‘ಸಖತ್’ ವೇದಿಕೆಯಲ್ಲಿ ಗಣೇಶ್ ಕೋರಿಕೆ ಮೇರೆಗೆ ‘ಎಕ್ಸ್ಕ್ಯೂಸ್ಮೀ’ ಹಾಡು ಹೇಳಿದ ಪ್ರೇಮ್
Sakath Kannada Movie: ‘ಸಖತ್’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಗಣೇಶ್ ಮತ್ತು ಪ್ರೇಮ್ ಜೊತೆಯಾಗಿ ವೇದಿಕೆ ಏರಿದರು. ಈ ವೇಳೆ ಪ್ರೇಮ್ಗೆ ಗಣೇಶ್ ಒಂದು ಮನವಿ ಮಾಡಿಕೊಂಡರು.
‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಅಭಿನಯದ ‘ಸಖತ್’ (Sakath Kannada Movie) ಸಿನಿಮಾ ನ.26ರಂದು ಬಿಡುಗಡೆ ಆಗಲಿದೆ. ಸೋಮವಾರ (ನ.22) ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಿತು. ಅತಿಥಿಗಳಾಗಿ ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಖ್ಯಾತ ನಿರ್ದೇಶಕ ‘ಜೋಗಿ’ ಪ್ರೇಮ್ (Jogi Prem) ಕೂಡ ಈ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದರು. ಗಣೇಶ್ ಮತ್ತು ಪ್ರೇಮ್ ಜೊತೆಯಾಗಿ ವೇದಿಕೆ ಏರಿದರು. ಈ ವೇಳೆ ಪ್ರೇಮ್ಗೆ ಗಣೇಶ್ ಒಂದು ಮನವಿ ಮಾಡಿಕೊಂಡರು. ‘ಎಕ್ಸ್ಕ್ಯೂಸ್ಮೀ’ ಸಿನಿಮಾದ ‘ಬ್ರಹ್ಮ ವಿಷ್ಣು ಮಹೇಶ್ವರ ಹಾಲು ಕುಡಿದರೋ..’ ಹಾಡನ್ನು ಹೇಳುವಂತೆ ಕೋರಿಕೊಂಡರು. ಅದಕ್ಕೆ ಪ್ರೀತಿಯಿಂದಲೇ ಪ್ರತಿಕ್ರಿಯಿಸಿದ ಪ್ರೇಮ್ ಅವರು ಆ ಹಾಡು ಹೇಳಿದರು. ಅವರ ಜತೆ ಗಣೇಶ್ ಕೂಡ ಧ್ವನಿಗೂಡಿಸಿದರು. ‘ಸಖತ್’ ಚಿತ್ರಕ್ಕೆ ಸಿಂಪಲ್ ಸುನಿ (Simple Suni) ನಿರ್ದೇಶನ ಮಾಡಿದ್ದಾರೆ. ನಿಶ್ವಿಕಾ ನಾಯ್ಡು ಮತ್ತು ಸುರಭಿ ಪುರಾಣಿಕ್ ಅವರು ಗಣೇಶ್ಗೆ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:
‘ಚಿತ್ರರಂಗ ಇರುವವರೆಗೂ ಪವರ್ ಸ್ಟಾರ್ ಅವರೇ ನಂ.1’; ಅಪ್ಪು ಬಗ್ಗೆ ಗಣೇಶ್ ಅಭಿಮಾನದ ಮಾತು
ದೇವರಿಗೆ ಮುಡಿ ಕೊಟ್ಟು, ಪುನೀತ್ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

