‘ಚಿತ್ರರಂಗ ಇರುವವರೆಗೂ ಪವರ್​ ಸ್ಟಾರ್​ ಅವರೇ ನಂ.1’; ಅಪ್ಪು ಬಗ್ಗೆ ಗಣೇಶ್​ ಅಭಿಮಾನದ ಮಾತು

‘ಸಖತ್​’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಪುನೀತ್ ರಾಜ್​ಕುಮಾರ್​ ಅವರಿ​ಗೆ ನಮನ ಸಲ್ಲಿಸಲಾಯಿತು. ‘ಗೋಲ್ಡನ್​ ಸ್ಟಾರ್​’ ಗಣೇಶ್​ ಅಭಿನಯದ ಈ ಸಿನಿಮಾ ನ.26ರಂದು ಬಿಡುಗಡೆ ಆಗಲಿದೆ.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಅಗಲಿಕೆ ಇಡೀ ಸ್ಯಾಂಡಲ್​ವುಡ್​ಗೆ ನೋವು ತಂದಿದೆ. ಎಲ್ಲರೂ ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಸಿನಿಮಾಗಳ ಸುದ್ದಿಗೋಷ್ಠಿ ಮತ್ತು ಪ್ರೀ-ರಿಲೀಸ್​ ಕಾರ್ಯಕ್ರಮಗಳಲ್ಲಿ ಪುನೀತ್​ಗೆ ನಮನ ಸಲ್ಲಿಸಲಾಗುತ್ತಿದೆ. ಅವರನ್ನು ನೆನಪು ಮಾಡಿಕೊಳ್ಳದೇ ಯಾವ ಕಾರ್ಯಕ್ರಮವನ್ನೂ ಪ್ರಾರಂಭಿಸಲು ಮನಸ್ಸಾಗುವುದಿಲ್ಲ. ಅಷ್ಟರಮಟ್ಟಿಗೆ ಅಪ್ಪು ಅಗಲಿಕೆ ಎಲ್ಲರನ್ನೂ ಕಾಡುತ್ತಿದೆ. ಸೋಮವಾರ (ನ.22) ನಡೆದ ‘ಸಖತ್​’  (Sakath Kannada Movie)ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ನಲ್ಲೂ ಪುನೀತ್​ಗೆ ನಮನ ಸಲ್ಲಿಸಲಾಯಿತು. ‘ಗೋಲ್ಡನ್​ ಸ್ಟಾರ್​’ ಗಣೇಶ್ (Golden Star Ganesh)​ ಅಭಿನಯದ, ಸಿಂಪಲ್​ ಸುನಿ ನಿರ್ದೇಶನದ ಈ ಸಿನಿಮಾ ನ.26ರಂದು ಬಿಡುಗಡೆ ಆಗಲಿದೆ. ‘ಚಿತ್ರರಂಗ ಇರುವವರೆಗೂ ಪವರ್​ ಸ್ಟಾರ್​ ಅವರೇ ನಂ.1 ಆಗಿರುತ್ತಾರೆ’ ಎನ್ನುವ ಮೂಲಕ ‘ಸಖತ್​’ ಚಿತ್ರದ ವೇದಿಕೆಯಲ್ಲಿ ಪುನೀತ್​ ರಾಜ್​ಕುಮಾರ್​ ಬಗ್ಗೆ ಗಣೇಶ್​ ಅವರು ಮನದ ಮಾತುಗಳನ್ನು ಹಂಚಿಕೊಂಡರು.

ಇದನ್ನೂ ಓದಿ:

ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ

2 ಮುಖ್ಯ ವಿಚಾರವನ್ನು ಪುಷ್ಕರ್​ ಜತೆ ಚರ್ಚಿಸಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದ ಪುನೀತ್​

Click on your DTH Provider to Add TV9 Kannada