AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಯಲ್ಲೇ ನಡೆಯಲಿದೆ ಹರ್ಷ-ಭುವಿ ಮದುವೆ; ವಿವಾಹ ಮಾಡಲು ಬಂದ ರಾಮಾಚಾರಿ

ಹರ್ಷ ಹಾಗೂ ಭುವಿ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ಖುಷಿ ಆಗಿದ್ದರು. ಆದರೆ, ಮದುವೆ ಅರ್ಧಕ್ಕೆ ನಿಂತಿದ್ದು ನೋಡಿ ಬೇಸರಗೊಂಡರು. ಈಗ ಮದುವೆ ನಡೆಯಲಿದೆ ಎನ್ನುವ ವಿಚಾರ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಮಾಡಿದೆ. ಆ

ಆಸ್ಪತ್ರೆಯಲ್ಲೇ ನಡೆಯಲಿದೆ ಹರ್ಷ-ಭುವಿ ಮದುವೆ; ವಿವಾಹ ಮಾಡಲು ಬಂದ ರಾಮಾಚಾರಿ
ಕನ್ನಡತಿ ಧಾರಾವಾಹಿ
TV9 Web
| Edited By: |

Updated on: Jun 27, 2022 | 10:24 PM

Share

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಭುವಿ ಮದುವೆಗೆ ವಿಘ್ನ ಎದುರಾಗಿದೆ. ಈ ಮದುವೆಯನ್ನು ಅದ್ದೂರಿಯಾಗಿ ನಡೆಸಲು ಪ್ಲ್ಯಾನ್ ಮಾಡಲಾಗಿತ್ತು. ಸಾಕಷ್ಟು ಸಿದ್ಧತೆ ಕೂಡ ನಡೆದಿತ್ತು. ಆದರೆ, ಮದುವೆಗೆ ವರುಧಿನಿ ವಿಲನ್ ಆದಳು. ಮದುವೆ ನಡೆಯುವ ಕೆಲವೇ ಗಂಟೆ ಮೊದಲು ಆಕೆ ಕೈ ಕತ್ತರಿಸಿಕೊಂಡಳು. ಅದು ಭುವಿಯ (Bhuvi) ಎದುರೇ. ಈ ಕಾರಣಕ್ಕೆ ವರುಧಿನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಕೆಲಸ ಭುವಿಯ ಕೈಯಿಂದಲೇ ಆಗಿದೆ. ಹೀಗಾಗಿ, ಮದುವೆ ಅರ್ಧಕ್ಕೆ ನಿಂತಿದೆ. ಮುಹೂರ್ತ ಮೀರಿ ಹೋಗಿದ್ದರಿಂದ ಪೂಜಾರಿಗಳು ಹೊರಟು ಹೋಗಿದ್ದಾರೆ. ಈಗ ಆಸ್ಪತ್ರೆಯಲ್ಲೇ ಮದುವೆ ಮಾಡಲು ಪ್ಲ್ಯಾನ್ ನಡೆದಿದೆ.

ಹರ್ಷ ಹಾಗೂ ಭುವಿ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಫ್ಯಾನ್ಸ್ ಖುಷಿ ಆಗಿದ್ದರು. ಆದರೆ, ಮದುವೆ ಅರ್ಧಕ್ಕೆ ನಿಂತಿದ್ದು ನೋಡಿ ಬೇಸರಗೊಂಡರು. ಈಗ ಮದುವೆ ನಡೆಯಲಿದೆ ಎನ್ನುವ ವಿಚಾರ ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಮಾಡಿದೆ. ಆದರೆ, ಈ ಮದುವೆ ನಡೆಯೋದು ಆಸ್ಪತ್ರೆಯಲ್ಲೇ ಅನ್ನೋದು ವಿಶೇಷ.

ಇದನ್ನೂ ಓದಿ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ
Image
‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ
Image
‘ಕನ್ನಡತಿ’ ಧಾರಾವಾಹಿಗಿಂತಲೂ ಮುಂಚೆ ನಟ ಕಿರಣ್​ ರಾಜ್​ ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ?

‘ನೀನು ನನ್ನ ಕಣ್ಣೆದುರೇ ಮದುವೆ ಆಗಬೇಕು’ ಎಂದು ಭುವಿಯ ಬಳಿ ವರುಧಿನಿ ಭಾಷೆ ತೆಗೆದುಕೊಂಡಿದ್ದಾಳೆ. ಈ ಕಾರಣಕ್ಕೆ ವರು ಆಸ್ಪತ್ರೆಯ ಸೇರುವ ಪ್ಲ್ಯಾನ್ ಮಾಡಿದಳು. ಹೀಗಾಗಿ, ಭುವಿ ಮದುವೆ ಮಂಟಪಕ್ಕೆ ಹೋಗುವ ಬದಲು ಆಸ್ಪತ್ರೆಗೆ ತೆರಳಿದ್ದಾಳೆ. ಭುವಿಯ ಹಿಂದೆ ಹರ್ಷ ಕೂಡ ತೆರಳಿದ್ದಾನೆ. ಅಲ್ಲಿಗೆ ಹರ್ಷ ಹಾಗೂ ಭುವಿ ಮದುವೆ ನಡೆಯುವುದೇ ಇಲ್ಲ ಎಂದೇ ಹೇಳಲಾಗಿತ್ತು. ಆದರೆ, ಈಗ ಕಥೆಗೆ ಟ್ವಿಸ್ಟ್​ ನೀಡಲಾಗಿದೆ.

‘ಕನ್ನಡತಿ’ಗೆ ‘ರಾಮಾಚಾರಿ’ ಧಾರಾವಾಹಿಯ ಕಥಾನಾಯಕ ರಾಮಾಚಾರಿಯ ಎಂಟ್ರಿ ಆಗಿದೆ. ತಾನೇ ಮುಂದೆ ನಿಂತು ಹರ್ಷ ಹಾಗೂ ಭುವಿಯ ಮದುವೆ ಮಾಡಿಸುತ್ತೇನೆ ಎಂದು ಆತ ಹೇಳಿದ್ದಾನೆ. ಆಸ್ಪತ್ರೆಯಲ್ಲಿ ಮದುವೆ ನಡೆಯೋದು ಹರ್ಷನ ತಾಯಿ ರತ್ನಮಾಲಾಗೆ ಕೊಂಚವೂ ಇಷ್ಟವಿಲ್ಲ. ಈ ಕಾರಣಕ್ಕೆ ಆಕೆ ಆಸ್ಪತ್ರೆಯಲ್ಲಿ ಮದುವೆ ಬೇಡ ಎನ್ನುತ್ತಿದ್ದಾಳೆ. ‘ನಿಮ್ಮ ಮನಸ್ಸಿನಲ್ಲಿರುವ ಎಲ್ಲ ಸಂದೇಹಗಳಿಗೂ ಪರಿಹಾರ ನೀಡಿಯೇ ಮದುವೆ ಮಾಡಿಸುತ್ತೇನೆ’ ಎನ್ನುವ ಭರವಸೆ ರಾಮಾಚಾರಿ ಕೈಯಿಂದ ಸಿಕ್ಕಿದೆ.

ಇನ್ನು, ಈ ಜೋಡಿಯ ಮದುವೆಯನ್ನು ಆಸ್ಪತ್ರೆಯಲ್ಲಿ ಮಾಡುತ್ತಿರುವುದಕ್ಕೆ ಫ್ಯಾನ್ಸ್ ಕಡೆಯಿಂದ ವಿರೋಧ ವ್ಯಕ್ತವಾಗಿದೆ. ‘ಅಷ್ಟು ಕ್ಯೂಟ್ ಜೋಡಿ ಮದ್ವೆನಾ ಆಸ್ಪತ್ರೆಯಲ್ಲಿ ಮಾಡುತ್ತೀರಾ? ನೀವು ಬೇಸರ ಮಾಡಿಸಿ ಬಿಟ್ಟಿರಿ’ ಎಂಬ ಕಮೆಂಟ್​ಗಳು ಬರುತ್ತಿವೆ.

ಇದನ್ನೂ ಓದಿ: ‘ನಾವು ಕನ್ನಡತಿ ಧಾರಾವಾಹಿ ನೋಡಲ್ಲ’; ವೀಕ್ಷಕರಿಗೆ ಬೇಸರ ತರಿಸಿದ ಆ ಒಂದು ಟ್ವಿಸ್ಟ್​

ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್