Ilaiyaraaja Best Kannada Songs: ಎಂದೂ ಮರೆಯದ ಗೀತೆಗಳನ್ನು ನೀಡಿದ ಇಳಯರಾಜ; ಇಲ್ಲಿದೆ ಸೂಪರ್ ಹಿಟ್ ಹಾಡುಗಳ ಪಟ್ಟಿ

Ilaiyaraaja Birthday: ಸಂಗೀತ ನಿರ್ದೇಶಕ ಇಳಯರಾಜ ಜನ್ಮದಿನವಿಂದು. ಕನ್ನಡದಲ್ಲಿ ಹತ್ತು-ಹಲವು ಸೂಪರ್ ಹಿಟ್ ಗೀತೆಗಳನ್ನು ನೀಡಿದ ಖ್ಯಾತಿ ಅವರದ್ದು. ಚಿತ್ರಪ್ರೇಮಿಗಳು ಈಗಲೂ ಗುನುಗುವ ಅವರ ಕೆಲವು ಪ್ರಖ್ಯಾತ ಗೀತೆಗಳು ಇಲ್ಲಿವೆ.

Ilaiyaraaja Best Kannada Songs: ಎಂದೂ ಮರೆಯದ ಗೀತೆಗಳನ್ನು ನೀಡಿದ ಇಳಯರಾಜ; ಇಲ್ಲಿದೆ ಸೂಪರ್ ಹಿಟ್ ಹಾಡುಗಳ ಪಟ್ಟಿ
ಇಳಯರಾಜ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on: Jun 02, 2022 | 12:30 PM

ಸಂಗೀತ ನಿರ್ದೇಶಕ ಇಳಯರಾಜ (Ilaiyaraaja) ಅವರು ಸಂಗೀತ ಮಾಂತ್ರಿಕರೆಂದೇ ಹೆಸರಾದವರು. ಸುಮಾರು 1,500ಕ್ಕೂ ಹೆಚ್ಚು ಚಿತ್ರಗಳ 7,000ಕ್ಕೂ ಅಧಿಕ ಹಾಡುಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. 20,000ಕ್ಕೂ ಹೆಚ್ಚು ವೇದಿಕೆಗಳಲ್ಲಿ ಲೈವ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡದಲ್ಲೂ ಬಹಳಷ್ಟು ಸೂಪರ್ ಹಿಟ್ ಗೀತೆಗಳನ್ನು ನೀಡಿದ ಖ್ಯಾತಿ ಅವರದ್ದು. ಇಳಯರಾಜ ಅವರು ನೀಡಿದ ಸಂಗೀತಕ್ಕೆ ಎಸ್​.ಪಿ.ಬಾಲಸುಬ್ರಹ್ಮಣ್ಯಂ, ಎಸ್​.ಜಾನಕಿ, ಹರಿಹರನ್​ ಸೇರಿದಂತೆ ಹಲವು ಖ್ಯಾತ ಗಾಯಕರು ದನಿ ನೀಡಿದ್ದಾರೆ. ಅಂತಹ ಹಾಡುಗಳು ಕನ್ನಡದ ಸಾರ್ವಕಾಲಿಕ ಸೂಪರ್ ಹಿಟ್ ಹಾಡುಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ. ಚಲನಚಿತ್ರ ಸಂಗೀತಕ್ಕೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು, ಪದ್ಮ ಭೂಷಣ ಸೇರಿದಂತೆ ಅನೇಕ ಪುರಸ್ಕಾರಗಳು ಅವರಿಗೆ ಲಭಿಸಿವೆ. ಇಂದು ಇಳಯರಾಜ ಅವರ ಜನ್ಮದಿನ. 79ನೇ ವಯಸ್ಸಿಗೆ ಅವರು ಕಾಲಿಟ್ಟಿದ್ದಾರೆ. ಅವರ ಸಂಗೀತ ನಿರ್ದೇಶನದ ಎಂದೂ ಮರೆಯಲಾಗದ ಕನ್ನಡದ ಕೆಲವು ಸೂಪರ್ ಹಿಟ್ ಗೀತೆಗಳ ಪಟ್ಟಿ ಇಲ್ಲಿದೆ.

ಜೊತೆಯಲಿ ಜೊತೆ ಜೊತೆಯಲಿ: 1981ರಲ್ಲಿ ತೆರೆಕಂಡ ‘ಗೀತಾ’ ಚಿತ್ರದ ಈ ಹಾಡನ್ನು ಇಂದಿಗೂ ಜನರು ಗುನುಗುತ್ತಾರೆ. ಶಂಕರ್ ನಾಗ್ ಹಾಗೂ ಅಕ್ಷತಾ ರಾವ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಎಸ್​ಪಿಬಿ ಹಾಗೂ ಎಸ್​.ಜಾನಕಿ ಹಾಡಿದ್ದ ಹಾಡಿಗೆ ಚಿ.ಉದಯಶಂಕರ್ ಸಾಹಿತ್ಯ ಬರೆದಿದ್ದರು.

ಇದನ್ನೂ ಓದಿ
Image
Johnny Depp Amber Heard Case: ಮಾಜಿ ಪತ್ನಿ ವಿರುದ್ಧದ ಕೇಸ್ ಗೆದ್ದು ಸುಮಾರು 116 ಕೋಟಿ ರೂ ಪರಿಹಾರ ಪಡೆದ ಖ್ಯಾತ ನಟ ಜಾನಿ ಡೆಪ್​
Image
Samrat Prithviraj: ‘ಆರ್​​ಆರ್​ಆರ್​​’, ‘ಧಾಕಡ್​’ ಹಾದಿಯಲ್ಲಿ ‘ಸಾಮ್ರಾಟ್ ಪೃಥ್ವಿರಾಜ್’; ವಾರಾಣಸಿಯಲ್ಲಿ ಚಿತ್ರದ ಪ್ರಚಾರ
Image
Ilaiyaraaja Birthday: ಇಳಯರಾಜ ಜನ್ಮದಿನ; ವಿಶೇಷ ಕಾರ್ಯಕ್ರಮದ ಮೂಲಕ ಹುಟ್ಟುಹಬ್ಬ ಆಚರಿಸಲಿರುವ ಸಂಗೀತ ಮಾಂತ್ರಿಕ
Image
Sonakshi Sinha Birthday: ದಪ್ಪ ಎಂಬ ಕಾರಣಕ್ಕೆ ಸೋನಾಕ್ಷಿ ಸಿನ್ಹಾ ಎದುರಿಸಿದ ಟೀಕೆಗಳು ಒಂದೆರಡಲ್ಲ

ನಗುವ ನಯನ: ಮಣಿರತ್ನಂ ನಿರ್ದೇಶನದ ‘ಪಲ್ಲವಿ ಅನುಪಲ್ಲವಿ’ ಚಿತ್ರದ ‘ನಗುವ ನಯನ’ ಹಾಡು ಕೂಡ ಕನ್ನಡಿಗರ ಅಚ್ಚುಮೆಚ್ಚಿನ ಗೀತೆಗಳಲ್ಲೊಂದು. ಅನಿಲ್ ಕಪೂರ್, ಕಿರಣ್ ನಟಿಸಿದ್ದ ಈ ಚಿತ್ರದಲ್ಲಿ ನಟಿಸಿದ್ದರು. ಹಾಡಿಗೆ ಆರ್​ಎನ್ ಜಯಗೋಪಾಲ್ ಸಾಹಿತ್ಯ ಬರೆದಿದ್ದು, ಎಸ್​ಪಿಬಿ ಹಾಗೂ ಎಸ್ ಜಾನಕಿ ಗಾಯನ ಮಾಡಿದ್ದರು.

ಕೇಳದೆ ನಿಮಗೀಗ: ‘ಗೀತಾ’ ಚಿತ್ರದ ಈ ಹಾಡನ್ನು ಹಾಡಿದವರು ಎಸ್​ಪಿಬಿ. ಚಿ.ಉದಯಶಂಕರ್ ಸಾಹಿತ್ಯ ಬರೆದಿದ್ದರು. ಈ ಹಾಡನ್ನು ಪ್ರತಿ ಬಾರಿ ಕೇಳುವಾಗಲೂ ಶಂಕರ್​ ನಾಗ್ ಅವರ ನೆನಪು ಮತ್ತಷ್ಟು ಗಾಢವಾಗಿ ಕಾಡತೊಡಗುತ್ತದೆ.​​

ಜೀವ ಹೂವಾಗಿದೆ: ‘ನೀ ನನ್ನ ಗೆಲ್ಲಲಾರೆ’ ಚಿತ್ರದ ಈ ಹಾಡಿಗೆ ಡಾ.ರಾಜ್​ಕುಮಾರ್ ಹಾಗೂ ಎಸ್​.ಜಾನಕಿ ಧ್ವನಿ ನೀಡಿದ್ದರು. ಚಿ.ಉದಯಶಂಕರ್​ ಸಾಹಿತ್ಯ ಬರೆದಿದ್ದರು. ​​​ಚಿತ್ರದಲ್ಲಿ ಮಂಜುಳಾ ಹಾಗೂ ರಾಜ್​ಕುಮಾರ್ ಚಿತ್ರದಲ್ಲಿ ನಟಿಸಿದ್ದರು.

ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು: ಪ್ರಕಾಶ್ ರಾಜ್ ನಿರ್ದೇಶಿಸಿ ಅಭಿನಯಿಸಿರುವ ‘ಒಗ್ಗರಣೆ’ ಚಿತ್ರದ ಈ ಹಾಡನ್ನು ಕೈಲಾಶ್ ಖೇರ್ ಹಾಡಿದ್ದರು. ಈ ಹಾಡು ಕೂಡ ಎಲ್ಲರ ಮನಗೆದ್ದಿತ್ತು.

ಇದನ್ನೂ ಓದಿ: ಇಳಯರಾಜ ಜನ್ಮದಿನ; ವಿಶೇಷ ಕಾರ್ಯಕ್ರಮದ ಮೂಲಕ ಹುಟ್ಟುಹಬ್ಬ ಆಚರಿಸಲಿರುವ ಸಂಗೀತ ಮಾಂತ್ರಿಕ

ಇಲ್ಲಿ ನೀಡಲಾಗಿರುವುದು ಇಳಯರಾಜ ಸಂಗೀತ ನೀಡಿರುವ ಕೆಲವೇ ಕೆಲವು ಸೂಪರ್ ಹಿಟ್ ಹಾಡುಗಳನ್ನಷ್ಟೇ. ಇವುಗಳಲ್ಲದೇ ಇನ್ನೂ ಅನೇಕ ಹಾಡುಗಳು ಎಲ್ಲರ ಮನದಲ್ಲೂ ಹಸಿರಾಗಿವೆ. ‘ನಮ್ಮೂರ ಮಂದಾರ ಹೂವೆ’ ಚಿತ್ರದ ‘ಓಂಕಾರದಿ ಕಂಡೆ ಪ್ರೇಮ ನಾದವ’ ಸೇರಿದಂತೆ ಇತರ ಹಾಡುಗಳು, ‘ನಮ್ಮ ಪ್ರೀತಿಯ ರಾಮು’ ಚಿತ್ರದ ‘ನಾ ಕಾಣೊ ಲೋಕವನ್ನು’ ಗೀತೆ, ‘ಇದೊಳ್ಳೆ ರಾಮಾಯಣ’ ಚಿತ್ರದ ಶೀರ್ಷಿಕೆ ಗೀತೆ ಸೇರಿದಂತೆ ಹಲವು ಹಾಡುಗಳನ್ನು ಇಳಯರಾಜರ ಸಂಗೀತ ಮಾಂತ್ರಿಕತೆಗೆ ಉದಾಹರಣೆಯಾಗಿ ನೀಡಬಹುದು. ಅಂದಹಾಗೆ ಇಳಯರಾಜ ಸಂಗೀತ ನೀಡಿರುವ ನಿಮ್ಮಿಷ್ಟದ ಗೀತೆ ಯಾವುದು?

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ