AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಸಿದ್ಧವಾಯಿತು ಪುನೀತ್​ ರಾಜ್​ಕುಮಾರ್​ ಪುತ್ಥಳಿ

ಬೆಂಗಳೂರಿನಲ್ಲಿ ಸಿದ್ಧವಾಯಿತು ಪುನೀತ್​ ರಾಜ್​ಕುಮಾರ್​ ಪುತ್ಥಳಿ

TV9 Web
| Updated By: ರಾಜೇಶ್ ದುಗ್ಗುಮನೆ|

Updated on:Nov 23, 2021 | 1:05 PM

Share

ಬೆಂಗಳೂರಿನಲ್ಲಿ ಪುನೀತ್​ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಫೈನಲ್‌ ಟಚ್ ನೀಡುವ ಕಾರ್ಯ ಆರಂಭಗೊಂಡಿದೆ. ಬನಶಂಕರಿಯಲ್ಲಿರುವ ಕ್ರಿಯೇಟಿವ್ ಆರ್ಟ್ ಡೈರೆಕ್ಟರ್ ಶಿವದತ್ತ ಕೈಯಲ್ಲಿ ಈ ಪುತ್ಥಳಿ ನಿರ್ಮಾಣವಾಗಿದೆ.

ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿ ಹಲವು ದಿನಗಳು ಕಳೆದಿವೆ. ಅವರ ಸಮಾಧಿಗೆ ಈಗಲೂ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಲೇ ಇದ್ದಾರೆ. ಪುನೀತ್​ ಇಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳೋಕೆ ಕುಟುಂಬ ಹಾಗೂ ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ. ಅಪ್ಪು ಅಣ್ಣ ಶಿವರಾಜ್​ಕುಮಾರ್​ ಸಾಕಷ್ಟು ಕಡೆಗಳಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಪುನೀತ್​ ಅವರನ್ನು ನೆನಪು ಮಾಡಿಕೊಳ್ಳೋಕೆ ನಾನಾ ಕೆಲಸಗಳು ಕೂಡ ನಡೆಯುತ್ತಿವೆ. ರಸ್ತೆ, ಪಾರ್ಕ್​​ಗಳಿಗೆ ಅವರ ಹೆಸರನ್ನು ಇಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ. ಇನ್ನು, ಸಾಕಷ್ಟು ಕಡೆಗಳಲ್ಲಿ ಪುತ್ಥಳಿಗಳು ಕೂಡ ನಿರ್ಮಾಣ ಆಗುತ್ತಿವೆ. ಬೆಂಗಳೂರಿನಲ್ಲಿ ಪುನೀತ್​ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಫೈನಲ್‌ ಟಚ್ ನೀಡುವ ಕಾರ್ಯ ಆರಂಭಗೊಂಡಿದೆ. ಬನಶಂಕರಿಯಲ್ಲಿರುವ ಕ್ರಿಯೇಟಿವ್ ಆರ್ಟ್ ಡೈರೆಕ್ಟರ್ ಶಿವದತ್ತ ಕೈಯಲ್ಲಿ ಈ ಪುತ್ಥಳಿ ನಿರ್ಮಾಣವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಕನ್ನಡ ಸಂಘದವರು ಇದರ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.

ಇದನ್ನೂ ಓದಿ: ದೇವರಿಗೆ ಮುಡಿ ಕೊಟ್ಟು, ಪುನೀತ್​ಗಾಗಿ ಹಾಡು ಹೇಳಿದ ನಟಿ ವಿಜಯಲಕ್ಷ್ಮೀ; ಇಲ್ಲಿದೆ ವಿಡಿಯೋ

ಅಂಬರೀಷ್​ ಫ್ಯಾನ್ಸ್​ ನಿರ್ಧಾರಕ್ಕೆ ಸುಮಲತಾ ಬೇಸರ; ಪುನೀತ್​ ಮತ್ತು ಪ್ರಶಸ್ತಿ ಬಗ್ಗೆ ಹೇಳಿದ್ದೇನು?

Published on: Nov 23, 2021 01:05 PM