ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?

ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
ರೂಪಾಲಿ

ರೂಪಾಲಿ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಇದೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕೇವಲ ಏಳನೇ ವಯಸ್ಸಿಗೆ. 1987ರಲ್ಲಿ ತೆರೆಗೆ ಬಂದ ‘ಸಾಹೇಬ್​’ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡರು.

TV9kannada Web Team

| Edited By: Rajesh Duggumane

Jun 15, 2022 | 1:32 PM

ಕಿರುತೆರೆ ಜಗತ್ತು ಬೆಳೆಯುತ್ತಲೇ ಇದೆ. ಸಿನಿಮಾ ಗುಣಮಟ್ಟದಲ್ಲೇ ಧಾರವಾಹಿಗಳನ್ನು (Serials)ನಿರ್ಮಾಣ ಮಾಡಲಾಗುತ್ತಿದೆ. ಎಲ್ಲಕ್ಕಿಂತ ವಿಶೇವಾಗಿ ಬಜೆಟ್​​ ವಿಚಾರದಲ್ಲಿ ನಿರ್ಮಾಣ ಸಂಸ್ಥೆಗಳು ರಾಜಿ ಆಗಲು ಬಯಸುವುದಿಲ್ಲ. ಹೀಗಾಗಿ, ಅದ್ದೂರಿಯಾಗಿಯೇ ಧಾರಾವಾಹಿಗಳನ್ನು ಶೂಟ್ ಮಾಡಲಾಗುತ್ತಿದೆ. ಇನ್ನು, ಕಿರುತೆರೆ ಕಲಾವಿದರು (Serial Actress) ಕೂಡ ದೊಡ್ಡ ಸಂಭಾವನೆ ಪಡೆಯುತ್ತಾರೆ. ಕೆಲ ಕಿರುತೆರೆ ಕಲಾವಿದರು ಬೆಳ್ಳಿತೆರೆಯ ಹೀರೋಗಳಿಗಿಂತ ಹೆಚ್ಚಿನ ಸಂಭಾವನೆ ಜೇಬಿಗೆ ಇಳಿಸಿಕೊಳ್ಳುತ್ತಿರುವ ಉದಾಹರಣೆ ಇದೆ. ಈಗ ಹಿಂದಿಯ ‘ಅನುಪಮಾ’ ಧಾರಾವಾಹಿಯಲ್ಲಿ ನಟಿಸುತ್ತಿರುವ ರೂಪಾಲಿ ಗಂಗೂಲಿ (Rupali Ganguli ) ಅವರು ಕಿರುತೆರೆ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರು ಒಂದು ದಿನಕ್ಕೆ ಪಡೆಯುವ ಮೊತ್ತ ಕೇಳಿ ಫ್ಯಾನ್ಸ್ ಅಚ್ಚರಿ ಹೊರ ಹಾಕಿದ್ದಾರೆ.

ರೂಪಾಲಿ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಅನುಭವ ಇದೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಕೇವಲ ಏಳನೇ ವಯಸ್ಸಿಗೆ. 1987ರಲ್ಲಿ ತೆರೆಗೆ ಬಂದ ‘ಸಾಹೇಬ್​’ ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡರು. ಬಳಿಕ ಕಿರುತೆರೆ ಲೋಕ ರೂಪಾಲಿಯನ್ನು ಆಕರ್ಷಿಸಿತು. 2000ನೇ ಇಸವಿಯಲ್ಲಿ ‘ಸುಕನ್ಯಾ’ ಧಾರಾವಾಹಿಯಲ್ಲಿ ನಟಿಸಿದರು. ನಂತರ ‘ಸಂಜೀವಿನಿ’ ಮತ್ತು ‘ಭಾಭಿ’ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾದರು.

‘ಸಾರಾಭಾಯ್​’ vs ‘ಸಾರಾಭಾಯ್​’ ಧಾರಾವಾಹಿಯಲ್ಲಿ ಮೋನಿಷಾ ಪಾತ್ರ ಮಾಡಿದ್ದರು. ಈ ಧಾರಾವಾಹಿ ರೂಪಾಲಿ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ‘ಫಿಯರ್ ಫ್ಯಾಕ್ಟರ್​: ಖತ್ರೋ ಕೆ ಖಿಲಾಡಿ 2’ ರಿಯಾಲಿಟಿ ಶೋನಲ್ಲೂ ಅವರು ಭಾಗವಹಿಸಿದರು. ಹೀಗಾಗಿ, ರೂಪಾಲಿ ಅವರು ಸಾಕಷ್ಟು ಅನುಭವ ಹೊಂದಿದ್ದಾರೆ. ಈ ಕಾರಣಕ್ಕೆ ಅವರು ಹೆಚ್ಚಿನ ಮೊತ್ತ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Anupama Gowda: ‘ರಾಜಾ ರಾಣಿ 2’ ಶೋಗೆ ಅನುಪಮಾ ಗೌಡ ಯಾಕೆ ನಿರೂಪಕಿ ಆಗಿಲ್ಲ? ಫ್ಯಾನ್ಸ್ ಪ್ರಶ್ನೆಗೆ ನೇರ ಉತ್ತರ ನೀಡಿದ ನಟಿ

ರೂಪಾಲಿ ಅವರು ಇಷ್ಟು ದಿನ ಒಂದು ದಿನದ ಕಾಲ್​ಶೀಟ್​ಗೆ 1.50 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಿದ್ದರು. ಈಗ ತಮ್ಮ ಸಂಭಾವನೆಯನ್ನು ಅವರು ಹೆಚ್ಚಿಸಿಕೊಂಡಿದ್ದಾರೆ. ಈಗ ಅವರು ಒಂದು ದಿನಕ್ಕೆ 3 ಲಕ್ಷ ರೂಪಾಯಿ ಪಡೆಯುತ್ತಾರೆ ಎಂದು ಬಾಲಿವುಡ್​ ಲೈಫ್ ವರದಿ ಮಾಡಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ‘ರೂಪಾಲಿ ಇದಕ್ಕೆ ಅರ್ಹರು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಅವರು ಕಿರುತೆರೆ ಜಗತ್ತಿನಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ವಾಹಿನಿಯವರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada