Ilaiyaraaja Birthday: ಇಳಯರಾಜ ಜನ್ಮದಿನ; ವಿಶೇಷ ಕಾರ್ಯಕ್ರಮದ ಮೂಲಕ ಹುಟ್ಟುಹಬ್ಬ ಆಚರಿಸಲಿರುವ ಸಂಗೀತ ಮಾಂತ್ರಿಕ

Ilaiyaraaja Birthday Special: ಸಂಗೀತ ಮಾಂತ್ರಿಕ ಇಳಯರಾಜ ಜನ್ಮದಿನವಿಂದು. 1943ರ ಜೂನ್ 2ರಂದು ಜನಿಸಿದರ ಅವರು ಇದುವರೆಗೆ ಸುಮಾರು 1,500ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಅವರು ತಮ್ಮ ಜನ್ಮದಿನದಂದು ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Ilaiyaraaja Birthday: ಇಳಯರಾಜ ಜನ್ಮದಿನ; ವಿಶೇಷ ಕಾರ್ಯಕ್ರಮದ ಮೂಲಕ ಹುಟ್ಟುಹಬ್ಬ ಆಚರಿಸಲಿರುವ ಸಂಗೀತ ಮಾಂತ್ರಿಕ
ಇಳಯರಾಜ
Follow us
TV9 Web
| Updated By: shivaprasad.hs

Updated on: Jun 02, 2022 | 9:04 AM

ಇಂದು (ಜೂನ್ 2) ಸಂಗೀತ ಮಾಂತ್ರಿಕ ಇಳಯರಾಜ (Ilaiyaraaja Birthday) ಅವರ ಹುಟ್ಟುಹಬ್ಬ. ಜನ್ಮದಿನಕ್ಕೂ ಮುನ್ನಾದಿನ ಅಂದರೆ ಬುಧವಾರದಂದು ಇಳಯರಾಜ ಅವರು ವಿಶೇಷವಾಗಿ ಜನ್ಮದಿನ ಆಚರಿಸಿದ್ದಾರೆ. ಮೈಲಾಡುತುರೈ ಜಿಲ್ಲೆಯಿಂದ 18 ಕಿಲೋಮೀಟರ್ ದೂರದಲ್ಲಿರುವ ತಿರುಕಡೈಯೂರ್‌ನಲ್ಲಿರುವ ಅಮೃತಕಾಡೇಶ್ವರರ್ ಅಭಿರಾಮಿ ದೇವಸ್ಥಾನದಲ್ಲಿ ಅವರಿಗೆ ಸದಾಭಿಷೇಕ ಕಾರ್ಯಕ್ರಮ ನಡೆಯಿತು. ಇಳಯರಾಜ ಅವರ ಸಹೋದರ ಗಂಗೈ ಅಮರನ್ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು. ಇಳಯರಾಜ ಅವರ ಪುತ್ರ ಕಾರ್ತಿಕ್ ರಾಜಾ ಮತ್ತು ಇಳಯರಾಜ ಅವರ ಪುತ್ರಿ ಭವತಾರಿಣಿ ಕೂಡ ಇದ್ದರು. ಇಳಯರಾಜರ ಆತ್ಮೀಯ ಸ್ನೇಹಿತರಾದ ಚಲನಚಿತ್ರ ನಿರ್ಮಾಪಕ ಭಾರತಿರಾಜ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದಲ್ಲದೇ ಇಂದು ಜನ್ಮದಿನದ ಪ್ರಯುಕ್ತ ಇಳಯರಾಜ ಅವರ ಸಂಗೀತ ಕಚೇರಿಯನ್ನು ಆಯೋಜಿಸಲಾಗಿದ್ದು, ಅಪಾರ ಜನ ಸೇರುವ ನಿರೀಕ್ಷೆ ಇದೆ.

ಇಳಯರಾಜ ಜನ್ಮದಿನಕ್ಕೆ ವಿಶೇಷ ಕಾರ್ಯಕ್ರಮ:

ಇದನ್ನೂ ಓದಿ
Image
21 ನಗರಗಳಲ್ಲಿ ಪ್ರೀಮಿಯರ್​ ಆಗಲಿದೆ ‘777 ಚಾರ್ಲಿ’; ಹೊಸ ದಾಖಲೆ ಬರೆಯಲು ಸಜ್ಜಾದ ರಕ್ಷಿತ್​ ಶೆಟ್ಟಿ ಸಿನಿಮಾ
Image
KK Death: ಕೆಕೆ ನಿಧನಕ್ಕೆ ಪ್ರಾಥಮಿಕ ವೈದ್ಯಕೀಯ ವರದಿಯಲ್ಲಿ ಕಾರಣ ಬಹಿರಂಗ; ಇಂದು ಮುಂಬೈನಲ್ಲಿ ಖ್ಯಾತ ಗಾಯಕನ ಅಂತ್ಯಕ್ರಿಯೆ
Image
Best of Mani Ratnam: ಮಣಿರತ್ನಂ ಜನ್ಮದಿನ; ‘ಪಲ್ಲವಿ ಅನುಪಲ್ಲವಿ’ ನಿರ್ದೇಶಕನ ಈ 10 ಸೂಪರ್ ಹಿಟ್ ಸಿನಿಮಾಗಳನ್ನು ಮಿಸ್ ಮಾಡಲೇಬೇಡಿ 
Image
Pramod Shetty: ‘ರಕ್ಷಿತ್, ರಿಷಬ್’- ಈರ್ವರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡೋರು ಯಾರು? ಪ್ರಮೋದ್​ ಶೆಟ್ಟಿ ನೀಡಿದ್ರು ಉತ್ತರ

ತಮ್ಮ ಜನ್ಮದಿನದಂದು ಕೊಯಮತ್ತೂರಿನಲ್ಲಿ ಏರ್ಪಡಿಸಲಾಗಿರುವ ಸಂಗೀತ ಕಚೇರಿಯಲ್ಲಿ ಪ್ರದರ್ಶನ ನೀಡಲಿದ್ದಾರೆ. ಇಳಯರಾಜ ಮ್ಯೂಸಿಕ್ ಎನ್ ಮ್ಯಾನೇಜ್‌ಮೆಂಟ್ ಈ ಅದ್ಭುತ ಪ್ರದರ್ಶನದ ವಿವರಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದೆ. ಕೊಯಮತ್ತೂರಿನ ಕೊಡಿಸಿಯಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವು ಸಂಜೆ 6:00 ಗಂಟೆಗೆ ಪ್ರಾರಂಭವಾಗಲಿದೆ.

ಇಳಯರಾಜ ಕೂಡ ಇದೇ ಮಾಹಿತಿಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಹುಟ್ಟುಹಬ್ಬದಂದು ಕೊಯಮತ್ತೂರಿನಲ್ಲಿ ಪ್ರದರ್ಶನ ನೀಡಲು ಉತ್ಸುಕನಾಗಿದ್ದೇನೆ ಎಂದು ಅವರು ತಮ್ಮ ಫೇಸ್‌ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಆಯೋಜಕರ ಪ್ರಕಾರ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಇತರ ಗಾಯಕರು ಕೂಡ ಈ ಲೈವ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇಳಯರಾಜ ಅವರು ಇದುವರೆಗೆ ಸುಮಾರು 20,000ಕ್ಕೂ ಅಧಿಕ ಲೈವ್ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಕೊರೊನಾ ನಂತರ ಇಳಯರಾಜ ಮೊದಲ ಬಾರಿಗೆ ಲೈವ್ ಪ್ರದರ್ಶನ ನೀಡಿದ್ದು ಮಾರ್ಚ್​ನಲ್ಲಿ. ಚೆನ್ನೈನಲ್ಲಿ ನಡೆದಿದ್ದ ಆ ಕಾರ್ಯಕ್ರಮಕ್ಕೆ ಭಾರತದ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದರು. ಇದೀಗ ಕೊಯಮುತ್ತೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗಿಯಾಗುವ ನಿರೀಕ್ಷೆ ಇದೆ. ಜನ್ಮದಿನದಂದು ಕಾರ್ಯಕ್ರಮ ನೀಡುತ್ತಿರುವುದು ಇಳಯರಾಜ ಅವರಿಗೂ ವಿಶೇಷವಾಗಿರಲಿದೆ.

1,500ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಸ್ತುತ ಇಳಯರಾಜ ಸಂಗೀತ ನೀಡಿರುವ 6ಕ್ಕೂ ಅಧಿಕ ಚಿತ್ರಗಳು ಇನ್ನಷ್ಟೇ ತೆರೆಕಾಣಬೇಕಿದೆ. 7,000 ಸಾವಿರಕ್ಕೂ ಅಧಿಕ ಹಾಡುಗಳಿಗೆ ಸಂಗೀತ ಸಂಯೋಜಿಸಿರುವ ಇಳಯರಾಜ, ಈಗಲೂ ಚಿತ್ರರಂಗದಲ್ಲಿ ಸಖತ್ ಸಕ್ರಿಯರಾಗಿದ್ದಾರೆ. ತಮಿಳಿನಲ್ಲಿ ಮುಖ್ಯವಾಗಿ ಕೆಲಸ ಮಾಡಿದ್ದರೂ ಕೂಡ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಿಟ್ ಗೀತೆಗಳನ್ನು ಅವರು ನೀಡಿದ್ದಾರೆ. ಜನರ ಮನಸೂರೆಗೊಂಡು, ಎಂದಿಗೂ ಗುನುಗುವಂತಹ ಗೀತೆಗಳನ್ನು ನೀಡಿದ ಇಳಯರಾಜ ಅವರ ಜನ್ಮದಿನಕ್ಕೆ ನಾಡಿನ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬರುತ್ತಿವೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ