಾಹಿನಿ, ಅದಕ್ಕೆ ಉದ್ದನೆಯ ಕ್ಯಾಪ್ಶನ್ ನೀಡಿದೆ. ‘ಮೊದಲು ನಿಮ್ಮ ಗಣಪಂಗೆ ಪ್ರೀತಿ ಸಿಕ್ಕಿದ್ದು ಟಿವಿಲಿ ನಮಸ್ಕಾರ ಅಂದಾಗ. ಆಮೇಲೆ ಪ್ರೀತಿ ಮಾಡಿದಾಗ, ಪ್ರೀತಿ ಕೈ ಕೊಟ್ಟಾಗ, ಪ್ರೀತಿ ಸಿಕ್ಕಾಗ ಶಿಳ್ಳೆ ಚಪ್ಪಾಳೆ ಹೊಡೆದು ಮೆರೆಸಿ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದ್ದೀರಾ. ಅಂತಹ ಪ್ರೀತಿನ ಮತ್ತೆ ಸೆಲೆಬ್ರೇಟ್ ಮಾಡೋಕೆ ರೊಮ್ಯಾಂಟಿಕ್ ಜೋಡಿಗಳ ಜೊತೆ ಮನರಂಜನೆಯ ಮೋಡಿ ಮಾಡೋಕೆ ನಿಮ್ಮ ಮುಂದೆ ತರ್ತಿದೀನಿ ISMART ಜೋಡಿ’ ಎಂದು ಸ್ಟಾರ್​ ಸುವರ್ಣ ವಾಹಿನಿ ಬರೆದುಕೊಂಡಿದೆ.

ಇದನ್ನೂ ಓದಿ: ‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​

ಇದನ್ನೂ ಓದಿ

Ganesh Birthday: ಜನ್ಮದಿನದ ಸಲುವಾಗಿ ಅಭಿಮಾನಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡ ‘ಗೋಲ್ಡನ್​ ಸ್ಟಾರ್​’ ಗಣೇಶ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada