ಜುಲೈ 1ಕ್ಕೆ ‘ಬೈರಾಗಿ’ ರಿಲೀಸ್​; ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಶಿವಣ್ಣ ಸಿನಿಮಾದ ಟಿವಿ​ ರೈಟ್ಸ್​

ಶಿವರಾಜ್​ಕುಮಾರ್ ಅವರು ಈ ಬಾರಿ 60ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಈ ಬಾರಿ ಅಪ್ಪು ಇಲ್ಲ ಎನ್ನುವ ಕಾರಣಕ್ಕೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಆಲೋಚನೆಯಲ್ಲಿ ಅವರು ಇಲ್ಲ. ಈ ಬಗ್ಗೆಯೂ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಜುಲೈ 1ಕ್ಕೆ ‘ಬೈರಾಗಿ’ ರಿಲೀಸ್​; ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು ಶಿವಣ್ಣ ಸಿನಿಮಾದ ಟಿವಿ​ ರೈಟ್ಸ್​
ಶಿವಣ್ಣ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 13, 2022 | 5:18 PM

ಶಿವರಾಜ್​ಕುಮಾರ್ (Shivarajkumar) ನಟನೆಯ ‘ಬೈರಾಗಿ’ ಸಿನಿಮಾ (Bairagee Movie) ರಿಲೀಸ್​ಗೆ ರೆಡಿ ಇದೆ. ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿರುವ ಟೀಂ ಇಂದು (ಜೂನ್ 13) ಸುದ್ದಿಗೋಷ್ಠಿ ಕರೆದಿದೆ. ಬೆಂಗಳೂರಿನಲ್ಲಿರುವ ಶಿವಣ್ಣನ ಮನೆಯಲ್ಲೇ ಸುದ್ದಿಗೋಷ್ಠಿ ನಡೆದಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ದೊಡ್ಡ ಮೊತ್ತಕ್ಕೆ ಟಿವಿ ಹಕ್ಕು ಮಾರಾಟವಾಗಿದೆ ಎನ್ನುವ ಮಾಹಿತಿಯನ್ನು ‘ಬೈರಾಗಿ’ ತಂಡ ಹಂಚಿಕೊಂಡಿದೆ. ಸುದ್ದಿಗೋಷ್ಠಿಯಲ್ಲಿ ಹೊರಬಿದ್ದ ಮಾಹಿತಿಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಶಿವರಾಜ್​ಕುಮಾರ್​ಗೆ ಅಡ್ವಾನ್ಸ್​ ಬರ್ತ್​ಡೇಗೆ ಗಿಫ್ಟ್

ಶಿವರಾಜ್​ಕುಮಾರ್ ಅವರು ಜುಲೈ 12ರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. 11 ದಿನ ಮೊದಲು ಈ ಸಿನಿಮಾ ತೆರೆಗೆ ಬರುತ್ತಿದೆ. ಈ ಬಗ್ಗೆ ನಿರ್ಮಾಪಕ ಕೃಷ್ಣ ಸಾರ್ಥಕ್ ಅವರು ಮಾತನಾಡಿದ್ದಾರೆ. ‘ನಾವು ಹಂಚಿಕೆಯಲ್ಲಿ ಒಂದಷ್ಟು ತಂತ್ರಗಾರಿಕೆ ಮಾಡಿಕೊಂಡಿದ್ದೇವೆ. ಈ ಕಾರಣಕ್ಕೆ ಜುಲೈ 1ರಂದು ಸಿನಿಮಾ ತೆರೆಗೆ ತರುತ್ತಿದ್ದೇವೆ. ಶಿವಣ್ಣ ಅವರಿಗೆ ಇದು ಅಡ್ವಾನ್ಸ್​ ಬರ್ತ್​ಡೇ ಗಿಫ್ಟ್​’ ಎಂದರು ಅವರು.

ಇದನ್ನೂ ಓದಿ
Image
ರವಿಚಂದ್ರನ್​ ಜನ್ಮದಿನ: ಪುತ್ರನ ‘ತ್ರಿವಿಕ್ರಮ’ ಚಿತ್ರದಿಂದ ಬಂತು ವಿಡಿಯೋ ಸಾಂಗ್​​; ಸಾಥ್​ ನೀಡಿದ ಶಿವಣ್ಣ
Image
Yogaraj Bhat: ಶಿವಣ್ಣ- ಪ್ರಭುದೇವ ಕಾಂಬಿನೇಷನ್​ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ ಯೋಗರಾಜ್ ಭಟ್; ಚಿತ್ರೀಕರಣ ಯಾವಾಗ?
Image
ಸೂಪರ್​ ಹೀರೋ ಆಗ್ತಾರೆ ಶಿವಣ್ಣ; ಹೊಸ ಚಿತ್ರಕ್ಕೆ ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ಸಚಿನ್​ ನಿರ್ದೇಶನ
Image
‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​-ರಜನಿಕಾಂತ್​ ನಟನೆ?

10 ಕೋಟಿಗೆ ಮಾರಾಟವಾಯ್ತು ಟಿವಿ ಹಕ್ಕು

‘ಬೈರಾಗಿ’ ಚಿತ್ರದ ಟಿವಿ ಹಕ್ಕು ಈಗಾಗಲೇ ಮಾರಾಟವಾಗಿದೆ. ಸಿನಿಮಾ ರಿಲೀಸ್​ಗೂ ಮೊದಲೇ ನಿರ್ಮಾಪಕರು ಸೇಫ್ ಆಗಿದ್ದಾರೆ. ಈ ಬಗ್ಗೆ ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದಾರೆ. ‘ಟಿವಿ ಹಕ್ಕು 10‌ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಿದೆ. ರಿಲೀಸ್​​ಗೂ ಮೊದಲೇ ಸೇಫ್ ಆಗಿದ್ದೀವಿ. ಥಿಯೇಟರ್ ಮಾತುಕತೆ ನಡೆಯುತ್ತಿದೆ. ಈ ವಾರ ಅಥವಾ ಮುಂದಿನ ವಾರದಲ್ಲಿ ನಾನು ಲಾಭದಲ್ಲಿ ಇರುತ್ತೇನೆ’ ಎಂದರು ಕೃಷ್ಣ ಸಾರ್ಥಕ್.

ದೊಡ್ಡ ಮಟ್ಟದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ

‘ಚಾಮರಾಜನಗರದಲ್ಲಿ ಜೂನ್ 25ಕ್ಕೆ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಅದಕ್ಕೂ ಮೊದಲು ಒಂದು ಬೈಕ್​ ರ‍್ಯಾಲಿ ಇರುತ್ತದೆ. ಜೂನ್​ 24ರಂದು ಬೆಂಗಳೂರಿನಿಂದ ಹೊರಡುತ್ತೇವೆ. ಬೆಂಗಳೂರಿನಿಂದ ರಾಮನಗರಕ್ಕೆ ಹೋಗುತ್ತೇವೆ, ರಾಮನಗರದಿಂದ ಚೆನ್ನಪಟ್ಟಣ, ಮದ್ದೂರು, ಮಂಡ್ಯ ಆ ನಂತರ ಮೈಸೂರು. ಮೈಸೂರಲ್ಲಿ ಸಂಜೆ ಪ್ರೆಸ್​ಮೀಟ್ ಇರುತ್ತದೆ. ಮರುದಿನ (ಜೂನ್ 25) ಚಾಮರಾಜನಗರಕ್ಕೆ ಹೋಗುತ್ತೇವೆ’ ಎಂದು ಶಿವಣ್ಣ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ರಜನಿಕಾಂತ್ ಜತೆ ಶಿವಣ್ಣ ನಟನೆ; ವಿಷಯ ಖಚಿತಪಡಿಸಿ ಹೊಸ ಅಪ್​ಡೇಟ್ ನೀಡಿದ ಶಿವರಾಜ್​ಕುಮಾರ್

ಬರ್ತ್​ಡೇ ಆಚರಿಸಿಕೊಳ್ಳುವ ಆಲೋಚನೆ ಇಲ್ಲ

ಶಿವರಾಜ್​ಕುಮಾರ್ ಅವರು ಈ ಬಾರಿ 60ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ, ಈ ಬಾರಿ ಅಪ್ಪು ಇಲ್ಲ ಎನ್ನುವ ಕಾರಣಕ್ಕೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಆಲೋಚನೆಯಲ್ಲಿ ಅವರು ಇಲ್ಲ. ಈ ಬಗ್ಗೆಯೂ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾ ಟೀಂ ವಿವರ

ಇದು ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ. ಇದರಲ್ಲಿ ಅವರು ಡಿಫರೆಂಟ್​ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹುಲಿ ವೇಷದಲ್ಲಿ ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡಲಿದ್ದಾರೆ. ಅಂಜಲಿ, ಯಶ ಶಿವಕುಮಾರ್​, ಶಶಿ ಕುಮಾರ್​ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ಕೃಷ್ಣ ಸಾರ್ಥಕ್​ ಅವರು ಬಂಡವಾಳ ಹೂಡಿದ್ದಾರೆ. ಅನೂಪ್​ ಸೀಳಿನ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಸಂಕಲನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:08 pm, Mon, 13 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ