ಜವಹರಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿ ಕೋಟ್ಯಾಂತರ ರೂ. ಬೆಲೆ ಬಾಳುವ ಲ್ಯಾಬ್ ಮಷಿನ್​ ಹಾಳು

ಜವಹರಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ ನೀರು ನುಗ್ಗಿ ಕೋಟ್ಯಾಂತರ ರೂ. ಬೆಲೆ ಬಾಳುವ ಲ್ಯಾಬ್ ಮಷಿನ್​ ಹಾಳು

TV9 Web
| Updated By: preethi shettigar

Updated on: Nov 23, 2021 | 9:08 AM

ಹಿಮಾಲಯ, ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ್ದ ಮಾನವನನ ಸ್ಯಾಂಪಲ್ಸ್ ಹಾಳಾಗಿದೆ. ಹೆಚ್​ಐವಿ, ಫೀಡ್ಸ್, ಮಲೇರಿಯಾ, ಕಿವುಡುತನ, ನರಗಳ ಬಗ್ಗೆ 15 ವರ್ಷಕ್ಕೂ ಹಳೆಯದಾದ ಮಾನವನ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಆದರೆ ಎಲ್ಲವೂ ನೀರು ಪಾಲಾಗಿದೆ.

ಬೆಂಗಳೂರು: ಜವಹರಲಾಲ್ ನೆಹರು ಸಂಶೋಧನಾ ಕೇಂದ್ರ ಜಲ ದಿಗ್ಭಂದನ ಹಿನ್ನಲೆ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಲ್ಯಾಬ್ ಮಷಿನ್ ಹಾಗೂ ಸಂಶೋಧನೆಗಳು ಹಾಳಾಗಿದೆ. ನೆಹರು ಸಂಶೋಧನಾ ಕೇಂದ್ರ ವಿಶ್ವದಲ್ಲೇ ಉನ್ನತ ಸಂಶೋಧನಾ ಕೇಂದ್ರವಾಗಿತ್ತು. ಈ ಸಂಶೋಧನಾ ಕೇಂದ್ರದಲ್ಲಿ ಹತ್ತರಿಂದ ಹದಿನೈದು ವರ್ಷದಿಂದ ಸ್ಯಾಪಂಲ್ಸ್ ಸಂಗ್ರಹಿಸಲಾಗಿತ್ತು. ಆದರೆ ನಿರಂತರ ಮಳೆಯಿಂದಾಗಿ ಲ್ಯಾಬ್​ಗೆ ನೀರು ನುಗ್ಗಿ ಎಲ್ಲವೂ ಹಾಳಾಗಿದೆ. ಹಿಮಾಲಯ, ಕಾಶ್ಮೀರ, ಪಂಜಾಬ್ ಸೇರಿದಂತೆ ದೇಶದ ಮೂಲೆ ಮೂಲೆಯಿಂದ ಸಂಗ್ರಹಿಸಿದ್ದ ಮಾನವನನ ಸ್ಯಾಂಪಲ್ಸ್ ಹಾಳಾಗಿದೆ. ಹೆಚ್​ಐವಿ, ಫೀಡ್ಸ್, ಮಲೇರಿಯಾ, ಕಿವುಡುತನ, ನರಗಳ ಬಗ್ಗೆ 15 ವರ್ಷಕ್ಕೂ ಹಳೆಯದಾದ ಮಾನವನ ಸ್ಯಾಂಪಲ್ಸ್ ಸಂಗ್ರಹಿಸಲಾಗಿತ್ತು. ಆದರೆ ಎಲ್ಲವೂ ನೀರು ಪಾಲಾಗಿದೆ.

ಪ್ರಮುಖ ಕಾಯಿಲೆಗಳ ಬಗ್ಗೆ ಈ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಮಡಲಾಗುತ್ತಿತ್ತು. ಹೀಗಾಗಿ ದೇಶದ ಹಲವು ಭಾಗಗಳಿಂದ ಸ್ಯಾಂಪಲ್ಸ್ ಸಂಗ್ರಿಹಿಸಿಡಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಕ್ಯಾಂಪಸ್​ನಲ್ಲಿ ನೀರು ಹಿನ್ನಲೆ, ಕ್ಯಾಂಪಸ್​ನಲ್ಲಿ ಪವರ್ ಸಪ್ಲೈ ಕಡಿತ ಮಾಡಲಾಗಿದೆ. ಇದರಿಂದ ಕೆಲವೂ ಲ್ಯಾಬ್​ಗಳಿಗೂ ಪವರ್ ಸಪ್ಲೈ ನಿಂತಿದೆ. ಹೀಗಾಗಿ ಪ್ರಮುಖ ಸ್ಯಾಪಂಲ್ಸ್ ಹಾಳಾಗಿದೆ. ಜಕ್ಕೂರು ಕೆರೆಯಿಂದ ನೀರು ಹೊರ ಬಂದಿದ್ದು, ಮೂರು ಅಡಿಯಷ್ಟು ಕ್ಯಾಂಪಸ್ ಆವರಣದಲ್ಲಿ ನೀರು ನಿಂತಿದೆ.

ಇದನ್ನೂ ಓದಿ:
ವರುಣನ ಅವಾಂತರದ ಮಧ್ಯೆ ಮೀನನ್ನು ನುಂಗಿನೀರು ಕುಡಿದ ಹಾವು

Bengaluru Rain: ಬೆಂಳೂರಿನಲ್ಲಿ ಮಳೆ ಅವಾಂತರ; ಅಪಾರ್ಟ್​ಮೆಂಟ್​ಗಳಿಗೆ ನುಗ್ಗಿದ ನೀರು