Sign In

By signing in or creating an account, you agree with Associated Broadcasting Company's Terms & Conditions and Privacy Policy.

Pramod Shetty: ‘ರಕ್ಷಿತ್, ರಿಷಬ್’- ಈರ್ವರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡೋರು ಯಾರು? ಪ್ರಮೋದ್​ ಶೆಟ್ಟಿ ನೀಡಿದ್ರು ಉತ್ತರ

Pramod Shetty: ‘ರಕ್ಷಿತ್, ರಿಷಬ್’- ಈರ್ವರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡೋರು ಯಾರು? ಪ್ರಮೋದ್​ ಶೆಟ್ಟಿ ನೀಡಿದ್ರು ಉತ್ತರ

TV9 Web
| Updated By: shivaprasad.hs

Updated on: Jun 01, 2022 | 10:45 PM

Rakshit Shetty | Rishab Shetty | Politics: ‘ತೂತು ಮಡಿಕೆ’ ಸಿನಿಮಾದ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಪ್ರಮೋದ್ ಶೆಟ್ಟಿ ಅಚ್ಚರಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರಿಷಭ್​ ಶೆಟ್ಟಿ ಈರ್ವರಲ್ಲಿ ಓರ್ವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಅವರು ಹೇಳಿದ್ಧಾರೆ. ಯಾರದು? ಇಲ್ಲಿದೆ ನೋಡಿ.

ಕನ್ನಡ ಚಿತ್ರರಂಗದಲ್ಲಿ ನಟ ಪ್ರಮೋದ್ ಶೆಟ್ಟಿ (Pramod Shetty) ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟ. ‘ತೂತು ಮಡಿಕೆ’ ಸಿನಿಮಾದಲ್ಲಿ (Tootu Madike Movie) ಅವರು ಕಾಣಿಸಿಕೊಳ್ಳುತ್ತಿದ್ದಾರೆ. ‘ತೂತುಮಡಿಕೆ’ ಚಿತ್ರದಲ್ಲಿ ಪ್ರಮೋದ್​ ಶೆಟ್ಟಿ ರಾಜಕಾರಣಿಯ ಪಿಎ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರ ಬಹಳ ಫನ್​ ಆಗಿ ಮೂಡಿಬಂದಿದೆ. ನೇರವಾಗಿ ಎಲ್ಲೂ ರಾಜಕೀಯವನ್ನು ತೋರಿಸಿಲ್ಲ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ ಪ್ರಮೋದ್ ಶೆಟ್ಟಿ. ಈ ವೇಳೆ ಅವರಿಗೆ ನೀವು ರಾಜಕಾರಣಕ್ಕೆ ಬರ್ತೀರಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಅವರು, ‘‘ನನಗೆ ಮಾತನಾಡುವುದರಲ್ಲಿ ಆಸಕ್ತಿ ಇದೆ. ಆದರೆ ಎಲೆಕ್ಷನ್​ಗೆ ನಿಲ್ಲೋದ್ರಲ್ಲಿ ಇಲ್ಲ’’ ಎಂದಿದ್ದಾರೆ. ಆದರೆ ತಮ್ಮ ತಂಡದಿಂದ ಓರ್ವರು ರಾಜಕಾರಣಕ್ಕೆ ಬರಲಿದ್ದಾರೆ ಎಂದು ಗುಟ್ಟುಬಿಟ್ಟುಕೊಟ್ಟಿದ್ದಾರೆ ಪ್ರಮೋದ್.

ರಕ್ಷಿತ್​ ಶೆಟ್ಟಿ ಅಂತ ಗೆಸ್​ ಮಾಡಬಹುದಾ ಎಂದು ಕೇಳಿದಾಗ ‘ಖಂಡಿತ ಅಲ್ಲ’ ಎಂದು ಉತ್ತರಿಸಿದ ಪ್ರಮೋದ್ ಶೆಟ್ಟಿ, ‘‘ರಿಷಬ್​ ಶೆಟ್ಟಿ’’ ಎಂದು ಉತ್ತರಿಸಿದ್ದಾರೆ. ‘‘ರಿಷಭ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇದೆ. ಮತ್ತು ಸಾಮರ್ಥ್ಯ ಇದೆ. ಇನ್ನೊಂದು 20 ವರ್ಷದಲ್ಲಿ ಅವರು ರಾಜಕಾರಣಕ್ಕೆ ಬರಬಹುದು’’ ಎಂದಿದ್ದಾರೆ ಪ್ರಮೋದ್​. ಸದ್ಯ ಅವರ ಮಾತುಗಳು ಚಿತ್ರಪ್ರೇಮಿಗಳ ಗಮನಸೆಳೆದಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ