AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bairagee Movie: ಶಿವಣ್ಣ, ಶರಣ್​ ಕಂಠದಲ್ಲಿ ‘ರಿದಂ ಆಫ್​ ಶಿವಪ್ಪ’ ಹಾಡು; ಹೊಸ ಸಾಂಗ್​ ಮೂಲಕ ಹೈಪ್​ ಹೆಚ್ಚಿಸಿದ ‘ಬೈರಾಗಿ’

Rhythm of Shivappa: ‘ರಿದಂ ಆಫ್​ ಶಿವಪ್ಪ..’ ಹಾಡು ಸದ್ದು ಮಾಡುತ್ತಿದೆ. ಹಾಡಿನ ಮೂಲಕ ‘ಬೈರಾಗಿ’ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಾಗಿದೆ.

Bairagee Movie: ಶಿವಣ್ಣ, ಶರಣ್​ ಕಂಠದಲ್ಲಿ ‘ರಿದಂ ಆಫ್​ ಶಿವಪ್ಪ’ ಹಾಡು; ಹೊಸ ಸಾಂಗ್​ ಮೂಲಕ ಹೈಪ್​ ಹೆಚ್ಚಿಸಿದ ‘ಬೈರಾಗಿ’
ರಿದಂ ಆಫ್ ಶಿವಪ್ಪ
TV9 Web
| Edited By: |

Updated on:Jun 02, 2022 | 12:17 PM

Share

‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್ (Shivarajkumar)​ ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ‘ಬೈರಾಗಿ’ ಸಿನಿಮಾ ಕೂಡ ವಿಶೇಷವಾಗಿದೆ. ಈ ಚಿತ್ರದಲ್ಲಿ ಶಿವಣ್ಣ ಎಂದಿನಂತೆ ಎನರ್ಜಿಟಿಕ್​ ಆಗಿ ಹಾಡಿ-ಕುಣಿದಿದ್ದಾರೆ. ‘ಬೈರಾಗಿ’ (Bairagee Movie) ಚಿತ್ರದ ಹೊಸ ಹಾಡು ಈಗ ಬಿಡುಗಡೆ ಆಗಿದೆ. ‘ರಿದಂ ಆಫ್​ ಶಿವಪ್ಪ..’ ಎಂಬ ಈ ಗೀತೆಗೆ ಸ್ವತಃ ಅವರು ಧ್ವನಿ ನೀಡಿದ್ದಾರೆ. ಅವರ ಜೊತೆಗೆ ಶರಣ್​ ಕೂಡ ಸಾಥ್​ ನೀಡಿದ್ದಾರೆ. ನಟನೆ ಜೊತೆಗೆ ಗಾಯನದಲ್ಲೂ ಶರಣ್​ ಗುರುತಿಸಿಕೊಂಡಿದ್ದಾರೆ. ಅವರ ಕಂಠದಲ್ಲಿ ಮೂಡಿಬಂದಿರುವ ಈ ಹಾಡು ಅಭಿಮಾನಿಗಳಿಗೆ ಇಷ್ಟ ಆಗುತ್ತಿದೆ. ಈ ಗೀತೆಯ ಲಿರಿಕಲ್​ ವಿಡಿಯೋ ಜೊತೆಗೆ ಒಂದಷ್ಟು ಮೇಕಿಂಗ್​ ತುಣುಕುಗಳನ್ನು ಕೂಡ ‘ಬೈರಾಗಿ’ ತಂಡ ಹಂಚಿಕೊಂಡಿದೆ. ಸದ್ಯ ಯೂಟ್ಯೂಬ್​ನಲ್ಲಿ ‘ರಿದಂ ಆಫ್​ ಶಿವಪ್ಪ..’ (Rhythm of Shivappa) ಹಾಡು ಸದ್ದು ಮಾಡುತ್ತಿದೆ. ಹಾಡಿನ ಮೂಲಕ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಾಗಿದೆ. ಅನೂಪ್​ ಸಿಳೀನ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

‘ಬೈರಾಗಿ’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಜೊತೆ ಡಾಲಿ ಧನಂಜಯ ನಟಿಸಿದ್ದಾರೆ. ‘ಟಗರು’ ಬಳಿಕ ಅವರಿಬ್ಬರು ಮತ್ತೊಮ್ಮೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರಕ್ಕೆ ವಿಜಯ್​ ಮಿಲ್ಟನ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್​ ಕೂಡ ನಟಿಸಿದ್ದಾರೆ. ಕೃಷ್ಣ ಸಾರ್ಥಕ್​ ಈ ಚಿತ್ರದ ನಿರ್ಮಾಪಕರು.

ಇದನ್ನೂ ಓದಿ
Image
ರವಿಚಂದ್ರನ್​ ಜನ್ಮದಿನ: ಪುತ್ರನ ‘ತ್ರಿವಿಕ್ರಮ’ ಚಿತ್ರದಿಂದ ಬಂತು ವಿಡಿಯೋ ಸಾಂಗ್​​; ಸಾಥ್​ ನೀಡಿದ ಶಿವಣ್ಣ
Image
Yogaraj Bhat: ಶಿವಣ್ಣ- ಪ್ರಭುದೇವ ಕಾಂಬಿನೇಷನ್​ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವ ಯೋಗರಾಜ್ ಭಟ್; ಚಿತ್ರೀಕರಣ ಯಾವಾಗ?
Image
ಸೂಪರ್​ ಹೀರೋ ಆಗ್ತಾರೆ ಶಿವಣ್ಣ; ಹೊಸ ಚಿತ್ರಕ್ಕೆ ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ಸಚಿನ್​ ನಿರ್ದೇಶನ
Image
‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​-ರಜನಿಕಾಂತ್​ ನಟನೆ?

ಕೆಲವೇ ದಿನಗಳ ಹಿಂದೆ ಇದೇ ಸಿನಿಮಾದ ‘ನಕರನಖ..’ ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಆಗಿತ್ತು. ಆ ಗೀತೆ 57 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇದರ ಬೆನ್ನಲ್ಲೇ ಈಗ ‘ರಿದಂ ಆಫ್​ ಶಿವಪ್ಪ..’ ಸಾಂಗ್​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಅವರು ವಿಶೇಷ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹುಲಿ ವೇಷ ಧರಿಸಿ ಅವರು ಕಾಣಿಸಿಕೊಂಡ ಪೋಸ್ಟರ್​ ಮತ್ತು ಟೀಸರ್​ ಈಗಾಗಲೇ ವೈರಲ್​ ಆಗಿದೆ. ಆದಷ್ಟು ಬೇಗ ಈ ಚಿತ್ರವನ್ನು ನೋಡಬೇಕು ಎಂದು ‘ಹ್ಯಾಟ್ರಿಕ್​ ಹೀರೋ’ ಅಭಿಮಾನಿಗಳು ಕಾದಿದ್ದಾರೆ.

ಶಿವರಾಜ್​ಕುಮಾರ್​ ನಟಿಸುತ್ತಿರುವ 123ನೇ ಸಿನಿಮಾ ಇದು. ಅಂಜಲಿ, ಯಶ ಶಿವಕುಮಾರ್​, ಶಶಿಕುಮಾರ್​ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:17 pm, Thu, 2 June 22

Follow Us
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ