AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jothe Jotheyali Serial Song: 3 ಕೋಟಿ ಬಾರಿ ವೀಕ್ಷಣೆ ಕಂಡ ‘ಜೊತೆ ಜೊತೆಯಲಿ’ ಧಾರಾವಾಹಿ ಹಾಡು

Anu Sirimane | Aryavardhan: ‘ಜೊತೆ ಜೊತೆಯಲಿ’ ಧಾರಾವಾಹಿಯ ಟೈಟಲ್​ ಟ್ರ್ಯಾಕ್​ ಸಖತ್​ ಜನಮೆಚ್ಚುಗೆ ಪಡೆದುಕೊಂಡಿದೆ. 3 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ ಕಂಡು ಮೈಲಿಗಲ್ಲು ಸಾಧಿಸಿದೆ.

Jothe Jotheyali Serial Song: 3 ಕೋಟಿ ಬಾರಿ ವೀಕ್ಷಣೆ ಕಂಡ ‘ಜೊತೆ ಜೊತೆಯಲಿ’ ಧಾರಾವಾಹಿ ಹಾಡು
ಮೇಘಾ ಶೆಟ್ಟಿ, ಅನಿರುದ್ಧ್
TV9 Web
| Edited By: |

Updated on:Jun 27, 2022 | 8:53 AM

Share

ನಟ ಅನಿರುದ್ಧ್ (Aniruddha Jatkar) ಅವರ ಬದುಕಿನಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಪ್ರಾರಂಭ ಆಗಲು ಕಾರಣ ಆಗಿದ್ದು ‘ಜೊತೆ ಜೊತೆಯಲಿ’ ಧಾರಾವಾಹಿ​. ಈ ಸೀರಿಯಲ್ ಮೂಲಕ ಅನೇಕರ ಬದುಕು ಬದಲಾಯಿತು ಎಂದರೆ ತಪ್ಪಿಲ್ಲ. ನಟಿ ಮೇಘಾ ಶೆಟ್ಟಿ ಅವರು ದೊಡ್ಡ ಮಟ್ಟದ ಯಶಸ್ಸು ಪಡೆದರು. ಈಗ ಅವರು ಅನೇಕ ಸಿನಿಮಾಗಳಿಗೂ ನಾಯಕಿ ಆಗಿ ಮಿಂಚುತ್ತಿದ್ದಾರೆ. ‘ಜೊತೆ ಜೊತೆಯಲಿ’ ಸೀರಿಯಲ್​ ಕಥೆಯ ರೀತಿಯೇ ಅದರ ಶೀರ್ಷಿಕೆ ಗೀತೆ (Jothe Jotheyali Serial Song) ಕೂಡ ಜನರ ಅಚ್ಚುಮೆಚ್ಚು. ಈ ಟೈಟಲ್​ ಟ್ರ್ಯಾಕ್​ ನೋಡಿ ವೀಕ್ಷಕರು ಫಿದಾ ಆಗಿದ್ದಾರೆ. ಒಂದು ಕಾಲದಲ್ಲಿ ಧಾರಾವಾಹಿಯ ಸಾಂಗ್​ಗಳು ಜನರ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳುತ್ತಿದ್ದವು. ಅಂಥ ಕಾಲ ಮತ್ತೆ ಮರಳುವಂತೆ ಮಾಡಿದ್ದೇ ‘ಜೀ ಕನ್ನಡ’ ವಾಹಿನಿಯ ‘ಜೊತೆ ಜೊತೆಯಲಿ’ (Jothe Jotheyali Serial) ಶೀರ್ಷಿಕೆ ಗೀತೆ. ಹೌದು, ಯೂಟ್ಯೂಬ್​ನಲ್ಲಿ ಈ ಹಾಡನ್ನು ಬರೋಬ್ಬರಿ 3 ಕೋಟಿ ಬಾರಿ ವೀಕ್ಷಣೆ ಮಾಡಲಾಗಿದೆ.

ಬೇರೆಲ್ಲ ಧಾರಾವಾಹಿಗಳಿಗಿಂತಲೂ ‘ಜೊತೆ ಜೊತೆಯಲಿ’ ಸೀರಿಯಲ್​ ಕಥೆ ಭಿನ್ನವಾಗಿದೆ. ವಯಸ್ಸಿನಲ್ಲಿ ಸಾಕಷ್ಟು ಅಂತರ ಇರುವ ಜೋಡಿಗಳ ನಡುವಿನ ಕಹಾನಿ ಈ ಧಾರಾವಾಹಿಯಲ್ಲಿ ಇದೆ. ಆರ್ಯವರ್ಧನ್​ ಮತ್ತು ಅನು ಸಿರಿಮನೆ ಎಂಬ ಆ ಪಾತ್ರಗಳಿಗೆ ಅನಿರುದ್ಧ್​ ಮತ್ತು ಮೇಘಾ ಶೆಟ್ಟಿ ಜೀವ ತುಂಬಿದ್ದಾರೆ. ಕಥೆಯ ಎಳೆಯನ್ನು ವಿವರಿಸುವ ರೀತಿಯಲ್ಲಿ ಮೂಡಿಬಂದ ಶೀರ್ಷಿಕೆ ಗೀತೆಯನ್ನು ಜನರು ಮೆಚ್ಚಿಕೊಂಡರು. ಧಾರಾವಾಹಿಯ ಗೆಲುವಿಗೆ ಇದು ಕೂಡ ಒಂದು ಕಾರಣ ಎಂದರೆ ತಪ್ಪಿಲ್ಲ.

2020ರ ಜನವರಿ 27ರಂದು ‘ಜೀ ಕನ್ನಡ’ ಯೂಟ್ಯೂಬ್​ ಚಾನೆಲ್​ನಲ್ಲಿ ‘ಜೊತೆ ಜೊತೆಯಲಿ’ ಟೈಟಲ್​ ಟ್ರ್ಯಾಕ್​ ಬಿಡುಗಡೆ ಮಾಡಲಾಯಿತು. ಈವರೆಗೂ ಜನರು ಬರೋಬ್ಬರಿ 3 ಕೋಟಿಗಿಂತಲೂ ಅಧಿಕ ಬಾರಿ ಇದನ್ನು ವೀಕ್ಷಿಸಿದ್ದಾರೆ. ಇದು ಸಣ್ಣ ಸಾಧನೆ ಏನಲ್ಲ. ಈ ಹಾಡಿಗೆ ಹರ್ಷಪ್ರಿಯಾ ಸಾಹಿತ್ಯ ಬರೆದಿದ್ದಾರೆ. ಸುನಾಧ್​ ಗೌತಮ್​ ಸಂಗೀತ ನೀಡಿದ್ದಾರೆ. ನಿನಾದ್​ ನಾಯಕ್​, ನಿಹಾಲ್​ ತಾವ್ರೋ ಹಾಗೂ ರಜತ್​ ಹೆಗಡೆ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ
Image
‘ಟ್ವಿಸ್ಟ್​ ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿ ಇಲ್ಲ’; ಆರ್ಯವರ್ಧನ್ ಕ್ಯಾರೆಕ್ಟರ್ ಬದಲಾದ ಬಗ್ಗೆ ನಟ ಅನಿರುದ್ಧ ಮಾತು
Image
Jothe Jotheyali: ‘ಜೊತೆ ಜೊತೆಯಲಿ’ ಧಾರಾವಾಹಿ ನೋಡೋ ವೀಕ್ಷಕರಿಗೆ ನಟ ಅನಿರುದ್ಧ ವಿಶೇಷ ಮನವಿ
Image
‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿಗೆ ಬಹುಭಾಷಾ ಸಿನಿಮಾ ಆಫರ್​; ಈ ಚಿತ್ರಕ್ಕೆ ಹೀರೋ ಯಾರು?
Image
‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ

ಇಂದಿಗೂ ಈ ಹಾಡಿನ ಕ್ರೇಜ್​ ಕಡಿಮೆ ಆಗಿಲ್ಲ. ಇದರ ವೀವ್ಸ್​ ಹೆಚ್ಚುತ್ತಲೇ ಇದೆ. ಈವರೆಗೂ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್​ ಮಾಡಿದ್ದಾರೆ. 7 ಸಾವಿರಕ್ಕೂ ಅಧಿಕ ಕಮೆಂಟ್​ಗಳ ಮೂಲಕ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಪರಭಾಷೆ ಮಂದಿ ಕೂಡ ಈ ಗೀತೆಗೆ ತಲೆದೂಗಿದ್ದಾರೆ.

ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿಯ ಗೆಲುವಿನ ಸೂತ್ರವೇನು? ನಟಿ ಮೇಘಾ ಶೆಟ್ಟಿ ವಿವರಿಸಿದ್ದು ಹೀಗೆ

‘ಜೊತೆ ಜೊತೆಯಲಿ’ ಧಾರಾವಾಹಿ ಮೇಘಾ ಶೆಟ್ಟಿಗೆ ಬಂತು ಪ್ರ್ಯಾಂಕ್​ ಕಾಲ್​​; ನಟಿಯ ಉತ್ತರ ಹೇಗಿತ್ತು?

Published On - 8:53 am, Mon, 27 June 22

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ