AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಲಹಂಕದ ಅಪಾರ್ಟ್​​ಮೆಂಟೊಂದರ ನಿವಾಸಿಗಳಿಗೆ ಪುಕ್ಕಟೆ ಜಲವಿಹಾರದ ಅವಕಾಶ ಸಿಕ್ಕಿದೆ, ನೀವೇ ನೋಡಿ!

ಯಲಹಂಕದ ಅಪಾರ್ಟ್​​ಮೆಂಟೊಂದರ ನಿವಾಸಿಗಳಿಗೆ ಪುಕ್ಕಟೆ ಜಲವಿಹಾರದ ಅವಕಾಶ ಸಿಕ್ಕಿದೆ, ನೀವೇ ನೋಡಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Nov 23, 2021 | 5:20 PM

Share

ದೈನಂದಿನ ಅಗತ್ಯಗಳಾದ ಹಾಲು, ಮೊಸರು, ತರಕಾರಿ, ಮೊಟ್ಟೆ-ಮೀನು-ಮಾಂಸ, ದಿನಸಿ ಯಾವುದನ್ನೂ ಹೊರಗಡೆ ಹೋಗಿ ತಂದುಕೊಳ್ಳುವಂತಿಲ್ಲ. ಅಥವಾ ಅಂಗಡಿಯವರು ಅವರಿಗೆ ತಲುಪಿಸುವಂತೆಯೂ ಇಲ್ಲ.

ಇದನ್ನು ಅಪಾರ್ಟ್​ಮೆಂಟ್​ ನಿರ್ಮಿಸಿದ ಆರ್ಕಿಟೆಕ್ಟ್ ಅಥವಾ ಇಂಜಿನಿಯರ್​​​ನ ವಿವೇಚನೆರಹಿತ ಪ್ಲ್ಯಾನ್ ಅನ್ನಬೇಕೋ ಅಥವಾ ಅಲ್ಲಿನ ನಿವಾಸಿಗಳ ದುರಾದೃಷ್ಟವೋ ಗೊತ್ತಾಗುತ್ತಿಲ್ಲ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರೋದು ಬೆಂಗಳೂರಿನ ಯಲಹಂಕನಲ್ಲಿರುವ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಒಳಗಿನ ದೃಶ್ಯ. ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ನಲ್ಲಿ ಫ್ಲ್ಯಾಟ್ ಕೊಂಡವರಿಗೆ ಮಳೆಗಾಲದಲ್ಲಿ ಉಚಿತ ಜಲವಿಹಾರ್ ಎಂಬ ಆಮಿಷವೊಡ್ಡಿ ಬಿಲ್ಡರ್ ಅವುಗಳನ್ನು ಮಾರಿರಬಹುದು. ಅವನು ಹೇಳಿದ ಜಲವಿಹಾರ್ ಇದೇ ಅಂತ ಮನೆ ಕೊಂಡವರಿಗೆ ಆಗ ಅರ್ಥವಾಗಿರಲಿಕ್ಕಿಲ್ಲ!ಅಸಲಿಗೆ ಕಳೆದೆರಡು ದಿನಗಳಿಂದ ಮಳೆ ಅಗುತ್ತಿಲ್ಲವಾದ್ದರಿಂದ ಅಪಾರ್ಟ್ಮೆಂಟ್ ಕಪೌಂಡ್ನೊಳಗೆ ನುಗ್ಗಿ ಶೇಖರಣೆಗೊಂಡ ನೀರಿನ ಪ್ರಮಾಣ ಕಡಿಮೆಯಾಗಿದೆಯಂತೆ. ಮೊದಲು 3-4 ಅಡಿಗಳಷ್ಟಿದ್ದ ನೀರಿನ ಮಟ್ಟ ಈಗ 2-3 ಅಡಿಗಳಿಗಿಳಿದಿದೆಯಂತೆ.

ಅಪಾರ್ಟ್ ಮೆಂಟ್ ಸುತ್ತಲೂ ನೀರು, ಅಲ್ಲಿ ವಾಸವಾಗಿರುವ ಜನಕ್ಕೆ ನಡುಗಡ್ಡೆಯೊಂದರಲ್ಲಿ ವಾಸವಾಗಿರುವ ಅನುಭವ. ತಮಾಷೆಯ ಮಾತು ಹಾಗಿರಲಿ, ಈ ನಿವಾಸಿಗಳು ಅನುಭವಿಸಿತ್ತಿರುವ ಬವಣೆಯನ್ನು ಯೋಚಿಸಿ ನೋಡಿ.

ದೈನಂದಿನ ಅಗತ್ಯಗಳಾದ ಹಾಲು, ಮೊಸರು, ತರಕಾರಿ, ಮೊಟ್ಟೆ-ಮೀನು-ಮಾಂಸ, ದಿನಸಿ ಯಾವುದನ್ನೂ ಹೊರಗಡೆ ಹೋಗಿ ತಂದುಕೊಳ್ಳುವಂತಿಲ್ಲ. ಅಥವಾ ಅಂಗಡಿಯವರು ಅವರಿಗೆ ತಲುಪಿಸುವಂತೆಯೂ ಇಲ್ಲ. ಚಿಕ್ಕ ಮಕ್ಕಳು ಮತ್ತು ವಯಸ್ಕರು ಮನೆಯಲ್ಲಿದ್ದವರ ಗತಿಯೇನು?

ರಾಜ್ಯ ವಿಪತ್ತು ನಿರ್ವಹಣಾ ದಳದವರು ಬೋಟ್ಗಳ ಮೂಲಕ ಜನರನ್ನು ಹೊರಗೆ ತರುತ್ತಿದ್ದಾರೆ. ತಮಗೆ ಬೇಕಿರುವ ವಸ್ತುಗಳನ್ನು ಖರೀದಿಸಿ ಅವರು ಪುನಃ ಬೋಟಿನ ಮುಖಾಂತರವೇ ವಾಪಸ್ಸು ಹೋಗುತ್ತಾರೆ.

ಪುಕ್ಕಟೆ ಜಲವಿಹಾರದ ಏರ್ಪಾಟು ಮಾಡಿಸುವ ಪ್ರಾಮಿಸ್ ಬಿಲ್ಡರ್ ಮಾಡಿರುತ್ತಾನೆ ಅಂತ ನಾವು ಹೇಳಿರುವುದರಲ್ಲಿ ತಪ್ಪಿದೆಯೇ?

ಇದನ್ನೂ ಓದಿ:     ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್​ಟಿಆರ್​ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ