ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ

. ವೇದಿಕೆ ಮೇಲೆ ಆ್ಯಂಕರಿಂಗ್ ಮಾಡುತ್ತಿದ್ದ ಅನುಶ್ರೀ ಅವರು ಶಿವರಾಜ್​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದರು. ಈ ವೇಳೆ ಶಿವಣ್ಣ ಅವರು, ‘ಯಾಕೆ ಇಷ್ಟೊಂದು ಹೊಗಳುತ್ತೀರಿ’ ಎಂಬರ್ಥದಲ್ಲಿ ರಿಯಾಕ್ಷನ್ ನೀಡಿದರು.

TV9kannada Web Team

| Edited By: Rajesh Duggumane

Jun 20, 2022 | 2:20 PM

ರವಿಚಂದ್ರನ್ ಪುತ್ರ ವಿಕ್ರಮ್ (Vikram Movie) ರವಿಚಂದ್ರನ್ ಅವರು ಈಗ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಚೊಚ್ಚಲ ಸಿನಿಮಾ ‘ತ್ರಿವಿಕ್ರಮ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್​ನ ನಟರು ಹಾಗೂ ನಟಿಯರು ಭಾಗಿ ಆಗಿದ್ದರು. ಅವರೆಲ್ಲರೂ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಶಿವರಾಜ್​ಕುಮಾರ್ ಅವರು ಕಾರ್ಯಕ್ರಮದಲ್ಲಿ ಹೈಲೈಟ್ ಆದರು. ವೇದಿಕೆ ಮೇಲೆ ಆ್ಯಂಕರಿಂಗ್ ಮಾಡುತ್ತಿದ್ದ ಅನುಶ್ರೀ ಅವರು ಶಿವರಾಜ್​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದರು. ಈ ವೇಳೆ ಶಿವಣ್ಣ ಅವರು, ‘ಯಾಕೆ ಇಷ್ಟೊಂದು ಹೊಗಳುತ್ತೀರಿ’ ಎಂಬರ್ಥದಲ್ಲಿ ರಿಯಾಕ್ಷನ್ ನೀಡಿದರು. ವಿಕ್ರಮ್​ ರವಿಚಂದ್ರನ್​ ಅವರಿಗೆ ಜೋಡಿಯಾಗಿ ಆಕಾಂಕ್ಷಾ ಶರ್ಮಾ ನಟಿಸಿದ್ದಾರೆ. ವಿಕ್ರಮ್​ ಅವರ ಗೆಟಪ್​ ಗಮನ ಸೆಳೆಯುತ್ತಿದೆ. ಸಹನಮೂರ್ತಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸೊಮಣ್ಣ ನಿರ್ಮಾಣ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada