ತಪ್ಪು ಮಾಡಿದ ಸಾನಿಯಾಗೆ ಹರ್ಷನ ಎಚ್ಚರಿಕೆ; ಬಿಸಿ ತಟ್ಟಿದ್ದು ಮಾತ್ರ ವರುಧಿನಿಗೆ

ಮದುವೆ ಮನೆಗೆ ಅಜ್ಜಿ ಬಂದಿಲ್ಲ ಎನ್ನುವ ವಿಚಾರ ಹರ್ಷನಿಗೆ ಗೊತ್ತಾಗಿದೆ. ಈ ವೇಳೆ ಆತ ನೇರವಾಗಿ ಕರೆದಿದ್ದು ಸಾನಿಯಾ ಅವಳನ್ನು.

ತಪ್ಪು ಮಾಡಿದ ಸಾನಿಯಾಗೆ ಹರ್ಷನ ಎಚ್ಚರಿಕೆ; ಬಿಸಿ ತಟ್ಟಿದ್ದು ಮಾತ್ರ ವರುಧಿನಿಗೆ
ಸಾನಿಯಾ-ಹರ್ಷ
TV9kannada Web Team

| Edited By: Rajesh Duggumane

Jun 14, 2022 | 6:30 AM

ಕಲರ್ಸ್​ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿ (Kannadathi Serial) ಪ್ರಮುಖ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿಯ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ಮಧ್ಯೆ ಹರ್ಷನ ಮದುವೆ ನಿಲ್ಲಿಸೋಕೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಮಾಡುತ್ತಿರುವುದು ಸಾನಿಯಾ ಹಾಗೂ ವರುಧಿನಿ. ಸಾನಿಯಾ ಈಗ ಎಡವಟ್ಟೊಂದನ್ನು ಮಾಡಿಕೊಂಡಿದ್ದಾಳೆ. ಇದಕ್ಕೆ ಹರ್ಷ ಖಡಕ್ ಎಚ್ಚರಿಕೆ ನೀಡಿದ್ದಾನೆ. ಎಚ್ಚರಿಕೆ ಕೊಟ್ಟಿದ್ದು ಸಾನಿಯಾ ಆದರೂ ವರುಧಿನಿಗೆ ಭಯ ಶುರುವಾಗಿದೆ. ಅಂತಿಮವಾಗಿ ಏನಾಗುತ್ತದೆ ಅನ್ನೋದು ಸದ್ಯದ ಕುತೂಹಲ.

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆ ಆಗುತ್ತಿರುವ ವಿಚಾರದಲ್ಲಿ ಅನೇಕರಿಗೆ ಸಿಟ್ಟಿದೆ. ಭುವಿ ಮದುವೆಯನ್ನು ಹೇಗಾದರೂ ನಿಲ್ಲಿಸಬೇಕು ಎಂದು ಸಾನಿಯಾ ಪ್ಲ್ಯಾನ್ ಮಾಡಿದ್ದಾಳೆ. ಇದಕ್ಕಾಗಿ ಸಾನಿಯಾ ಒಂದು ಪ್ಲ್ಯಾನ್ ರೂಪಿಸಿದ್ದಳು. ಭುವಿಯ ಅಜ್ಜಿಯನ್ನು ಕರೆತರುವ ಕ್ಯಾಬ್​ ಡ್ರೈವರ್​ಗೆ ಹಣ ನೀಡಿದ್ದಳು. ಆತ ಅಜ್ಜಿಯನ್ನು ಕಾಡಿನ ಮಧ್ಯೆ ಬಿಟ್ಟು ಬಂದಿದ್ದಾನೆ. ಮದುವೆ ಮನೆಗೆ ಅಜ್ಜಿ ಬಂದಿಲ್ಲ ಎನ್ನುವ ವಿಚಾರ ಹರ್ಷನಿಗೆ ಗೊತ್ತಾಗಿದೆ. ಈ ವೇಳೆ ಆತ ನೇರವಾಗಿ ಕರೆದಿದ್ದು ಸಾನಿಯಾ ಅವಳನ್ನು.

‘ಅತಿರೇಕ ಯಾವತ್ತೂ ಒಳ್ಳೆಯದಲ್ಲ. ನೀವು ಸ್ಕೀಮ್ ಹಾಕುವುದರಲ್ಲಿ ಎಕ್ಸ್​ಪರ್ಟ್​ ಇರಬಹುದು. ಆದರೆ, ನನ್ನ ಮದುವೆಯಲ್ಲಿ ಈ ರೀತಿ ಆದರೆ ನಾನು ಅದನ್ನು ಸಹಿಸುವುದಿಲ್ಲ. ಎಚ್ಚರಿಕೆಯಿಂದ ಇರಿ’ ಎಂದು ಸಾನಿಯಾಗೆ ಹರ್ಷ ಎಚ್ಚರಿಕೆ ನೀಡಿದ್ದಾನೆ. ಸಾನಿಯಾ ಪಕ್ಕದಲ್ಲೇ ಇದ್ದ ವರುಧಿನಿಗೂ ಈ ಮಾತಿನಿಂದ ಭಯ ಆಗಿದೆ.

ಇದನ್ನೂ ಓದಿ: ‘ಹರ್ಷ ಭುವಿ ಮದುವೆ ಅದೇ ಮುಹೂರ್ತದಲ್ಲಿ ನಡೆಯುತ್ತೆ’; ಸಾನಿಯಾ ವಿರುದ್ಧ ತಿರುಗಿ ಬಿದ್ದ ವರುಧಿನಿ

ಹರ್ಷನನ್ನು ಮದುವೆ ಆಗಲು ವರುಧಿನಿ ಪ್ರಯತ್ನಿಸುತ್ತಿದ್ದಾಳೆ. ಇದಕ್ಕಾಗಿ ನಾನಾ ರೀತಿಯ ಪ್ಲ್ಯಾನ್​ಗಳನ್ನು ಕೂಡ ರೂಪಿಸಿದ್ದಾಳೆ. ಈಗ ಹರ್ಷನ ಎಚ್ಚರಿಕೆಯಿಂದ ಆಕೆಗೆ ಭಯ ಶುರುವಾಗಿದೆ. ಹರ್ಷನಿಗೆ ವರುಧಿನಿ ಮೇಲೆ ಯಾವುದೇ ಭಾವನೆ ಇಲ್ಲ. ಆಕೆಯನ್ನು ಕಂಡರೆ ಮೊದಲಿನಿಂದಲೂ ಆತ ಸಿಡುಕುತ್ತಿದ್ದ. ಆದರೆ ಭುವಿಯ ಕ್ಲೋಸ್​ಫ್ರೆಂಡ್ ಎಂಬ ಕಾರಣಕ್ಕೆ ವರುಧಿನಿಯನ್ನು ಹತ್ತಿರಬಿಟ್ಟುಕೊಂಡಿದ್ದಾನೆ ಹರ್ಷ. ಈಗ ವರುಧಿನಿ ಮಾಡುತ್ತಿರುವ ಪ್ಲ್ಯಾನ್ ಬಯಲಾದರೆ ಜೀವಮಾನದಲ್ಲಿ ಆಕೆಯನ್ನು ಹರ್ಷ ಕ್ಷಮಿಸೋದು ಅನುಮಾನವೇ. ಮುಂದೇನಾಗುತ್ತದೆ ಅನ್ನೋದು ಸದ್ಯದ ಕುತೂಹಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada