21 ನಗರಗಳಲ್ಲಿ ಪ್ರೀಮಿಯರ್​ ಆಗಲಿದೆ ‘777 ಚಾರ್ಲಿ’; ಹೊಸ ದಾಖಲೆ ಬರೆಯಲು ಸಜ್ಜಾದ ರಕ್ಷಿತ್​ ಶೆಟ್ಟಿ ಸಿನಿಮಾ

777 Charlie premier show: ‘777 ಚಾರ್ಲಿ’ ಚಿತ್ರದ ಟ್ರೇಲರ್​ ನೋಡಿದ ಎಲ್ಲರಿಗೂ ಇಷ್ಟ ಆಗಿದೆ. ಆದಷ್ಟು ಬೇಗ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಬೇಕು ಎಂದು ಸಿನಿಪ್ರಿಯರು ಹಂಬಲ ವ್ಯಕ್ತಪಡಿಸಿದ್ದಾರೆ.

21 ನಗರಗಳಲ್ಲಿ ಪ್ರೀಮಿಯರ್​ ಆಗಲಿದೆ ‘777 ಚಾರ್ಲಿ’; ಹೊಸ ದಾಖಲೆ ಬರೆಯಲು ಸಜ್ಜಾದ ರಕ್ಷಿತ್​ ಶೆಟ್ಟಿ ಸಿನಿಮಾ
ರಕ್ಷಿತ್​ ಶೆಟ್ಟಿ. ಚಾರ್ಲಿ
Follow us
TV9 Web
| Updated By: ಮದನ್​ ಕುಮಾರ್​

Updated on:Jun 02, 2022 | 7:58 AM

‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ (Rakshit Shetty) ಅಭಿನಯಿಸಿರುವ ‘777 ಚಾರ್ಲಿ’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಜೂನ್​ 10ರಂದು ವಿಶ್ವಾದ್ಯಂತ ‘777 ಚಾರ್ಲಿ’ (777 Charlie) ರಿಲೀಸ್​ ಆಗಲಿದೆ. ಆದರೆ ಅದಕ್ಕೂ ಮುನ್ನ ಪ್ರೀಮಿಯರ್​ ಶೋಗಳ ಮೂಲಕ ಸದ್ದು ಮಾಡಲು ಈ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಒಂದೆರಡು ಕಡೆಗಳಲ್ಲಿ ಪ್ರೀಮಿಯರ್​ ಶೋ ಮಾಡುವುದು ಕಾಮನ್​. ಆದರೆ ಈ ವಿಚಾರದಲ್ಲಿ ‘777 ಚಾರ್ಲಿ’ ತಂಡ ದೊಡ್ಡ ಹೆಜ್ಜೆಯನ್ನೇ ಇಡುತ್ತಿದೆ. ಭಾರತದ 21 ನಗರಗಳಲ್ಲಿ ಪೇಯ್ಡ್​ ಪ್ರೀಮಿಯರ್​ (777 Charlie premier show) ಆಯೋಜಿಸಲಾಗುತ್ತಿದೆ. ಅಂದ್ರೆ, ಜೂ.10ಕ್ಕೂ ಮೊದಲೇ ಈ ಚಿತ್ರವನ್ನು ಜನರು ಕಣ್ತುಂಬಿಕೊಳ್ಳಬಹುದು. ಈ ನ್ಯೂಸ್​ ಕೇಳಿ ರಕ್ಷಿತ್​ ಶೆಟ್ಟಿ ಫ್ಯಾನ್ಸ್​ ಖುಷಿ ಆಗಿದ್ದಾರೆ. ಈ ಚಿತ್ರಕ್ಕೆ ಕಿರಣ್​ ರಾಜ್​ ನಿರ್ದೇಶನ ಮಾಡಿದ್ದಾರೆ. ಯಾವ ಯಾವ ನಗರಗಳಲ್ಲಿ ಪೇಯ್ಡ್​ ಪ್ರೀಮಿಯರ್​ ಆಗಲಿದೆ? ದಿನಾಂಕ ಯಾವುದು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

‘777 ಚಾರ್ಲಿ’ ಚಿತ್ರದ ಟ್ರೇಲರ್​ ನೋಡಿದ ಎಲ್ಲರಿಗೂ ಇಷ್ಟ ಆಗಿದೆ. ಆದಷ್ಟು ಬೇಗ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಬೇಕು ಎಂದು ಸಿನಿಪ್ರಿಯರು ಹಂಬಲ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಮನುಷ್ಯ ಮತ್ತು ಶ್ವಾನದ ನಡುವಿನ ಬಾಂಧವ್ಯದ ಕಥೆ ಇದೆ. ಹಾಗಾಗಿ ಪ್ರಾಣಿಪ್ರಿಯರೆಲ್ಲರೂ ‘777 ಚಾರ್ಲಿ’ ನೋಡಲು ಕಾದಿದ್ದಾರೆ.

ಇದನ್ನೂ ಓದಿ
Image
‘ಬೇರೆ ಭಾಷೆಯಲ್ಲಿ ನಟಿಸೋ ಆಸೆ ಇಲ್ಲ, ಕನ್ನಡದಲ್ಲಿ ಒಳ್ಳೆಯ ಚಿತ್ರ ಮಾಡಿದ್ರೆ ದೇಶಾದ್ಯಂತ ರೀಚ್​ ಆಗತ್ತೆ’: ರಕ್ಷಿತ್​ ಶೆಟ್ಟಿ
Image
ಶ್ವಾನದ ಬಳಿಯೇ ‘777 ಚಾರ್ಲಿ’ ಟ್ರೇಲರ್ ರಿಲೀಸ್ ಮಾಡಿಸಿದ ರಕ್ಷಿತ್ ಶೆಟ್ಟಿ
Image
ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?
Image
777 Charlie Trailer: ‘777 ಚಾರ್ಲಿ’ ಸಿನಿಮಾ ಟ್ರೇಲರ್​ ರಿಲೀಸ್​: ಎಮೋಷನಲ್​ ಕಥೆಯ ಸುಳಿವು ನೀಡಿದ ರಕ್ಷಿತ್​ ಶೆಟ್ಟಿ

ಜೂನ್​ 2ರಂದು ದೆಹಲಿ ಮತ್ತು ಅಮೃತ್​ಸರದಲ್ಲಿ ಪೇಯ್ಡ್​ ಪ್ರೀಮಿಯರ್​ ಆಗಲಿದೆ. ಜೂನ್​ 3ರಂದು ಲಖನೌ, ಜೂನ್​ 6ರಂದು ಚೆನ್ನೈ, ಕೊಚ್ಚಿ, ಜೈಪುರ, ಪುಣೆ, ಮುಂಬೈನಲ್ಲಿ ವಿಶೇಷ ಪ್ರದರ್ಶನ ನಡೆಯಲಿದೆ. ಜೂನ್​ 7ಕ್ಕೆ ಹೈದರಾಬಾದ್​, ಅಹಮದಾಬಾದ್​, ತ್ರಿವೆಂಡ್ರಮ್​, ಸೊಲ್ಲಾಪುರ, ವಾರಾಣಸಿ, ಕೊಯಂಬತ್ತೂರ್​ನಲ್ಲಿ ಚಿತ್ರ ಪ್ರೀಮಿಯರ್​ ಆಗಲಿದೆ. ಜೂನ್​ 8ರಂದು ವಿಶಾಖಪಟ್ಟಣ, ಮಧುರೈ, ಕೋಲ್ಕತ್ತಾ, ಬರೋಡ ನಗರಗಳ ಜನರು ‘777 ಚಾರ್ಲಿ’ ಸಿನಿಮಾ ನೋಡಬಹುದು. ನಾಗ್​ಪುರ, ಸೂರತ್​, ಕರ್ನಾಟಕದ ಹಲವು ನಗರಗಳಲ್ಲಿ ಜೂನ್​ 9ರಂದು ಪ್ರೀಮಿಯರ್​ ಆಗಲಿದೆ.

ಪರಂವಾ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಚಾರ್ಲಿ 777’ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ, ದಾನಿಶ್​ ಸೇಠ್​, ರಾಜ್​ ಬಿ. ಶೆಟ್ಟಿ, ಬಾಬಿ ಸಿಂಹ ಮುಂತಾದವರು ನಟಿಸಿದ್ದಾರೆ. ನೋಬಿನ್​ ಪೌಲ್​ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:57 am, Thu, 2 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ